ದಸರ ಹಬ್ಬಕ್ಕೆ ಕ್ರೀಡಾಪಟುಗಳಿಂದ ಶುಭಾಶಯ; ಮಗಳಿಂದ ಆಶೀರ್ವಾದ ಪಡೆದ ಗಂಭೀರ್!

ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಮಗಳ ಪಾದ ತೊಳೆದು, ಆಶೀರ್ವಾದ ಪಡೆದು ದಸರಾ ಹಬ್ಬದವನ್ನು ವಿಶೇಷವಾಗಿ ಆಚರಣೆ ಮಾಡಿದ್ದಾರೆ.

Vinay Bhat | news18-kannada
Updated:October 8, 2019, 3:44 PM IST
ದಸರ ಹಬ್ಬಕ್ಕೆ ಕ್ರೀಡಾಪಟುಗಳಿಂದ ಶುಭಾಶಯ; ಮಗಳಿಂದ ಆಶೀರ್ವಾದ ಪಡೆದ ಗಂಭೀರ್!
ಗೌತಮ್ ಗಂಭೀರ್
  • Share this:
ಬೆಂಗಳೂರು (ಅ. 08): ದೇಶಾದ್ಯಂತ ದಸರಾವನ್ನು ವಿಭಿನ್ನವಾಗಿ ಆಚರಣೆ ಮಾಡಲಾಗುತ್ತಿದೆ. ನವರಾತ್ರಿಯ 9 ದಿನಗಳ ಕಾಲ ದೇಶದ ವಿವಿಧ ಪ್ರದೇಶಗಳಲ್ಲಿ ದುರ್ಗಾ ಮಾತಾ ದೌಡ್ ವಿಶೇಷವಾಗಿ ಗಮನ ಸೆಳೆಯುತ್ತಿದೆ.

ಇತ್ತ ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಜಂಬೂ ಸವಾರಿಗೆ ಕ್ಷಣಗಣನೆ ಶುರುವಾಗಿದೆ. ದಸರಾ ಸಂಭ್ರಮ ಕೊನೆ ದಿನ, ಸಾಂಸ್ಕೃತಿಕ ನಗರಿಯಲ್ಲಿ ಸಂಭ್ರಮ ಕಳೆಗಟ್ಟಿದೆ. ಅರಮನೆ ನಗರಿ ಮೈಸೂರು ಕಂಗೊಳಿಸುತ್ತಿದೆ. ಇಂದು ಸಂಜೆ 4 ಗಂಟೆಗೆ ಸಿಎಂ ಬಿ.ಎಸ್​.ಯಡಿಯೂರಪ್ಪ ದಸರಾ ಮಹೋತ್ಸವದ ಆಕರ್ಷಣೆಯಾದ ಜಂಬೂ ಸವಾರಿಗೆ ಅಧಿಕೃತ ಚಾಲನೆ ನೀಡಲಿದ್ದಾರೆ.

IND vs SA: ಪುಣೆಗೆ ಬಂದಿಳಿದ ಟೀಂ ಇಂಡಿಯಾ ಆಟಗಾರರು; 2ನೇ ಟೆಸ್ಟ್​ಗೆ ಕಠಿಣ ಅಭ್ಯಾಸ

ಈ ನಡುವೆ ದಸರಾ ಹಬ್ಬಕ್ಕೆ ಕ್ರೀಡಾಪಟುಗಳು ಶುಭಕೋರಿದ್ದಾರೆ. ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಈ ಹಬ್ಬವು ನಮ್ಮೆಲ್ಲರ ಜೀವನದಲ್ಲಿ ಉತ್ತಮ ಆರೋಗ್ಯ, ಖುಷಿ ಹಾಗೂ ಯಶಸ್ಸನ್ನು ತರಲಿ ಎಂದು ಹಾರೈಸಿದ್ದಾರೆ.

 ಇವರ ಜೊತೆಗೆ ವಿರೇಂದ್ರ ಸೆಹ್ವಾಗ್, ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ, ಹರ್ಭಜನ್ ಸಿಂಗ್, ಪೂಜಾರ, ಮಯಾಂಗ್ ಅಗರ್ವಾಲ್ ಸೇರಿ ಅನೇಕರು ಟ್ವಿಟ್ಟರ್​ ಮೂಲಕ ವಿಶ್ ಮಾಡಿದ್ದಾರೆ.

 

ಅದರಲ್ಲು ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಮಗಳ ಪಾದ ತೊಳೆದು, ಆಶೀರ್ವಾದ ಪಡೆದು ದಸರಾ ಹಬ್ಬದವನ್ನು ವಿಶೇಷವಾಗಿ ಆಚರಣೆ ಮಾಡಿದ್ದಾರೆ.

  

First published: October 8, 2019, 3:44 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading