ಬೆಂಗಳೂರು (ಜೂ. 07): ಫ್ರೆಂಚ್ ಓಪನ್ನ ಸೆಮಿ ಫೈನಲ್ ಕದನದಲ್ಲಿ ಮಣ್ಣಿನ ಅಂಕಣದ ದೊರೆ ರಾಫೆಲ್ ನಡಾಲ್ ಅವರು ರೋಜರ್ ಫೆಡರರ್ಗೆ ಸೋಲಿನ ರುಚಿ ತೋರಿಸಿದ್ದಾರೆ.
ರೋಲ್ಯಾಂಡ್ ಗ್ಯಾರಸ್‌ನಲ್ಲಿ ನಡೆದ ಪುರುಷ ಸಿಂಗಲ್ಸ್ ವಿಭಾಗದ ಕದನದಲ್ಲಿ 17 ಗ್ರ್ಯಾಂಡ್ಸ್ಲಾಮ್ ವಿಜೇತ ಸ್ಪೇನ್ನ ರಾಫೆಲ್ ನಡಾಲ್ ಅವರು 20 ಗ್ರ್ಯಾಂಡ್ಸ್ಲಾಮ್ ಪ್ರಶಸ್ತಿ ಪಡೆದಿರುವ ರೋಜರ್ ಫೆಡರರ್ ವಿರುದ್ಧ ಸೆಮಿಫೈನಲ್ನಲ್ಲಿ ಸೆಣಸಾಡಿ 6-3, 6-4, 6-2 ಅಂತರದ ಸೆಟ್ಗಳಿಂದ ಗೆದ್ದು ಬೀಗಿದ್ದಾರೆ. ಈ ಮೂಲಕ ಫ್ರೆಂಚ್ ಓಪನ್ನಲ್ಲಿ 12ನೇ ಬಾರಿ ಫೈನಲ್ ಪ್ರವೇಶಿಸಿದ ಸಾಧನೆ ಮಾಡಿದ್ದಾರೆ.
ಇದನ್ನೂ ಓದಿ: India vs Australia: ಪ್ರ್ಯಾಕ್ಟೀಸ್ ಬಿಟ್ಟು ಮೈದಾನದಿಂದ ಹೊರ ನಡೆದ ಟೀಂ ಇಂಡಿಯಾ ಆಟಗಾರರು
2009ರಲ್ಲಿ ಫೆಡರರ್ ಚೊಚ್ಚಲ ಹಾಗೂ ತನ್ನ ಕೊನೆಯ ಫ್ರೆಂಚ್ ಓಪನ್ ಪ್ರಶಸ್ತಿ ಗೆದ್ದಿದ್ದರು. ಅಲ್ಲದೆ ಗ್ರ್ಯಾನ್ ಸ್ಲಾಮ್ ಇತಿಹಾಸದಲ್ಲೇ ಸೆಮಿಫೈನಲ್ ಪ್ರವೇಶಿಸಿದ ಅತಿ ಹಿರಿಯ ಆಟಗಾರ ಆಗಿದ್ದರು. ಆದರೆ ಸೆಮೀಸ್ನಲ್ಲಿ ಮುಗ್ಗರಿಸಿದ ಫೆಡರರ್ ಕೂಟದಿಂದಲೇ ಹೊರ ಬಿದ್ದಿದ್ದಾರೆ.
ನಡಾಲ್ ಅವರು ಜಪಾನ್ನ ನಿಶಿಕೋರಿ ವಿರುದ್ಧ 6-1,6-1 ಸೆಟ್ಗಳಲ್ಲಿ ಗೆದ್ದು ಸೆಮಿಫೈನಲ್ಗೆ ಪ್ರವೇಶ ಪಡೆದಿದ್ದರು. ಇತ್ತ ಫೆಡರರ್ ಅದೇ ದೇಶದ ವಾವ್ರಿಂಕಾ ವಿರುದ್ಧ 7-6(4), 4-6, 7-5(5),6-4 ಸೆಟ್ಗಳಿಂದ ಮಣಿಸಿ ಸೆಮಿಫೈನಲ್ಗೆ ಲಗ್ಗೆಯಿಟ್ಟಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