news18-kannada Updated:December 15, 2020, 6:06 PM IST
ICC Women’s World Cup 2022
2022ರ ಐಸಿಸಿ ಮಹಿಳಾ ವಿಶ್ವಕಪ್ ವೇಳಾಪಟ್ಟಿಯನ್ನು ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ ಪ್ರಕಟಿಸಿದೆ. ಮಾರ್ಚ್ 4 ರಿಂದ ಶುರುವಾಗಲಿರುವ ಟೂರ್ನಿ ಏಪ್ರಿಲ್ 3ರವರೆಗೆ ನಡೆಯಲಿದೆ. ಮಹಿಳಾ ವಿಶ್ವಕಪ್ ಟೂರ್ನಿ 2021ರ ಫೆಬ್ರವರಿ-ಮಾರ್ಚ್ ಅವಧಿಯಲ್ಲಿ ನಡೆಯಬೇಕಾಗಿತ್ತು. ಆದರೆ ಕೊರೋನಾ ವೈರಸ್ ಕಾರಣದಿಂದ ಐಸಿಸಿ ಪಂದ್ಯಾವಳಿಯನ್ನು ಈ ಹಿಂದೆ ಮುಂದೂಡಿತ್ತು.
ನ್ಯೂಜಿಲೆಂಡ್ನಲ್ಲಿ ನಡೆಯಲಿರುವ ಈ ಟೂರ್ನಿಯಲ್ಲಿ ಒಟ್ಟು 31 ಪಂದ್ಯಗಳು ನಡೆಯಲಿದ್ದು, ಭಾರತ ತಂಡವು ತನ್ನ ಮೊದಲ ಪಂದ್ಯವನ್ನು ಮಾರ್ಚ್ 6 ರಂದು ಆಡಲಿದೆ. ವೆಲ್ಲಿಂಗ್ಟನ್ನ ಬ್ಯಾಸಿನ್ ರಿಸರ್ವ್ ಕ್ರೈಸ್ಟ್ಚರ್ಚ್ನ ಹ್ಯಾಗ್ಲೆ ಓವಲ್ನಲ್ಲಿ ಸೆಮಿ ಫೈನಲ್ ಪಂದ್ಯಗಳು ನಡೆಯಲಿದ್ದು, ಹಾಗೆಯೇ ಏಪ್ರಿಲ್ 3 ರಂದು ಕ್ರೈಸ್ಟ್ಚರ್ಚ್ನ ಹ್ಯಾಗ್ಲೇ ಓವಲ್ ಮೈದಾನದಲ್ಲಿ ಫೈನಲ್ ಪಂದ್ಯ ಜರುಗಲಿದೆ.
ಭಾರತ ಮಹಿಳಾ ತಂಡವು ಗ್ರೂಪ್ ಹಂತದಲ್ಲಿ ಒಟ್ಟು ಏಳು ಪಂದ್ಯಗಳನ್ನು ಆಡಲಿದೆ. ಇದರಲ್ಲಿ ನಾಲ್ಕು ಪಂದ್ಯಗಳು ನ್ಯೂಜಿಲೆಂಡ್, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್ ವಿರುದ್ಧವಾಗಿದ್ದರೆ, ಉಳಿದ ಮೂರು ಪಂದ್ಯಗಳು ವಿಶ್ವಕಪ್ ಟೂರ್ನಿಗೆ ಅರ್ಹತೆ ಪಡೆಯುವ ತಂಡಗಳೊಂದಿಗೆ ಎಂಬುದು ವಿಶೇಷ.
Published by:
zahir
First published:
December 15, 2020, 4:29 PM IST