ವಿಶ್ವಕಪ್ ಬೆನ್ನಲ್ಲೇ ಐಪಿಎಲ್​ಗೆ ಸಿದ್ಧತೆ: ಈ ಬಾರಿ 10 ತಂಡಗಳಿಗೆ ಅವಕಾಶ

IPL : ಈ ಸಂಬಂಧ ಐಪಿಎಲ್ ಉನ್ನತಾಧಿಕಾರಿಗಳು ಮತ್ತು ಫ್ರಾಂಚೈಸಿ ಮೂಲಗಳು ಲಂಡನ್‌ನಲ್ಲಿ ವಾರಾಂತ್ಯದಲ್ಲಿ ಸಭೆ ಸೇರಿ ಚರ್ಚಿಸಿದ್ದು, 2020ರಲ್ಲಿ ಎರಡು ಹೊಸ ಫ್ರಾಂಚೈಸಿಗಳನ್ನು ಪರಿಚಯಿಸುವ ನಿರ್ಧಾರಕ್ಕೆ ಬರಲಾಗಿದೆ ಎಂದು ತಿಳಿದುಬಂದಿದೆ.

news18
Updated:July 14, 2019, 3:42 PM IST
ವಿಶ್ವಕಪ್ ಬೆನ್ನಲ್ಲೇ ಐಪಿಎಲ್​ಗೆ ಸಿದ್ಧತೆ: ಈ ಬಾರಿ 10 ತಂಡಗಳಿಗೆ ಅವಕಾಶ
IPL
  • News18
  • Last Updated: July 14, 2019, 3:42 PM IST
  • Share this:
ವಿಶ್ವವೇ ವಿಶ್ವಕಪ್ ಕ್ರಿಕೆಟ್​ ಮಹಾಸಮರದ ಚಾಂಪಿಯನ್ ಯಾರೆಂಬ ಕುತೂಹಲದಲ್ಲಿ ಮುಳುಗಿದ್ದರೆ, ಇತ್ತ ಭಾರತದಲ್ಲಿ ಚುಟುಕು ಕ್ರಿಕೆಟ್ ಹಬ್ಬದ ಸಿದ್ಧತೆಗಳು ಜೋರಾಗಿ ನಡೆಯುತ್ತಿದೆ. ಹೌದು, ಇಂಡಿಯನ್ ಪ್ರೀಮಿಯರ್ ಲೀಗ್​ನ ಹೊಸ ಆವೃತ್ತಿಯ ಸಿದ್ಧತೆಗಳು ಪ್ರಾರಂಭವಾಗಿವೆ. ಆದರೆ ಈ ಬಾರಿ 8 ತಂಡಗಳ ಬದಲಾಗಿ 10 ತಂಡಗಳನ್ನು ಕಣಕ್ಕಿಳಿಸುವ ಯೋಜನೆಯಲ್ಲಿದೆ ಐಪಿಎಲ್ ಆಡಳಿತ ಮಂಡಳಿ.

2010 ರಿಂದಲೂ ಹಲವು ಉದ್ಯಮ ಸಂಸ್ಥೆಗಳು ಐಪಿಎಲ್ ಫ್ರಾಂಚೈಸಿಗಾಗಿ ಪ್ರಯತ್ನಿಸುತ್ತಿದ್ದು, ಅದಕ್ಕಾಗಿ ಹೊಸ ಎರಡು ತಂಡಗಳನ್ನು ಐಪಿಎಲ್​ಗೆ ಸೇಪರ್ಡೆಗೊಳಿಸಲು ನಿರ್ಧರಿಸುವುದಾಗಿ ಇಂಡಿಯನ್ ಪ್ರೀಮಿಯರ್ ಲೀಗ್ ಆಡಳಿತ ಮಂಡಳಿ ಸದಸ್ಯರೊಬ್ಬರು ತಿಳಿಸಿದ್ದಾರೆ.

ಈ ಹೊಸ ಪ್ಲ್ಯಾನ್​ನಂತೆ 2020ರ ಐಪಿಎಲ್​ನಲ್ಲಿ 10 ತಂಡಗಳು ಚಾಂಪಿಯನ್ ಪಟ್ಟಕ್ಕಾಗಿ ಪೈಪೋಟಿ ನಡೆಸಲಿವೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ 2011ರಲ್ಲಿ ತಂಡಗಳ ವಿಸ್ತರಣೆಗೆ ಪ್ರಯತ್ನ ನಡೆಸಿದ್ದರೂ, ನಂತರ ಈ ಯೋಜನೆಯನ್ನು ಕೈಬಿಟ್ಟಿತ್ತು. ಹಾಗೆಯೇ ಈ ಹಿಂದೆ ಚೆನ್ನೈ ಸೂಪರ್​ ಕಿಂಗ್ಸ್ ಹಾಗೂ ರಾಜಸ್ಥಾನ ರಾಯಲ್ಸ್​ ತಂಡವನ್ನು ಬ್ಯಾನ್ ಮಾಡಲಾಗಿದ್ದ ಸಂದರ್ಭದಲ್ಲಿ ಗುಜರಾತ್ ಲಯನ್ಸ್ ಮತ್ತು ಪುಣೆ ರೈಸಿಂಗ್ ಜೈಂಟ್ಸ್ ಎಂಬ ಎರಡು ಹೊಸ ತಂಡಗಳನ್ನು ಪರಿಚಯಿಸಿತ್ತು. ಆದರೆ ನಿಷೇಧದ ಕಾಲಾವಧಿ ಮುಕ್ತಾಯವಾಗುತ್ತಿದ್ದಂತೆ ಮತ್ತೆ ಚೆನ್ನೈ-ರಾಜಸ್ಥಾನ ತಂಡಗಳು ಮರಳಿದ್ದವು. ಇದೇ ವೇಳೆ ಗುಜರಾತ್ ಮತ್ತು ಪುಣೆ ತಂಡಗಳನ್ನು ಲೀಗ್​ನಿಂದ ಕೈಬಿಡಲಾಗಿತ್ತು.

ಆದರೀಗ ತಂಡದ ಫ್ರಾಂಚೈಸಿಗೆ ಮತ್ತಷ್ಟು ಉದ್ಯಮಿಗಳು ಮುಂದಾಗಿದ್ದಾರೆ. ಅದಾನಿ ಉದ್ಯಮ ಸಮೂಹ (ಅಹ್ಮದಾಬಾದ್), ಆರ್‌ಪಿಜಿ-ಸಂಜೀವ್ ಗೊಯಾಂಕಾ ಸಮೂಹ (ಪುಣೆ) ಮತ್ತು ಟಾಟಾ ಸಮೂಹ (ರಾಂಚಿ ಮತ್ತು ಜೆಮ್‌ಶೆಡ್‌ಪುರ) ಐಪಿಎಲ್​ ತಂಡಗಳನ್ನು ಹೊಂದಲು ಉತ್ಸುಕರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಇಂಡಿಯನ್ ಪ್ರಿಮಿಯರ್ ಲೀಗ್‌ನ ಮತ್ತೆರಡು ತಂಡಗಳನ್ನು ಸೇರಿಸಲು ಆಡಳಿತ ಮಂಡಳಿ ಮುಂದಾಗಿದೆ.

ಈ ಸಂಬಂಧ ಐಪಿಎಲ್ ಉನ್ನತಾಧಿಕಾರಿಗಳು ಮತ್ತು ಫ್ರಾಂಚೈಸಿ ಮೂಲಗಳು ಲಂಡನ್‌ನಲ್ಲಿ ವಾರಾಂತ್ಯದಲ್ಲಿ ಸಭೆ ಸೇರಿ ಚರ್ಚಿಸಿದ್ದು, 2020ರಲ್ಲಿ ಎರಡು ಹೊಸ ಫ್ರಾಂಚೈಸಿಗಳನ್ನು ಪರಿಚಯಿಸುವ ನಿರ್ಧಾರಕ್ಕೆ ಬರಲಾಗಿದೆ ಎಂದು ತಿಳಿದುಬಂದಿದೆ.

First published: July 14, 2019, 3:42 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading