ಸಲಹೆ ನೀಡಲು ಹೋಗಿದ್ದ ಕೋಚ್​ಗೆ ಚಾಕು ತೋರಿಸಿದ್ದ ಈ ಸ್ಟಾರ್ ಕ್ರಿಕೆಟಿಗ; ಶಾಕಿಂಗ್ ವಿಚಾರ ಬಹಿರಂಗ

Grant Flower: ಗ್ರ್ಯಾಂಟ್‌ ಫ್ಲವರ್‌ 2014-2019ರ ಅವಧಿಯಲ್ಲಿ ಪಾಕಿಸ್ಥಾನ ತಂಡದ ಬ್ಯಾಟಿಂಗ್‌ ಕೋಚ್‌ ಆಗಿ ಕರ್ತವ್ಯ ನಿರ್ವಹಿಸಿದ್ದರು. ಆಸ್ಟ್ರೇಲಿಯ ಪ್ರವಾಸದ ವೇಳೆ ಈ ವಿಚಿತ್ರ ಘಟನೆ ನಡೆಯಿತು ಎಂಬುದಾಗಿ ಫ್ಲವರ್‌ ಕ್ರಿಕೆಟ್‌ ಕಾರ್ಯಕ್ರಮವೊಂದರ ವೇಳೆ ಹೇಳಿದ್ದಾರೆ.

news18-kannada
Updated:July 3, 2020, 9:04 AM IST
ಸಲಹೆ ನೀಡಲು ಹೋಗಿದ್ದ ಕೋಚ್​ಗೆ ಚಾಕು ತೋರಿಸಿದ್ದ ಈ ಸ್ಟಾರ್ ಕ್ರಿಕೆಟಿಗ; ಶಾಕಿಂಗ್ ವಿಚಾರ ಬಹಿರಂಗ
ಭಾರತ - ಪಾಕಿಸ್ತಾನ ಪಂದ್ಯದ ವೇಳೆ ಯೂನಿಸ್ ಖಾನ್.
  • Share this:
ಸಾಮಾನ್ಯವಾಗಿ ಕ್ರೀಡೆಯಯಲ್ಲಿ ತಂಡಗಳಿಗೆ ಕೋಚ್‌ಗಳನ್ನು ನೇಮಿಸುವುದು ಸಲಹೆ, ಮಾರ್ಗದರ್ಶನ ನೀಡುವುದಕ್ಕೆ. ಅಂತೆಯೆ ಕ್ರಿಕೆಟ್​ನಲ್ಲೂ ಕೋಚ್​ಗಳಿಗೆ ಮಹತ್ವದ ಸ್ಥಾನವಿದೆ. ಕ್ರೀಡಾಪಟುಗಳು ಕೋಚ್‌ಗಳಿಗೆ ಗುರುವಿನ ಸ್ಥಾನ ನೀಡಿರುತ್ತಾರೆ. ಆದರೆ, ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಯೂನಿಸ್ ಖಾನ್, ಅಂದಿನ ಬ್ಯಾಟಿಂಗ್ ಕೋಚ್ ಆಗಿದ್ದ ಗ್ರ್ಯಾಂಟ್ ಫ್ಲವರ್ ಸಲಹೆ ನೀಡಿದ್ದಕ್ಕೆ ಮಾಡಿದ್ದೇನು ತಿಳಿದರೆ ಶಾಕ್ ಆಗ್ತೀರ. ಮೂರು ವರ್ಷಗಳ ಹಿಂದಿನ ಕಹಿ ಘಟನೆಯನ್ನು ಜಿಂಜಾಬ್ವೆಯ ಮಾಜಿ ಆಟಗಾರ ಗ್ರ್ಯಾಂಟ್  ಫ್ಲವರ್ ಇದೀಗ ಹೊರಹಾಕಿದ್ದಾರೆ.

ಪಾಕಿಸ್ಥಾನದ ಬ್ಯಾಟಿಂಗ್‌ ಕೋಚ್‌ ಆಗಿದ್ದ ವೇಳೆ ಯೂನಿಸ್‌ ಖಾನ್‌ ತನ್ನ ಗಂಟಲಿಗೆ ಚೂರಿ ಹಿಡಿದು ಬೆದರಿಸಿದ್ದರು ಎಂಬ ಆಘಾತಕಾರಿ ಸಂಗತಿಯನ್ನು ಜಿಂಬಾಬ್ವೆಯ ಗ್ರ್ಯಾಂಟ್‌ ಫ್ಲವರ್‌ ಬಹಿರಂಗಪಡಿಸಿದ್ದಾರೆ.

