ರೋಹಿತ್ ಇರುವುದಕ್ಕೆ ಕೊಹ್ಲಿ ಅಂತರಾಷ್ಟ್ರೀಯ ಕ್ರಿಕೆಟ್​ನ ಶ್ರೇಷ್ಠ ನಾಯಕ ಎಂದ ಭಾರತೀಯ ಕ್ರಿಕೆಟಿಗ

ರೋಹಿತ್ ತಂಡದಲ್ಲಿರುವುದಕ್ಕೆ ಕೊಹ್ಲಿ ಶ್ರೇಷ್ಠ ನಾಯಕನಾಗಿ ಗುರುತಿಸಿಕೊಂಡಿದ್ದಾರೆ. ಅಲ್ಲದೆ ಎಂಎಸ್ ಧೋನಿ ಕೂಡ ಅನೇಕ ಸಮಯದಿಂದ ಕೊಹ್ಲಿ ಬೆನ್ನಿಗೆ ನಿಂತಿದ್ದಾರೆ. ಇದು ಅಂತರಾಷ್ಟ್ರೀಯ ಕ್ರಿಕೆಟ್​ನಲ್ಲಿ ಕೊಹ್ಲಿ ನಾಯಕತ್ವದ ಯಶಸ್ಸಿನ ಗುಟ್ಟು- ಗಂಭೀರ್

Vinay Bhat | news18-kannada
Updated:September 21, 2019, 12:53 PM IST
ರೋಹಿತ್ ಇರುವುದಕ್ಕೆ ಕೊಹ್ಲಿ ಅಂತರಾಷ್ಟ್ರೀಯ ಕ್ರಿಕೆಟ್​ನ ಶ್ರೇಷ್ಠ ನಾಯಕ ಎಂದ ಭಾರತೀಯ ಕ್ರಿಕೆಟಿಗ
ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ
  • Share this:
ಬೆಂಗಳೂರು (ಸೆ. 21): ನಾಯಕ ವಿರಾಟ್ ಕೊಹ್ಲಿ ಏಕಾಂಗಿಯಾಗಿ ನಿಂತು ಬ್ಯಾಟ್ ಬೀಸಿ ಟೀಂ ಇಂಡಿಯಾಕ್ಕೆ ಅದೆಷ್ಟೊ ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ. ಇದಕ್ಕೆ ಕೊಹ್ಲಿ ಈವರೆಗೆ ಕಲೆಹಾಕಿರುವ ರನ್​​ಗಳೇ ಸಾಕ್ಷಿ. ದ. ಆಫ್ರಿಕಾ ವಿರುದ್ಧದ ಎರಡನೇ ಟಿ-20 ಪಂದ್ಯದಲ್ಲು ಕೊಹ್ಲಿ ಅಜೇಯ 72 ರನ್ ಬಾರಿಸಿ ತಂಡಕ್ಕೆ ಗೆಲುವು ತಂದಿಟ್ಟಿದ್ದರು.

ಕೊಹ್ಲಿ ಬ್ಯಾಟಿಂಗ್ ಬಗ್ಗೆ ಎರಡು ಮಾತಿಲ್ಲ. ಆದರೆ, ಕೊಹ್ಲಿ ನಾಯಕತ್ವದ ಬಗ್ಗೆ ಈ ಹಿಂದೆ ಅನೇಕರು ಪ್ರಶ್ನೆ ಮಾಡಿದ್ದರು. ಸದ್ಯ ಟೀಂ ಇಂಡಿಯಾದ ಮಾಜಿ ಆರಂಭಿಕ ಆಟಗಾರ ಗೌತಮ್ ಗಂಭೀರ್ ಕೂಡ ಇದೇ ವಿಚಾರವಾಗಿ ಅಭಿಪ್ರಾಯ ಹೊರ ಹಾಕಿದ್ದಾರೆ.

Gautam Gambhir takes a dig at Virat Kohli’s captaincy, says ‘he only does well because of MS Dhoni and Rohit Sharma’
ಗೌತಮ್ ಗಂಭೀರ್, ಟೀಂ ಇಂಡಿಯಾ ಮಾಜಿ ಆಟಗಾರ


'ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಇನ್ನಷ್ಟು ಪಳಗಬೇಕಿದೆ. ಇಂಗ್ಲೆಂಡ್​ನಲ್ಲಿ ನಡೆದ ವಿಶ್ವಕಪ್​ನಲ್ಲಿ ಕೊಹ್ಲಿ ನಾಯಕನಾಗಿ ತಂಡವನ್ನು ಉತ್ತಮವಾಗಿ ಮುನ್ನಡೆಸಿದರು. ಅಂತರಾಷ್ಟ್ರೀಯ ಕ್ರಿಕೆಟ್​ನಲ್ಲಿ ಕೊಹ್ಲಿ ಕ್ಯಾಪ್ಟನ್ ಆಗಿ ಯಶಸ್ಸು ಸಾಧಿಸುತ್ತಾರೆ. ಇದಕ್ಕೆ ಕಾರಣ ರೋಹಿತ್ ಶರ್ಮಾ'

ನಿವೃತ್ತಿ ಪಂದ್ಯದಲ್ಲಿ ಅಬ್ಬರಿಸಿ ಬೊಬ್ಬಿರಿದ ಜಿಂಬಾಬ್ವೆ ನಾಯಕ; 18 ವರ್ಷಗಳ ಕ್ರಿಕೆಟ್ ಬದುಕಿಗೆ ಮಸಕಜ ವಿದಾಯ!

'ರೋಹಿತ್ ತಂಡದಲ್ಲಿರುವುದಕ್ಕೆ ಕೊಹ್ಲಿ ಶ್ರೇಷ್ಠ ನಾಯಕನಾಗಿ ಗುರುತಿಸಿಕೊಂಡಿದ್ದಾರೆ. ಅಲ್ಲದೆ ಎಂಎಸ್ ಧೋನಿ ಕೂಡ ಅನೇಕ ಸಮಯದಿಂದ ಕೊಹ್ಲಿ ಬೆನ್ನಿಗೆ ನಿಂತಿದ್ದಾರೆ. ಇದು ಅಂತರಾಷ್ಟ್ರೀಯ ಕ್ರಿಕೆಟ್​ನಲ್ಲಿ ಕೊಹ್ಲಿ ನಾಯಕತ್ವದ ಯಶಸ್ಸಿನ ಗುಟ್ಟು'

'ನಾಯಕನಾಗಿ ಮುನ್ನಡೆಸುತ್ತಿರುವಾಗ ಅವನಿಗೆ ತಂಡದಲ್ಲಿನ ಇತರೆ ಆಟಗಾರರ ಬೆಂಬಲ ಬೇಕು. ಇದಕ್ಕೆ ನಮ್ಮ ಕಣ್ಣೆದರೆ ಸಾಕ್ಷಿಗಳಿವೆ. ಐಪಿಎಲ್​ನಲ್ಲಿ ರೋಹಿತ್ ಶರ್ಮಾ ನಾಯಕನಾಗಿ ಮುಂಬೈ ಇಂಡಿಯನ್ಸ್​ ತಂಡದಲ್ಲಿ ಮಾಡಿರುವ ಸಾಧನೆ ಹಾಗೂ ಎಂ ಎಸ್ ಧೋನಿ ಚೆನ್ನೈ ಸೂಪರ್ ಕಿಂಗ್ಸ್​ ತಂಡದಲ್ಲಿ ಮಾಡಿರುವ ಸಾಧನೆ ಅದ್ಭುತ. ಇವರಿಗೆ ಹೋಲಿಕೆ ಮಾಡಿದರೆ ಆರ್​ಸಿಬಿ ತಂಡದಲ್ಲಿ ಕೊಹ್ಲಿ ಸಾಧನೆ ಎಲ್ಲರಿಗೂ ತಿಳಿದಿದೆ' ಎಂದು ಗಂಭೀರ್ ಹೇಳಿದ್ದಾರೆ.
First published:September 21, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading