Gautam Gambhir: ಮತ್ತೊಮ್ಮೆ ವಿರಾಟ್ ಕೊಹ್ಲಿ ವಿರುದ್ಧ ಟೀಕಾಸ್ತ್ರ ಪ್ರಯೋಗಿಸಿದ ಗೌತಮ್ ಗಂಭೀರ್..!

ಈ ಹಿಂದೆ ಐಪಿಎಲ್​ನಲ್ಲಿ ಸತತ 8 ವರ್ಷಗಳಿಂದ ಕಪ್ ಗೆಲ್ಲಲು ವಿಫಲರಾದ ವಿರಾಟ್ ಕೊಹ್ಲಿಯನ್ನು ನಾಯಕತ್ವದಿಂದ ತೆಗೆದು ಹಾಕುವಂತೆ ಆಗ್ರಹಿಸಿದ್ದರು. ಅವರು ತಂಡವನ್ನು ಮುನ್ನಡೆಸಲು ಅಸಮರ್ಥರು ಎಂಬುದಕ್ಕೆ ಇದುವರೆಗೆ ಕಪ್ ಗೆಲ್ಲದಿರುವುದೇ ಸಾಕ್ಷಿ ಎಂದು ಗೌತಮ್ ಗಂಭೀರ್ ತಿಳಿಸಿದ್ದರು.

Gautam Gambhir-Virat Kohli

Gautam Gambhir-Virat Kohli

  • Share this:
    ಆಸ್ಟ್ರೇಲಿಯಾ ವಿರುದ್ಧ ಸತತ ಎರಡು ಪಂದ್ಯಗಳನ್ನು ಸೋಲುವ ಮೂಲಕ ಟೀಮ್ ಇಂಡಿಯಾ ಏಕದಿನ ಸರಣಿಯನ್ನು ಕೈಚೆಲ್ಲಿಕೊಂಡಿದೆ. ಮೊದಲ ಪಂದ್ಯದಲ್ಲಿ 66 ರನ್​ಗಳ ಹೀನಾಯ ಸೋಲನುಭವಿಸಿದರೆ, 2ನೇ ಪಂದ್ಯದಲ್ಲಿ 51 ರನ್​ಗಳ ಪರಾಜಯಗೊಂಡಿತು. ಈ ಎರಡು ಪಂದ್ಯಗಳಲ್ಲೂ ಭಾರತದ ಸೋಲಿಗೆ ಮುಖ್ಯ ಕಾರಣವಾಗಿದ್ದು ಬೌಲಿಂಗ್ ವೈಫಲ್ಯ. ಇದಕ್ಕೆ ಕಾರಣ ವಿರಾಟ್ ಕೊಹ್ಲಿ ನಾಯಕತ್ವ ಎಂಬ ಟೀಕೆಗಳು ಕೇಳಿ ಬರುತ್ತಿವೆ. ಟೀಮ್ ಇಂಡಿಯಾ ಸೋಲಿನ ಬೆನ್ನಲ್ಲೇ ಮಾಜಿ ಆಟಗಾರ ಗೌತಮ್ ಗಂಭೀರ್ ಕೊಹ್ಲಿಯ ನಾಯಕತ್ವದ ಬಗ್ಗೆ ಕಿಡಿಕಾರಿದ್ದಾರೆ.

    2ನೇ ಏಕದಿನ ಪಂದ್ಯದಲ್ಲಿ ಹೊಸ ಚೆಂಡಿನಲ್ಲಿ ಆರಂಭಿಕ ಓವರ್​ಗಳನ್ನು ಎಸೆಯಲು ಜಸ್​ಪ್ರೀತ್ ಬುಮ್ರಾ ಅವರಿಗೆ ಅವಕಾಶವೇ ನೀಡಲಾಗಿಲ್ಲ. ಕೇವಲ 2 ಓವರ್​ನಲ್ಲೇ ಅವರ ಓಪನಿಂಗ್ ಸ್ಪೆಲ್​ನ್ನು ಕೊಹ್ಲಿ ಅಂತ್ಯಗೊಳಿಸಿದ್ದರು. ಇದು ಯಾವ ರೀತಿಯ ನಾಯಕತ್ವ ಎಂಬುದು ಅರ್ಥವಾಗುತ್ತಿಲ್ಲ ಎಂದು ಗಂಭೀರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

    ಪ್ರಾಮಾಣಿಕವಾಗಿ ಹೇಳಬೇಕಂದರೆ ಕೊಹ್ಲಿದು ಯಾವು ರೀತಿಯ ನಾಯಕತ್ವ ಎಂಬುದೇ ಅರ್ಥವಾಗುತ್ತಿಲ್ಲ. ಅದ್ಭುತ ಬ್ಯಾಟಿಂಗ್ ಲೈನ್‌ಅಪ್ ಹೊಂದಿರುವ ಆಸ್ಟ್ರೇಲಿಯಾ ತಂಡವನ್ನು ಕಟ್ಟಿ ಹಾಕಬೇಕಾದರೆ, ಆರಂಭದಲ್ಲೇ ವಿಕೆಟ್ ತೆಗೆಯುವುದು ಬಹಳ ಮುಖ್ಯ. ಹಾಗಿದ್ದರೂ ಆರಂಭದಲ್ಲೇ ಪ್ರಮುಖ ಬೌಲರ್​ನ್ನು ಕೇವಲ ಎರಡು ಓವರ್‌ಗಳಿಗೆ ಸೀಮಿತಗೊಳಿಸಿರುವುದು ತಪ್ಪು ಎಂದು ಗಂಭೀರ್ ತಿಳಿಸಿದ್ದಾರೆ.

    ಇದು ಟಿ20 ಕ್ರಿಕೆಟ್ ಅಲ್ಲ. ಏಕದಿನ ಪಂದ್ಯವಾಗಿದೆ. ತಂಡದ ಪ್ರಮುಖ ವೇಗಿಗೆ ಕೇವಲ 2 ಓವರ್ ನೀಡಿ ಬಳಿಕ ನಿಲ್ಲಿಸಿದರೆ ಅದು ಯಾವ ರೀತಿಯ ನಾಯಕತ್ವ ಎಂಬುದು ಅರಿವಾಗುತ್ತಿಲ್ಲ. ಮೊದಲ ಹತ್ತು ಓವರ್​ಗಳಲ್ಲಿ ಕನಿಷ್ಠ ನಾಲ್ಕು ಓವರ್​ಗಳನ್ನು ನೀಡಬೇಕು. ಹೀಗೆ ಪ್ರಮುಖ ಬೌಲರ್‌ನನ್ನು ಆರಂಭದಲ್ಲೇ ನಿಲ್ಲಿಸಿದರೆ ಆ ನಾಯಕತ್ವವನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಗಂಭೀರ್ ತಿಳಿಸಿದ್ದಾರೆ.

    ಈ ಹಿಂದೆ ಐಪಿಎಲ್​ನಲ್ಲಿ ಸತತ 8 ವರ್ಷಗಳಿಂದ ಕಪ್ ಗೆಲ್ಲಲು ವಿಫಲರಾದ ವಿರಾಟ್ ಕೊಹ್ಲಿಯನ್ನು ನಾಯಕತ್ವದಿಂದ ತೆಗೆದು ಹಾಕುವಂತೆ ಆಗ್ರಹಿಸಿದ್ದರು. ಅವರು ತಂಡವನ್ನು ಮುನ್ನಡೆಸಲು ಅಸಮರ್ಥರು ಎಂಬುದಕ್ಕೆ ಇದುವರೆಗೆ ಕಪ್ ಗೆಲ್ಲದಿರುವುದೇ ಸಾಕ್ಷಿ ಎಂದು ಗೌತಮ್ ಗಂಭೀರ್ ತಿಳಿಸಿದ್ದರು. ಇದೀಗ ಟೀಮ್ ಇಂಡಿಯಾವನ್ನು ಕೊಹ್ಲಿ ಮುನ್ನಡೆಸುತ್ತಿರುವ ರೀತಿ ಬಗ್ಗೆ ಗಂಭೀರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಇದನ್ನೂ ಓದಿ:  ನಾನು ಬ್ಯಾಟಿಂಗ್ ವೇಳೆ ರಾಹುಲ್ ಬಳಿ ಕ್ಷಮೆ ಕೇಳಿದ್ದೇನೆ..!
    Published by:zahir
    First published: