ಟೀಂ ಇಂಡಿಯಾ ಮಾಜಿ ಸ್ಟಾರ್ ಆಟಗಾರ ಹೃದಯಾಘಾತದಿಂದ ನಿಧನ; ಕಂಬನಿ ಮಿಡಿದ ಕ್ರಿಕೆಟ್ ಜಗತ್ತು

71ನೇ ವಯಸ್ಸಿನವರೆಗೂ ಕ್ರಿಕೆಟ್ ಆಡುತ್ತಿದ್ದ ಆಪ್ಟೆ ಅವರು, ವೆಸ್ಟ್​ ಇಂಡೀಸ್​ ವಿರುದ್ಧದ ಸರಣಿಯಲ್ಲಿ 460 ರನ್ ​ಗಳಿಸುವ ಮೂಲಕ ಭಾರತ ಪರ ಮೊದಲ ಬಾರಿಗೆ ಸರಣಿಯೊಂದರಲ್ಲಿ 400 ರನ್ ಗಡಿ ದಾಟಿದ ಬ್ಯಾಟ್ಸ್​ಮನ್​ ಎನಿಸಿಕೊಂಡಿದ್ದರು.

Vinay Bhat | news18-kannada
Updated:September 23, 2019, 3:01 PM IST
ಟೀಂ ಇಂಡಿಯಾ ಮಾಜಿ ಸ್ಟಾರ್ ಆಟಗಾರ ಹೃದಯಾಘಾತದಿಂದ ನಿಧನ; ಕಂಬನಿ ಮಿಡಿದ ಕ್ರಿಕೆಟ್ ಜಗತ್ತು
ಮಾಧವ್ ಆಪ್ಟೆ
  • Share this:
ಬೆಂಗಳೂರು (ಸೆ. 23): ಟೀಂ ಇಂಡಿಯಾ ಮಾಜಿ ಕ್ರಿಕೆಟ್ ಆಟಗಾರ ಮಾಧವ್ ಆಪ್ಟೆ ಇಂದು ಬೆಳಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಇವರನ್ನು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ, ಇಂದು ಬೆಳಗಿನ ಜಾವ ಚಿಕಿತ್ಸೆ ಫಲಕಾರಿಯಾಗದೆ 86 ವರ್ಷ ವಯಸ್ಸಾಗಿದ್ದ ಆಪ್ಟೆ ಅವರು ಕೊನೆಯುಸಿರೆಳೆದಿದ್ದಾರೆ.

1950ರ ದಶಕದಲ್ಲಿ ಭಾರತ ತಂಡದ ಆರಂಭಿಕ ಬ್ಯಾಟ್ಸ್​ಮನ್​ ಆಪ್ಟೆ ಅವರು ಟೀಂ ಇಂಡಿಯಾ ಪರ 7 ಟೆಸ್ಟ್​ ಪಂದ್ಯಗಳನ್ನು ಆಡಿದ್ದರು. ವಿಶೇಷ ಎಂದರೆ 49.17 ರ ಬ್ಯಾಟಿಂಗ್​ ಸರಾಸರಿಯಲ್ಲಿ 542 ರನ್​ಗಳಿಸಿದ್ದರು. ಇದರಲ್ಲಿ 2 ಶತಕ ಹಾಗೂ 3 ಅರ್ಧಶತಕ ಸೇರಿದ್ದವು. ಅಜೇಯ 163 ರನ್ ಅವರ ಗರಿಷ್ಠ ಸ್ಕೋರು ಆಗಿದೆ.

Madhav Apte death: Why did prolific Mumbai batsman play only 7 Tests despite average of 49.27?
ಮಾಧವ್ ಆಪ್ಟೆ


ಕ್ರಿಕೆಟ್​ಗೆ ಬ್ಯಾಟ್ಸ್​ಮನ್​​ ಆಗಿ ಕಾಲಿಟ್ಟ ಇವರು ಬೌಲರ್ ಆಗಿದ್ದೇಗೆ?; ಇಲ್ಲಿದೆ ರೋಚಕ ಕಹಾನಿ!

71ನೇ ವಯಸ್ಸಿನವರೆಗೂ ಕ್ರಿಕೆಟ್ ಆಡುತ್ತಿದ್ದ ಆಪ್ಟೆ ಅವರು, ವೆಸ್ಟ್​ ಇಂಡೀಸ್​ ವಿರುದ್ಧದ ಸರಣಿಯಲ್ಲಿ 460 ರನ್ ​ಗಳಿಸುವ ಮೂಲಕ ಭಾರತ ಪರ ಮೊದಲ ಬಾರಿಗೆ ಸರಣಿಯೊಂದರಲ್ಲಿ 400 ರನ್ ಗಡಿ ದಾಟಿದ ಬ್ಯಾಟ್ಸ್​ಮನ್​ ಎನಿಸಿಕೊಂಡಿದ್ದರು.

ಬಳಿಕ ದೇಶೀಯ ಪಂದ್ಯಗಳಲ್ಲೇ ಹೆಚ್ಚಿನ ಆಟ ಆಡಿದ ಇವರು ಅಲ್ಲಿಯು ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಆದರೆ, ಆ ಬಳಿಕ ಟೀಂ ಇಂಡಿಯಾದಲ್ಲಿ ಮಾತ್ರ ಇವರಿಗೆ ಸ್ಥಾನ ಸಿಗಲಿಲ್ಲ. ಆಪ್ಟೆ ಅವರ ನಿಧನಕ್ಕೆ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್, ಯೂಸುಫ್ ಪಠಾಣ್, ವಿನೋದ್​ ಕಾಂಬ್ಳಿ, ವಾಸಿಂ ಜಾಫರ್​, ಹರ್ಷ ಬೊಗ್ಲೆ ಸೇರಿದಂತೆ ಅನೇಕ ಕ್ರಿಕೆಟಿಗರು ಕಂಬನಿ ಮಿಡಿದಿದ್ದಾರೆ.

ಟಿ-20 ಆಯ್ತು ಸದ್ಯ ಕೊಹ್ಲಿ ಮುಂದಿದೆ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನ 2ನೇ ಕದನ; ಯಾವಾಗ?, ಎಲ್ಲಿ? ಇಲ್ಲಿದೆ ಸಂಪೂರ್ಣ ವಿವರ

  First published:September 23, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