IPL 2020: ಈ ಬಾರಿ ವಿದೇಶದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಆಯೋಜನೆ?

ಗ್ರ್ಯಾಂಟ್‌ ಫ್ಲವರ್‌ 2014-2019ರ ಅವಧಿಯಲ್ಲಿ ಪಾಕಿಸ್ಥಾನ ತಂಡದ ಬ್ಯಾಟಿಂಗ್‌ ಕೋಚ್‌ ಆಗಿ ಕರ್ತವ್ಯ ನಿರ್ವಹಿಸಿದ್ದರು. ಆಸ್ಟ್ರೇಲಿಯ ಪ್ರವಾಸದ ವೇಳೆ ಈ ವಿಚಿತ್ರ ಘಟನೆ ನಡೆಯಿತು ಎಂಬುದಾಗಿ ಫ್ಲವರ್‌ ಕ್ರಿಕೆಟ್‌ ಕಾರ್ಯಕ್ರಮವೊಂದರ ವೇಳೆ ಹೇಳಿದ್ದಾರೆ.

"ಯೂನಿಸ್‌ ಖಾನ್‌ ಅವರನ್ನು ಒಲಿಸಿಕೊಳ್ಳುವುದು ಬಹಳಕಷ್ಟದ ಕೆಲಸ. ಬ್ರಿಸ್ಬೇನ್‌ನಲ್ಲಿ ನಡೆದ ಘಟನೆ ನನಗೆ ಈಗಲೂ ನೆನಪಿದೆ. ಆ ಟೆಸ್ಟ್‌ ಪಂದ್ಯದ ಮುಂಜಾನೆ ಉಪಹಾರ ಸೇವಿಸುವಾಗ ಯೂನಿಸ್‌ಗೆ ಕೆಲ ಬ್ಯಾಟಿಂಗ್‌ ಸಲಹೆ ನೀಡಲು ಪ್ರಯತ್ನಿಸಿದೆ. ಆದರೆ, ನನ್ನ ಸಲಹೆಯನ್ನು ಅವರು ಸ್ವೀಕರಿಸಲೇ ಇಲ್ಲ. ಬದಲಿಗೆ ನನ್ನ ಕುತ್ತಿಗೆಗೆ ಚಾಕು ಹಿಡಿದಿದ್ದರು. ಪಕ್ಕದಲ್ಲೇ ಕುಳಿತಿದ್ದ ಕೋಚ್‌ ಮಿಕಿ ಆರ್ಥರ್‌ ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ದರು," ಎಂದು ಘಟನೆಯನ್ನು ವಿವರಿಸಿದ್ದಾರೆ.

ಒಂದು ಪಂದ್ಯ, 36 ಓವರ್​, 3 ತಂಡಗಳ ಹೋರಾಟ: ಕ್ರಿಕೆಟ್​ ಅಂಗಳದ ಹೊಸ ಕದನ..!
"ಸ್ಬೇನ್‌ನಲ್ಲಿ ನಡೆದ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಯೂನಿಸ್ ಖಾನ್ ಶೂನ್ಯಕ್ಕೆ ಔಟಾಗಿದ್ದರು. ಯಾವ ಪಂದ್ಯ ಅಂತ ಸರಿಯಾಗಿ ಗೊತ್ತಿಲ್ಲ, ಆದರೆ, 2016ರಲ್ಲಿ ಬ್ರಿಸ್ಬೇನ್‌ನಲ್ಲಿ ನಡೆದ ಪಂದ್ಯವಿರಬೇಕು. ಆದರೆ, ಯೂನಿಸ್ ಖಾನ್ ಒಬ್ಬ ಪರಿಪೂರ್ಣ ಬ್ಯಾಟ್ಸ್‌ಮನ್ ಎನ್ನುವುದರಲ್ಲಿ ಎರಡು ಮಾತಿಲ್ಲ, ಕೆಲ ಆಟಗಾರರಿಗೆ ಬಂಡತನವೇ ಆಟ ಕಲಿಸುತ್ತದೆ" ಎಂದು ಗ್ರ್ಯಾಂಟ್‌ ಫ್ಲವರ್‌ ಹೇಳಿದ್ದಾರೆ.
First published: July 3, 2020, 9:04 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading