ಯುವರಾಜ್ ಜೆರ್ಸಿ ನಂಬರ್ 12 ಅನ್ನು ನಿವೃತ್ತಿಯೆಂದು ಘೋಷಿಸಿ; ಬಿಸಿಸಿಗೆ ಗಂಭೀರ್ ಮನವಿ

2007ರ ವಿಶ್ವಕಪ್ ಟಿ-20 ಹಾಗೂ 2011 ರಲ್ಲಿ ಯುವರಾಜ್ ಅವರು ನೀಡಿದ ಅತ್ಯುತ್ತಮ ಪ್ರದರ್ಶನವನ್ನು ಗಮನಿಸಿ ಬಿಸಿಸಿಐ ಯುವಿ ಅವರ ಜೆರ್ಸಿ ನಂಬರ್ 12 ಅನ್ನು ನಿವೃತ್ತಿಯೆಂದು ಘೋಷಿಸಬೇಕು- ಗೌತಮ್ ಗಂಭೀರ್

Vinay Bhat | news18india
Updated:September 23, 2019, 10:56 AM IST
ಯುವರಾಜ್ ಜೆರ್ಸಿ ನಂಬರ್ 12 ಅನ್ನು ನಿವೃತ್ತಿಯೆಂದು ಘೋಷಿಸಿ; ಬಿಸಿಸಿಗೆ ಗಂಭೀರ್ ಮನವಿ
ಯುವರಾಜ್ ಸಿಂಗ್
  • Share this:
ಬೆಂಗಳೂರು (ಸೆ. 23): ಟೀಂ ಇಂಡಿಯಾ ಮಾಜಿ ಆರಂಭಿಕ ಆಟಗಾರ ಗೌತಮ್ ಗಂಭೀರ್ ಅವರು ಯುವರಾಜ್ ಸಿಂಗ್ ಜೆರ್ಸಿ ನಿವೃತ್ತಿಯೆಂದು ಘೋಷಿಸುವಂತೆ ಬಿಸಿಸಿಐಗೆ ವಿಶೇಷವಾಗಿ ಮನವಿ ಮಾಡಿದ್ದಾರೆ.

2007ರ ವಿಶ್ವಕಪ್ ಟಿ-20 ಹಾಗೂ 2011ರ ಏಕದಿನ ವಿಶ್ವಕಪ್ ಗೆಲುವಿಗೆ ಪ್ರಮುಖ ಕಾರಣರಾಗಿದ್ದ ಮಾಜಿ ಸ್ಫೋಟಕ ಬ್ಯಾಟ್ಸ್‌ಮನ್ ಯುವರಾಜ್ ಸಿಂಗ್ ಅವರನ್ನು ಸ್ಮರಿಸಿಕೊಂಡಿರುವ ಗಂಭೀರ್  ದಯವಿಟ್ಟು ಆ ಜೆರ್ಸಿ ನಂಬರ್ 12 ಅನ್ನು ಬೇರೆ ಯಾವ ಆಟಗಾರರಿಗೂ ನೀಡದಂತೆ ಮನವಿ ಮಾಡಿಕೊಂಡಿದ್ದಾರೆ.

ಚೇಸಿಂಗ್ ಪಿಚ್​ನಲ್ಲಿ ಕೊಹ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಯಾಕೆ?; ನಾಯಕ ನೀಡಿದ ಸ್ಪಷ್ಟನೆ ಏನು ಗೊತ್ತಾ?

'ಸೆಪ್ಟೆಂಬರ್ ತಿಂಗಳೂ ಬಂದಕೂಡಲೇ ನನಗೆ ವಿಶೇಷ ಭಾವನೆ ಮೂಡುತ್ತದೆ. ಈ ತಿಂಗಳನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. 2007ರ ಇದೇ ತಿಂಗಳು ನಾವು ಐಸಿಸಿ ಟಿ-20 ವಿಶ್ವಕಪ್ ಗೆದ್ದು ಬೀಗಿದ್ದೆವು. ಇದಕ್ಕೆ ಯುವರಾಜ್ ಸಿಂಗ್ ಪ್ರಮುಖ ಕಾರಣ'

'2007ರ ವಿಶ್ವಕಪ್ ಟಿ-20 ಹಾಗೂ 2011 ರಲ್ಲಿ ಯುವರಾಜ್ ಅವರು ನೀಡಿದ ಅತ್ಯುತ್ತಮ ಪ್ರದರ್ಶನವನ್ನು ಗಮನಿಸಿ ಬಿಸಿಸಿಐ ಯುವಿ ಅವರ ಜೆರ್ಸಿ ನಂಬರ್ 12 ಅನ್ನು ನಿವೃತ್ತಿಯೆಂದು ಘೋಷಿಸಬೇಕು. ಅದು ಜೀವನದಲ್ಲಿ ಒಬ್ಬ ಕ್ರಿಕೆಟಿಗನಿಗೆ ಸಲ್ಲಿಸುವ ಗೌರವ' ಎಂದು ಗಂಭೀರ್ ಹೇಳಿದ್ದಾರೆ.

First published: September 23, 2019, 10:56 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading