HOME » NEWS » Sports » CRICKET GAUTAM GAMBHIR POINTS OUT 2 REASONS BEHIND MUMBAI INDIANS SUCCESS IN IPL SO FAR HG

Gautam Gambhir: ಗೌತಮ್ ಗಂಭೀರ್ ಪ್ರಕಾರ ಐಪಿಎಲ್​ನಲ್ಲಿ ಬಲಿಷ್ಠ ತಂಡ ಯಾವುದು ಗೊತ್ತಾ?

Mumbai Indians: ಸ್ಟಾರ್​​ ಸ್ಟೋಟ್ಸ್​​ ಕ್ರಿಕೆಟ್​ನಲ್ಲಿ ಮಾತನಾಡಿದ ಗೌತಮ್​ ಗಂಭೀರ್​​ ಮುಂಬೈ ಇಂಡಿಯನ್ಸ್​ ತಂಡದ ಕುರಿತ ಕೆಲ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಮುಂಬೈ ಇಂಡಿಯನ್ಸ್​ ತಂಡ ಐಪಿಎಲ್​​ನಲ್ಲಿ ಭಾವನೆಗಳ ಆಧಾರದ ಮೇಲೆ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ಅರ್ಥವಾಗ ಗಟ್ಟಿ ನಿರ್ಧಾರದ ಮೊರೆಹೋಗುತ್ತಾರೆ. ಹಾಗಾಗಿ ತಂಡದ ಯಶಸ್ವಿಗೆ ಪ್ರಾಕ್ಟಿಕಲ್​ ಡಿಸಿಷನ್​​​ ಕಾರಣವಾಗಿದೆ ಎಂದು ಹೇಳಿದ್ದಾರೆ.

news18-kannada
Updated:May 18, 2020, 6:19 PM IST
Gautam Gambhir: ಗೌತಮ್ ಗಂಭೀರ್ ಪ್ರಕಾರ ಐಪಿಎಲ್​ನಲ್ಲಿ ಬಲಿಷ್ಠ ತಂಡ ಯಾವುದು ಗೊತ್ತಾ?
ಗೌತಮ್​ ಗಂಭೀರ್​​
  • Share this:
ಟೀಂ ಇಂಡಿಯಾದ ಮಾಜಿ ಆಟಗಾರ ಗೌತಮ್​ ಗಂಭೀರ್​​​ ಐಪಿಎಲ್​ನಲ್ಲಿ ಮುಂಬೈ ಇಂಡಿಯನ್ಸ್​​ ತಂಡ ಯಶಸ್ಸು ಸಾಧಿಸಲು ಪ್ರಮುಖ ಕಾರಣ ಏನು ಎಂಬುವುದನ್ನು ಬಿಚ್ಚಿಟ್ಟಿದ್ದಾರೆ. ಐಪಿಎಲ್​ನಲ್ಲಿ ಬಲಿಷ್ಠ ತಂಡಗಳ ಪೈಕಿ ಮುಂಬೈ ತಂಡವು ಕೂಡ ಒಂದ್ದಾಗಿದ್ದು, 4 ಬಾರಿ ಚಾಂಪಿಯನ್​​ ಪಟ್ಟ ಅಲಂಕರಿಸಿದೆ. ಟಿ-20 ಚಾಂಪಿಯನ್ ಟ್ರೋಫಿಯಲ್ಲೂ 2 ಬಾರಿ ಪ್ರಶಸ್ತಿ ಗೆದ್ದು ಸಾಧನೆ ಮಾಡಿತ್ತು.

ಸ್ಟಾರ್​​ ಸ್ಟೋಟ್ಸ್​​ ಕ್ರಿಕೆಟ್​ನಲ್ಲಿ ಮಾತನಾಡಿದ ಗೌತಮ್​ ಗಂಭೀರ್​​ ಮುಂಬೈ ಇಂಡಿಯನ್ಸ್​ ತಂಡದ ಕುರಿತ ಕೆಲ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಮುಂಬೈ ಇಂಡಿಯನ್ಸ್​ ತಂಡ ಐಪಿಎಲ್​​ನಲ್ಲಿ ಭಾವನೆಗಳ ಆಧಾರದ ಮೇಲೆ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ಅರ್ಥವಾಗ ಗಟ್ಟಿ ನಿರ್ಧಾರದ ಮೊರೆಹೋಗುತ್ತಾರೆ. ಹಾಗಾಗಿ ತಂಡದ ಯಶಸ್ವಿಗೆ ಪ್ರಾಕ್ಟಿಕಲ್​ ಡಿಸಿಷನ್​​​ ಕಾರಣವಾಗಿದೆ ಎಂದು ಹೇಳಿದ್ದಾರೆ.

2013ರಲ್ಲಿ ನಡೆದ ಐಪಿಎಲ್​ ಪಂದ್ಯವನ್ನು ಉದಾಹರಣೆಯಾಗಿ ತೆಗೆದುಕೊಂಡ ಗಂಭೀರ್, ಮುಂಬೈ ಇಂಡಿಯನ್ಸ್​​​ ತಂಡದಲ್ಲಿ ರಿಕಿ ಪಾಂಟಿಂಗ್​ ನಂತರ ರೋಹಿತ್​ ಶರ್ಮಾ ಅವರನ್ನು ನಾಯಕನಾಗುವಂತೆ ತಂಡ ಬಯಸಿತ್ತು. ಹಾಗಾಗಿ ರೋಹಿತ್​ಗೆ ನಾಯಕತ್ವ ದೊರಕಿತು. ಮತ್ತೊಂದೆಡೆ ತಂಡ ಯಂಗ್​​​ಸ್ಟರ್​​ಗಳಿಂದ ತುಂಬಿದೆ. ಜಸ್ಪೀತ್​ ಬೂಮ್ರಾ, ಹಾರ್ದಿಕ್​ ಪಾಂಡ್ಯಾ ಮತ್ತು ಕ್ರುನಾಲ್​ ಪಾಂಡ್ಯ ಅವರಿಗೆ ಅವಕಾಶವನ್ನು ರೋಹಿತ್​ ನೀಡಿದ್ದರು. ಹಾಗಾಗಿ ಐಪಿಎಲ್​ನಲ್ಲಿ ಈವರೆಗೆ ಕಂಡ ಪ್ರಬಲ ತಂಡಗಳಲ್ಲಿ ಪೈಕಿ ಮುಂಬೈಇಂಡಿಯನ್ಸ್​ ಎಂದು ನಂಬಿದ್ದೇನೆ ಎಂದರು.

ಅಪರೂಪದ ಕಾಯಿಲೆ ಬಗ್ಗೆ ಹೇಳಿಕೊಂಡ ನಟಿ ಸುಶ್ಮಿತಾ ಸೇನ್​!
First published: May 18, 2020, 6:19 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories