Virat Kohli: ಚೊಚ್ಚಲ ಐಪಿಎಲ್ ಹರಾಜಿನಲ್ಲಿ ಕೊಹ್ಲಿಯನ್ನು ಡೆಲ್ಲಿ ಖರೀದಿಸದಿರಲು ಕಾರಣ ಬಹಿರಂಗ

ವಿರಾಟ್ ಕೊಹ್ಲಿಯನ್ನು 2008 ಐಪಿಎಲ್ ಹರಾಜಿನಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ತಂಡ ಯಾಕೆ ಖರೀದಿಸಲಿಲ್ಲ ಎಂಬ ಕುರಿತು ಅಂದಿನ ಸಿಒಒ ಸುಂದರ್ ರಾಮನ್ ಹೇಳಿದ್ದಾರೆ.

news18-kannada
Updated:June 26, 2020, 9:13 AM IST
Virat Kohli: ಚೊಚ್ಚಲ ಐಪಿಎಲ್ ಹರಾಜಿನಲ್ಲಿ ಕೊಹ್ಲಿಯನ್ನು ಡೆಲ್ಲಿ ಖರೀದಿಸದಿರಲು ಕಾರಣ ಬಹಿರಂಗ
ವಿರಾಟ್ ಕೊಹ್ಲಿ
  • Share this:
2008ರ ಇಂಡಿಯನ್ ಪ್ರೀಮಿಯರ್ ಲೀಗ್ ಚೊಚ್ಚಲ ಆವೃತ್ತಿಯಲ್ಲಿ ಹೆಚ್ಚಿನ ಆಟಗಾರರು ತಮ್ಮ ತಮ್ಮ ತವರಿನ ತಂಡವನ್ನೇ ಪ್ರತಿನಿಧಿಸಿದ್ದರು. ಆದರೆ, ವಿರಾಟ್ ಕೊಹ್ಲಿ ಮಾತ್ರ ಡೆಲ್ಲಿ ತಂಡದ ಬದಲಾಗಿ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡಕ್ಕೆ ಆಯ್ಕೆಯಾಗಿದ್ದರು. ಕಳೆದ 12 ಆವೃತ್ತಿಯಿಂದಲೂ ಕೊಹ್ಲಿ ಆರ್​ಸಿಬಿ ತಂಡದ ಪ್ರಮುಖ ಆಟಗಾರನಾಗಿದ್ದಾರೆ. ಆದರೆ, ಕಿಂಗ್ ಕೊಹ್ಲಿಯನ್ನು ಚೊಚ್ಚಲ ಐಪಿಎಲ್ ಹರಾಜಿನಲ್ಲಿ ಅವರ ತವರು ತಂಡ ಡೆಲ್ಲಿ ಯಾಕೆ ಖರೀದಿಸಲಿಲ್ಲ?. ಈ ಪ್ರಶ್ನೆಗೆ ಸದ್ಯ ಉತ್ತರ ಸಿಕ್ಕಿದೆ.

ಐಪಿಎಲ್ ಹರಾಜಿಗೆ ಕೆಲವು ತಿಂಗಳಿದೆ ಎಂಬುವಹೊತ್ತಿಗೆ ಭಾರತ ಅಂಡರ್-19 ತಂಡ ಐಸಿಸಿ ಏಕದಿನ ವಿಶ್ವಕಪ್ ಪ್ರಶಸ್ತಿ ಗೆದ್ದಿತ್ತು. ಹೀಗಾಗಿ ತಂಡದ ನಾಯಕ ವಿರಾಟ್ ಕೊಹ್ಲಿ ಮೇಲೆ ಎಲ್ಲ ಫ್ರಾಂಚೈಸಿಗಳ ಕಣ್ಣಿತ್ತು. ಅದರಲ್ಲೂ ತವರಿನ ತಂಡ ಡೆಲ್ಲಿ ಕೊಹ್ಲಿಯನ್ನು ಎಷ್ಟು ಹಣಕೊಟ್ಟಾದರೂ ಖರೀದಿ ಮಾಡುತ್ತದೆ ಎಂದೇ ನಂಬಲಾಗಿತ್ತು. ಆದರೆ, ಆರ್​ಸಿಬಿ ತಂಡ ವಿರಾಟ್​ರನ್ನು ಖರೀದಿಸಿ ತನ್ನ ತೆಕ್ಕೆಗೆ ಸೇರಿಸಿಕೊಂಡಿತು.

