HOME » NEWS » Sports » CRICKET GAUTAM GAMBHIR NO SIXTH BOWLING OPTION IN TEAM INDIA SINCE 2019 WC SAYS GAUTAM GAMBHIR ZP

Gautam Gambhir: ಟೀಮ್ ಇಂಡಿಯಾ ಸೋಲಿಗೆ ಮುಖ್ಯ ಕಾರಣ ತಿಳಿಸಿದ ಗೌತಮ್ ಗಂಭೀರ್

2ನೇ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ 7 ಬೌಲರುಗಳನ್ನು ಪರೀಕ್ಷಿಸಿದ್ದರು. 2019ರ ವಿಶ್ವಕಪ್ ಬಳಿಕ ಬೌಲಿಂಗ್ ಮಾಡದಿದ್ದ ಹಾರ್ದಿಕ್ ಪಾಂಡ್ಯ ಭಾನುವಾರ ಬೌಲ್ ಮಾಡಿದ್ದರು.

news18-kannada
Updated:November 30, 2020, 8:14 AM IST
Gautam Gambhir: ಟೀಮ್ ಇಂಡಿಯಾ ಸೋಲಿಗೆ ಮುಖ್ಯ ಕಾರಣ ತಿಳಿಸಿದ ಗೌತಮ್ ಗಂಭೀರ್
Gautam Gambhir
  • Share this:
ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಟೀಮ್ ಇಂಡಿಯಾ ಸತತ ಎರಡು ಸೋಲು ಕಂಡಿದೆ. ಮೊದಲ ಪಂದ್ಯದಲ್ಲಿ 66 ರನ್​ಗಳಿಂದ ಹೀನಾಯ ಸೋಲನುಭವಿಸಿದರೆ, 2ನೇ ಪಂದ್ಯದಲ್ಲಿ 51 ರನ್​ಗಳಿಂದ ಮುಗ್ಗರಿಸಿತು. ಇದರೊಂದಿಗೆ 3 ಪಂದ್ಯಗಳ ಸರಣಿಯನ್ನು ಆಸ್ಟ್ರೇಲಿಯಾ ತನ್ನದಾಗಿಸಿಕೊಂಡಿದೆ. ಪ್ರತಿಷ್ಠಿತ ಪಂದ್ಯದಲ್ಲಿ ಟೀಮ್ ಇಂಡಿಯಾ ಸೋಲಿಗೆ ಕಾರಣವಾಗಿರುವ ಮುಖ್ಯ ಅಂಶಗಳೇನು ಎಂಬುದರ ಬಗ್ಗೆ ಭಾರತ ತಂಡದ ಮಾಜಿ ಆರಂಭಿಕ ಆಟಗಾರ ಗೌತಮ್ ಗಂಭೀರ್ ಬೆಳಕು ಚೆಲ್ಲಿದ್ದಾರೆ.

ಶುಕ್ರವಾರ ಸಿಡ್ನಿ ಕ್ರಿಕೆಟ್‌ ಮೈದಾನದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡ 66 ರನ್‌ಗಳಿಂದ ಸೋಲನುಭವಿಸಿತು. ಈ ಬಗ್ಗೆ ಮಾತನಾಡಿರುವ ಗಂಭೀರ್, ಟೀಮ್ ಇಂಡಿಯಾಗೆ 6ನೇ ಬೌಲರ್​ ಕೊರತೆ ಕಾಡುತ್ತಿದೆ. 2019ರ ವಿಶ್ವಕಪ್‌ನಿಂದ ಭಾರತಕ್ಕೆ ಈ ಸಮಸ್ಯೆ ಕಾಡುತ್ತಿದೆ. ಹಾರ್ದಿಕ್‌ ಪಾಂಡ್ಯ ಬೌಲಿಂಗ್‌ ಮಾಡದಿದ್ದರೆ, ಆರನೇ ಬೌಲರ್ ಯಾರು? ಎಂಬ ಪ್ರಶ್ನೆಗೆ ಉತ್ತರವಿಲ್ಲ. ಒಂದು ವೇಳೆ ರೋಹಿತ್ ಶರ್ಮಾ ತಂಡಕ್ಕೆ ಮರಳಿದರೂ ಈ ಸಮಸ್ಯೆ ಕಾಡಲಿದೆ ಎಂದು ಗಂಭೀರ್ ತಿಳಿಸಿದರು.

ಆಸ್ಟ್ರೇಲಿಯಾ ತಂಡದಲ್ಲಿ, ಮೊಯಿಸಿಸ್ ಹೆನ್ರಿಕ್ಸ್ ಹಾಗೂ ಶೇನ್‌ ಅಬಾಟ್‌ ಅವರಂಥ ಬೌಲಿಂಗ್‌ ಆಲ್‌ರೌಂಡರ್‌ಗಳಿದ್ದಾರೆ. ಅದೇ ಭಾರತದಲ್ಲಿ ಹಾರ್ದಿಕ್‌ ಪಾಂಡ್ಯ ಮಾತ್ರ ಇದ್ದಾರೆ. ಆದರೆ ಅವರು ಬೌಲಿಂಗ್‌ ಮಾಡುವುದಿಲ್ಲ ಎಂದಾದರೆ, ಮತ್ತೊಬ್ಬ ಬೌಲರ್ ಆಯ್ಕೆ ಯಾರು? ಮತ್ತೊಬ್ಬ ಆಲ್‌ರೌಂಡರ್‌ ವಿಜಯ್‌ ಶಂಕರ್‌ ಅವರಿದ್ದಾರೆ. ಅವರು ಬ್ಯಾಟಿಂಗ್‌ 5 ಅಥವಾ 6ನೇ ಕ್ರಮಾಂಕದಲ್ಲಿ ಆಡಿ, ಎಂಟು ಓವರ್‌ಗಳು ಉತ್ತಮವಾಗಿ ಬೌಲಿಂಗ್‌ ಮಾಡಬಲ್ಲರೇ? ಈ ಬಗ್ಗೆ ನನ್ನಲ್ಲಿ ಅನುಮಾನಗಳಿವೆ ಎಂದು ಗಂಭೀರ್ ತಿಳಿಸಿದರು.

ಒಟ್ಟಿನಲ್ಲಿ ಟೀಮ್ ಇಂಡಿಯಾಗೆ ಅತ್ಯುತ್ತಮ ಆಲ್​ರೌಂಡರ್ ಬೌಲರುಗಳ ಅವಶ್ಯಕತೆಯಿದೆ. ಆರನೇ ಬೌಲರುಗಳ ಕೊರತೆಯೇ ಟೀಮ್ ಇಂಡಿಯಾ ಸೋಲಿಗೆ ಕಾರಣವಾಗುತ್ತಿದೆ ಎಂದು ಗೌತಮ್ ಗಂಭೀರ್ ತಿಳಿಸಿದರು.

ಇನ್ನು 2ನೇ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ 7 ಬೌಲರುಗಳನ್ನು ಪರೀಕ್ಷಿಸಿದ್ದರು. 2019ರ ವಿಶ್ವಕಪ್ ಬಳಿಕ ಬೌಲಿಂಗ್ ಮಾಡದಿದ್ದ ಹಾರ್ದಿಕ್ ಪಾಂಡ್ಯ ಭಾನುವಾರ ಬೌಲ್ ಮಾಡಿ 4 ಓವರ್​ನಲ್ಲಿ 24 ರನ್ ನೀಡಿ 1 ವಿಕೆಟ್ ಪಡೆದರು. ಅಲ್ಲದೆ 7ನೇ ಬೌಲರ್ ಆಗಿ ಮಯಾಂಕ್ ಅಗರ್ವಾಲ್ 1 ಓವರ್ ಎಸೆದು 10 ರನ್ ನೀಡಿದ್ದರು. ಇದಾಗ್ಯೂ 7 ಬೌಲರುಗಳನ್ನು ಬಳಸಿ ಆಸ್ಟ್ರೇಲಿಯಾ ಬ್ಯಾಟ್ಸ್​ಮನ್​ಗಳನ್ನು ಕಟ್ಟಿಹಾಕುವ ವಿರಾಟ್ ಕೊಹ್ಲಿ ಅವರ ಪ್ಲ್ಯಾನ್ ಫಲ ಕೊಡಲಿಲ್ಲ.

ಇದನ್ನೂ ಓದಿ: ರಾಹುಲ್‌, ಪಂತ್, ಸಂಜು, ಸಾಹ ಇವರಲ್ಲಿ ಇಬ್ಬರು ಬೆಸ್ಟ್‌ ಕೀಪರ್‌ಗಳನ್ನು ಹೆಸರಿಸಿದ ಗಂಗೂಲಿ..!
Published by: zahir
First published: November 29, 2020, 10:06 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading