ಭಾರತ ಮೊದಲ ಬಾರಿ ವಿಶ್ವಕಪ್ ಗೆದ್ದಾಗ ಪ್ರಧಾನಿ ಇಂದಿರಾ ಗಾಂಧಿ ಮಾಡಿದ್ದು ನಿಜಕ್ಕೂ ಅಚ್ಚರಿ!

Cricket World Cup History: ಜೂನ್ 25, 1983, ಭಾರತೀಯ ಕ್ರಿಕೆಟ್‌ಗೆ ಹೊಸ ಭಾಷ್ಯ ಬರೆದ ದಿನ. ಕ್ರಿಕೆಟ್ ಕಾಶಿ ಲಾರ್ಡ್ಸ್‌ನಲ್ಲಿ ನಡೆದ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಕಪಿಲ್ ದೇವ್ ನಾಯಕತ್ವದ ಭಾರತ ತಂಡ ಮೊದಲ ಬಾರಿಗೆ ವಿಶ್ವಕಪ್ ಎತ್ತಿ ಹಿಡಿದು ಹೊಸ ಇತಿಹಾಸ ಸೃಷ್ಟಿಸಿತು.

Vinay Bhat | news18
Updated:May 24, 2019, 4:56 PM IST
ಭಾರತ ಮೊದಲ ಬಾರಿ ವಿಶ್ವಕಪ್ ಗೆದ್ದಾಗ ಪ್ರಧಾನಿ ಇಂದಿರಾ ಗಾಂಧಿ ಮಾಡಿದ್ದು ನಿಜಕ್ಕೂ ಅಚ್ಚರಿ!
ಇಂದಿರಾ ಗಾಂಧಿ ಹಾಗೂ ವಿಶ್ವಕಪ್ ಜೊತೆ ಕಪಿಲ್ ದೇವ್
  • News18
  • Last Updated: May 24, 2019, 4:56 PM IST
  • Share this:
ವಿಶ್ವಕಪ್ ಮಹಾಸಮರಕ್ಕೆ ಇನ್ನೇನು ಕೇವಲ ಐದು ದಿನಗಳಷ್ಟೆ ಬಾಕಿ ಉಳಿದಿವೆ. ಮೇ 30 ರಂದು ಈ ಕ್ರಿಕೆಟ್ ಹಬ್ಬಕ್ಕೆ ವಿದ್ಯುಕ್ತ ಚಾಲನೆ ಸಿಗಲಿದ್ದು, ಇಂದಿನಿಂದ ಅಭ್ಯಾಸ ಪಂದ್ಯಗಳು ಆರಂಭವಾಗಿವೆ.

ವಿಶ್ವಕಪ್ ಆರಂಭಕ್ಕೂ ಮುನ್ನ ಹಿಂದಿನ ಘತವೈಭವದ ಬಗ್ಗೆ ಮೆಲುಕು ಹಾಕುವುದಾದರೆ, ಜೂನ್ 25, 1983, ಭಾರತೀಯ ಕ್ರಿಕೆಟ್‌ಗೆ ಹೊಸ ಭಾಷ್ಯ ಬರೆದ ದಿನ. ಕ್ರಿಕೆಟ್ ಕಾಶಿ ಲಾರ್ಡ್ಸ್‌ನಲ್ಲಿ ನಡೆದ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಕಪಿಲ್ ದೇವ್ ನಾಯಕತ್ವದ ಭಾರತ ತಂಡ ಮೊದಲ ಬಾರಿಗೆ ವಿಶ್ವಕಪ್ ಎತ್ತಿ ಹಿಡಿದು ಹೊಸ ಇತಿಹಾಸ ಸೃಷ್ಟಿಸಿತು.

ಇದನ್ನೂ ಓದಿ: ICC World Cup 2019: ವಿರಾಟ್ 'ಕಿಂಗ್ ಪೋಸ್'; ಎಲ್ಲ ನಾಯಕರಿಗೆ ಕೊಹ್ಲಿಯೇ ಬಾಸ್

ಭಾರತದ ಕ್ರಿಕೆಟ್ ಚಿತ್ರ ಬದಲಾವಣೆಗೆ ಮುನ್ನುಡಿಯಾದ ದಿನವದು. ಆ ದಿನವನ್ನು ಮೆಲುಕು ಹಾಕಿದರೆ ಭಾರತ ಕ್ರಿಕೆಟ್ ಪ್ರೇಮಿಗಳ ಮೈ ರೋಮಾಂಚನವಾಗುತ್ತದೆ. ಭಾರತ ಚೊಚ್ಚಲ ವಿಶ್ವಕಪ್ ಗೆದ್ದ ನೆನಪೂ ಇಂದಿಗೂ ಕ್ರಿಕೆಟ್ ಪ್ರೇಮಿಗಳ ಮನದಲ್ಲಿ ಹಸಿರಾಗಿದೆ.

ಈ ಖುಷಿಗೆ ಅಂದಿನ ಪ್ರಧಾನ ಮಂತ್ರಿಯಾಗಿದ್ದ ಇಂದಿರಾ ಗಾಂಧಿ ಅವರು ವಿಶ್ವಕಪ್ ಗೆದ್ದ ಮರುದಿನ ದೇಶಾದ್ಯಂತ ಸರ್ಕಾರಿ ರಜೆ ಘೋಷಣೆ ಮಾಡಿದ್ದರಂತೆ. ಸ್ವಾತಂತ್ರ್ಯ ದೊರಕಿದ ನಂತರ ಮೊದಲ ಬಾರಿಗೆ ವಿಶ್ವಕಪ್ ದೊರೆತಿದ್ದು ಭಾರತೀಯರ ಪಾಲಿಗೆ ತುಂಬಾನೆ ವಿಶೇಷವಾಗಿತ್ತು. ಇಂದಿರಾ ಗಾಂಧಿ ಕೂಡ ಕ್ರಿಕೆಟ್ ಪ್ರೇಮಿಯಾಗಿದ್ದು, ಈ ಮೂಲಕ ಅಪರೂಪದ ಗೆಲುವನ್ನು ವಿಶಿಷ್ಠವಾಗಿ ಸಂಭ್ರಮಿಸಿದ್ದರಂತೆ.

ಇದನ್ನೂ ಓದಿ: Cricket World Cup History: 1987ರ ವಿಶ್ವಕಪ್ ಗೆಲುವಿನ ಸಂಭ್ರಮ, ಸೋಲಿನ ಕಹಿಯ ರೋಚಕ ಕ್ಷಣಗಳು ಹೇಗಿತ್ತು?

ಆಗಿನ ಕಾಲದಲ್ಲಿ ಬಲಿಷ್ಠ ತಂಡವಾಗಿ ಕ್ರಿಕೆಟ್ ಸಾಮ್ರಾಜ್ಯವನ್ನು ಆಳುತ್ತಿದ್ದ ವೆಸ್ಟ್​ ಇಂಡೀಸ್ ತಂಡವನ್ನು ಭಾರತ ಮಣಿಸುತ್ತದೆ ಎಂದು ಯಾರು ಕೂಡ ಊಹಿಸಿರಲಿಲ್ಲ. 60 ಓವರ್‌ಗಳ ಏಕದಿನ ಪಂದ್ಯದಲ್ಲಿ ವಿಂಡೀಸ್ ತಂಡದ ನಾಯಕ ಕ್ಲೈವ್ ಲಾಯ್ಡ್ ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡಿದ್ದರು. ನಾಯಕನ ನಿರ್ಧಾರ ಸರಿ ಎನ್ನುವಂತೆ ಬೌಲರ್‌ಗಳು ಭಾರತ ತಂಡವನ್ನು ಕೇವಲ 183 (54.4 ಓವರ್) ರನ್‌ಗಳಿಗೆ ಆಲೌಟ್ ಮಾಡಿದರು.
Loading...

ಭಾರತ ನೀಡಿದ್ದ ಸುಲಭ ಗುರಿಯನ್ನು ಬೆನ್ನಟ್ಟಿ ಹ್ಯಾಟ್ರಿಕ್ ಗೆಲುವಿನ ಕನಸಿನಲ್ಲಿದ್ದ ವಿಂಡೀಸ್​ಗೆ ಭಾರತೀಯ ಬೌಲರ್​ಗಳು ಯಾರು ಊಹಿಸಲಾಗದ ರೀತಿಯಲ್ಲಿ ಆಘಾತ ನೀಡಿದರು. ಕೆರಿಬಿಯನ್ನರನ್ನು ಕೇವಲ 140 ರನ್​ಗೆ ಕಟ್ಟಿ ಹಾಕುವಲ್ಲಿ ಯಶಶ್ವಿಯಾದ ಭಾರತೀಯರು 43 ರನ್‌ಗಳ ಜಯ ದಾಖಲಿಸುವುದರೊಂದಿಗೆ ಚೊಚ್ಚಲ ಬಾರಿಗೆ ವಿಶ್ವ ಚಾಂಪಿಯನ್ ಪಟ್ಟವನ್ನು ತಮ್ಮದಾಗಿಸಿಕೊಂಡರು.

First published:May 24, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...