ಪಾಕ್ ತಂಡಕ್ಕೆ ಭಾರತದಲ್ಲಿ ಅವಕಾಶ ಸಿಗಲಿದೆಯಾ ಎಂಬ ಚಿಂತೆ..!

ಸದ್ಯ ಕೊಹ್ಲಿಯನ್ನು ಡೆಲ್ಲಿ ತಂಡ ಯಾಕೆ ಖರೀದಿಸಲಿಲ್ಲ ಎಂಬ ಕುರಿತು ಅಂದಿನ ಸಿಒಒ ಸುಂದರ್ ರಾಮನ್ ಹೇಳಿದ್ದಾರೆ. ‘ಐಪಿಎಲ್ ಆಟಗಾರರ ಹರಾಜಿಗೆ ಒಂದು ತಿಂಗಳು ಮುನ್ನವಷ್ಟೇ 19 ವಯೋಮಿತಿ ವಿಶ್ವಕಪ್ ಮುಗಿದಿತ್ತು. ಆಗ ಅಂಡರ್-19 ತಂಡದ ಆಟಗಾರರಿಗಾಗಿ ಹರಾಜು ಪ್ರಕ್ರಿಯೆ ಪ್ರತ್ಯೇಕವಾಗಿತ್ತು. ಆದರೆ, ಅಲ್ಲಿ ವಿರಾಟ್ ಕೊಹ್ಲಿ ಈ ಹರಾಜು ಪ್ರಕ್ರಿಯೆಯಲ್ಲಿ ಆಯ್ಕೆಯಾದ ಮೊದಲ ಆಟಗಾರ ಆಗಿರಲಿಲ್ಲ‘ ಎಂದು ಅವರು ಹೇಳಿದ್ದಾರೆ.

‘ಡೆಲ್ಲಿ ತಂಡ ಆಗ ಕೊಹ್ಲಿ ಅವರನ್ನು ಕಡೆಗಣಿಸಿ ಪ್ರದೀಪ್ ಸಂಗ್ವಾನ್ ಅವರನ್ನು ಸೇರಿಸಿಕೊಂಡಿತ್ತು. ಅವರ ತಂಡಕ್ಕೆ ಆಗ ಮತ್ತೊಬ್ಬ ಬ್ಯಾಟ್ಸ್‌ಮನ್ ಅಗತ್ಯವಿರಲಿಲ್ಲ. ವೀರೇಂದ್ರ ಸೆಹ್ವಾಗ್, ಎಬಿ ಡಿವಿಲಿಯರ್ಸ್‌ ಅವರಂಥ ಸ್ಟಾರ್ ಬ್ಯಾಟ್ಸ್‌ಮನ್‌ಗಳು ತಂಡದಲ್ಲಿದ್ದರು. ಹೀಗಾಗಿ ಅವರು ವೇಗದ ಬೌಲರ್‌ಗೆ ಆದ್ಯತೆ ನೀಡಿದ್ದರು. ಕೊನೆಗೆ ಆರ್‌ಸಿಬಿ ತಂಡ ವಿರಾಟ್ ಕೊಹ್ಲಿ ಅವರನ್ನು ಆರಿಸಿಕೊಂಡಿತ್ತು. ನಂತರ ನಡೆದಿದ್ದೆಲ್ಲ ಇತಿಹಾಸ‘ ಎಂದು ಸುಂದರ್ ರಾಮನ್ ವಿವರಿಸಿದ್ದಾರೆ.

ವಿರಾಟ್ ಕೊಹ್ಲಿಗೆ ಮದುವೆ ಪ್ರಸ್ತಾಪವಿಟ್ಟಿದ್ದ ಇಂಗ್ಲೆಂಡ್ ಆಟಗಾರ್ತಿ..!
First published:June 26, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading