ಮನೆ ಕೆಲಸದಾಕೆಯ ಅಂತ್ಯ ಸಂಸ್ಕಾರ ನಡೆಸಿ ಮಾನವೀಯತೆ ಮೆರೆದ ಗೌತಮ್ ಗಂಭೀರ್

ಚಿಕಿತ್ಸೆಗೆ ಫಲಕಾರಿಯಾಗದೆ ಏ. 21ರಂದು ಸರಸ್ವತಿ ಮೃತಪಟ್ಟಿದ್ದರು. ಕೊರೋನಾ ಸೋಂಕು ನಿಯಂತ್ರಿಸಲು ದೇಶದಾದ್ಯಂತ ಲಾಕ್‌ಡೌನ್‌ ಇರುವ ಕಾರಣ ಸರಸ್ವತಿ ಅವರ ಮೃತದೇಹವನ್ನು ತವರು ರಾಜ್ಯ ಒಡಿಶಾಕ್ಕೆ ಕಳುಹಿಸಲು ಆಗಿರಲಿಲ್ಲ.

news18-kannada
Updated:April 25, 2020, 12:00 PM IST
ಮನೆ ಕೆಲಸದಾಕೆಯ ಅಂತ್ಯ ಸಂಸ್ಕಾರ ನಡೆಸಿ ಮಾನವೀಯತೆ ಮೆರೆದ ಗೌತಮ್ ಗಂಭೀರ್
ಗೌತಮ್ ಗಂಭೀರ್
  • Share this:
ಟೀಂ ಇಂಡಿಯಾ ಮಾಜಿ ಆಟಗಾರ ಮತ್ತು ಹಾಲಿ ಸಂಸದ ಗೌತಮ್ ಗಂಭಿರ್ ಕೊರೋನಾ ವೈರಸ್ ವಿರುದ್ಧದ ಹೋರಾಟಕ್ಕೆ ಈಗಾಗಲೇ ಅನೇಕ ಸಹಾಯ ಮಾಡಿದ್ದಾರೆ. ಪ್ರಧಾನ ಮಂತ್ರಿ ನಾಗರಿಕ ಸಹಾಯ ಮತ್ತು ತುರ್ತು ಪರಿಸ್ಥಿತಿಗಳ ಪರಿಹಾರ ನಿಧಿಗೆ ಸಂಸದನಾಗಿ ಲಭಿಸಲಿರುವ ಎರಡು ವರ್ಷಗಳ ಸಂಬಳ ಹಾಗೂ ದೆಹಲಿ ಸರ್ಕಾರಕ್ಕೆ 50 ಲಕ್ಷ ರೂಪಾಯಿ ದೇಣಿಗೆಯಾಗಿ ನೀಡಿದ್ದರು.

ಸದ್ಯ ಗೌತಮ್ ಗಂಭೀರ್ ಮಾಡಿರುವ ಮತ್ತೊಂದು ಮಾನವೀಯ ಕೆಲಸಕ್ಕೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಅನಾರೋಗ್ಯದಿಂದ ಮೃತಪಟ್ಟ ಮನೆಕೆಲಸದಾಕೆಯ ಅಂತ್ಯಸಂಸ್ಕಾರವನ್ನು ಸ್ವತಃ ಗಂಭೀರ್ ಅವರೇ ಮುಂದೆ ನಿಂತು ಮಾಡಿದ್ದಾರೆ.

ಭಾರತದ ಕಷ್ಟಕ್ಕೆ ಮಿಡಿದ ಎಬಿಡಿ ಮನ; ಏನು ಮಾಡಿದ್ರು ಗೊತ್ತೇ?; ಕೊಹ್ಲಿಯಿಂದ ಭಾರೀ ಮೆಚ್ಚುಗೆ

49 ವರ್ಷದ ಒಡಿಸಾ ಮೂಲದ ಸರಸ್ವತಿ ಎಂಬುವವರು ಕಳೆದ 7 ವರ್ಷದಿಂದ ಗಂಭೀರ್ ಅವರ​ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದರು. ಇವರು ಸಕ್ಕರೆ ಕಾಯಿಲೆ​ ಹಾಗೂ ರಕ್ತದೊತ್ತಡದಿಂದ ಬಳಲುತ್ತಿದ್ದ ಕಾರಣ, ಏಪ್ರಿಲ್​ 14ರಂದು ಶ್ರೀಗಂಗಾ ಆಸ್ಪತ್ರೆಗೆ ದಾಖಲಿಸಿದ್ದರು.

 ಆದರೆ, ಚಿಕಿತ್ಸೆಗೆ ಫಲಕಾರಿಯಾಗದೆ ಏ. 21ರಂದು ಸರಸ್ವತಿ ಮೃತಪಟ್ಟಿದ್ದರು. ಕೊರೋನಾ ಸೋಂಕು ನಿಯಂತ್ರಿಸಲು ದೇಶದಾದ್ಯಂತ ಲಾಕ್‌ಡೌನ್‌ ಇರುವ ಕಾರಣ ಸರಸ್ವತಿ ಅವರ ಮೃತದೇಹವನ್ನು ತವರು ರಾಜ್ಯ ಒಡಿಶಾಕ್ಕೆ ಕಳುಹಿಸಲು ಆಗಿರಲಿಲ್ಲ.

ಈ ಸಂದರ್ಭ ಸ್ವತಃ ಗಂಭೀರ್‌ ಖುದ್ದಾಗಿ ಅಂತ್ಯಸಂಸ್ಕಾರಕ್ಕೆ ಏರ್ಪಾಡು ಮಾಡಿದ್ದಾರೆ ಮತ್ತು ಅವರೇ ಅದನ್ನು ನಡೆಸಿಕೊಟ್ಟು ಮಾನವೀಯತೆ ಮೆರೆದಿದ್ದಾರೆ.

ಸಚಿನ್​ ಫೇವರೆಟ್​ ಫುಡ್​​, ಬೆಸ್ಟ್​ ಶಾಟ್​ ಯಾವುದು ಗೊತ್ತಾ?; ಕ್ರಿಕೆಟ್​ ದೇವರ ಬಗ್ಗೆ ಕುತೂಹಲಕಾರಿ ಮಾಹಿತಿ ಹೊರ ಹಾಕಿದ ಶ್ರೀಶಾಂತ್​​​

ಈ ಬಗ್ಗೆ ಗಂಭೀರ್ ಟ್ವೀಟ್ ಮಾಡಿದ್ದಾರೆ. 'ಈಕೆ ನಮ್ಮ ಮನೆಯಲ್ಲಿ ಸದಸ್ಯರಲ್ಲಿ ಒಬ್ಬರಂತೆ ಇದ್ದರು. ನನ್ನ ಮಗನನ್ನು ನೋಡೊಕೊಳ್ಳುತ್ತಿದ್ದವರೂ ನಮ್ಮ ಮನೆಯ ಸದಸ್ಯರೇ ಆಗಿದ್ದರು. ಹೀಗಾಗಿ ಅವರ ಅಂತ್ಯ ಸಂಸ್ಕಾರ ನಡೆಸುವುದು ನನ್ನ ಕರ್ತವ್ಯವಾಗಿದೆ. ನಾನು ಯಾವಾಗಲೂ ಜಾತಿ, ಧರ್ಮ, ಸಾಮಾಜಿಕ ಅಂತಸ್ತಿಗಿಂತ ಯೋಗ್ಯತೆಗೆ ಬೆಲೆ ಕೊಡುತ್ತೇನೆ. ಅದು ಸ್ವಸ್ಥ ಸಮಾಜ ನಿರ್ಮಿಸುವ ದಾರಿ. ಓಂ ಶಾಂತಿ' ಎಂದು ಗಂಭೀರ್ ಬರೆದುಕೊಂಡಿದ್ದಾರೆ.
First published: April 25, 2020, 11:59 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading