Subhash Bhowmick: ಫುಟ್ಬಾಲ್​ ಕ್ಷೇತ್ರದ ದಿಗ್ಗಜ ಸುಭಾಷ್​ ಭೌಮಿಕ್ ಇನ್ನಿಲ್ಲ!

Football Player: ಸುಭಾಷ್​ ಭೌಮಿಕ್​ ಅವರು ಭಾರತದಕ್ಕಾಗಿ ಸುಮಾರು 24 ಅಂತರಾಷ್ಟ್ರೀಯ ಪಂದ್ಯವನ್ನು ಆಡಿದ್ದು, 9 ಗೋಲುಗಳನ್ನು ಗಳಿಸಿದ್ದಾರೆ. 1971ರಲ್ಲಿ ನಡೆದ ಮೆರ್ಡೆಕಾ ಕಪ್​ನಲ್ಲಿ ಫಿಲಿಫಯನ್ಸ್​ ವಿರುದ್ಧ ಹ್ಯಾಟ್ರಿಕ್​ ಗಳಿಸುವ ಮೂಲಕ ಸುದ್ದಿಯಾಗಿದ್ದರು.

ಸುಭಾಷ್​ ಭೌಮಿಕ್

ಸುಭಾಷ್​ ಭೌಮಿಕ್

 • Share this:
  ಮಾಜಿ ಫುಟ್ಬಾಲ್​ ಆಟಗಾರ (Former football Player) ಸುಭಾಷ್​ ಭೌಮಿಕ್​ (Subhash Bhowmick) ಇಹಲೋಕ ತ್ಯಜಿಸಿದ್ದಾರೆ. ಶನಿವಾರದಂದು ಕೋಲ್ಕತ್ತಾದಲ್ಲಿ (Kolkatta) ನಿಧನರಾಗಿದ್ದಾರೆ. 71 ವರ್ಷದ ಪ್ರಾಯದ ಅವರು 1970ರಲ್ಲಿ ಏಷ್ಯನ್​ ಗೇಮ್ಸ್​ನಲ್ಲಿ (Asian Games) ಕಂಚಿನ ಪದಕ ಗೆದ್ದಿದ್ದರು. ಆಟಗಾರ ಗುರುತಿಸಿಕೊಂಡಿರುವುದು ಮಾತ್ರವಲ್ಲದೆ ಉತ್ತಮ ತರಬೇತುದಾರನಾಗಿಯೂ ಗುರುತಿಸಿಕೊಂಡಿದ್ದರು. ಅಂತರಾಷ್ಟ್ರೀಯ ವೃತ್ತಿ ಜೀವನದಲ್ಲಿ ಸುಭಾಷ್​ ಸಾಕಷ್ಟು ಯಶಸ್ಸು ಗಳಿಸಿದ್ದಾರೆ.

  ಮಾಜಿ ಫುಟ್ಬಾಲ್​ ಆಟಗಾರ ಸುಭಾಷ್​ ಭೌಮಿಕ್​ ಅವರು ಅಕ್ಟೋಬರ್​​ 2, 1950ರಂದು ಜನಿಸಿದರು. ಅತಿ ಸಣ್ಣ ವಯಸ್ಸಿನಲ್ಲೇ ಫುಟ್ಬಾಲ್​ ಆಟವನ್ನು ಕಳಿತಿದ್ದರು. ಮಾತ್ರದಲ್ಲದೆ ಅದರಲ್ಲಿ ಉತ್ಸಾಹಿತನವನ್ನ ತೋರಿಸುತ್ತಿದ್ದರು. ತಮ್ಮ 20ನೇ ವಯಸ್ಸಿನಲ್ಲಿ ಅಂತರಾಷ್ಟ್ರೀಯ ಚೊಚ್ಚಲ ಪಂದ್ಯವನ್ನು ಎದುರಿಸಿದ್ದು. 30 ಜುಲೈ 1970ರಂದು ನಡೆದ ಮರ್ಡೆಕಾ ಕಪ್​ನಲ್ಲಿ ಫಾರ್ಮೋಸಾ ವಿರುದ್ದ ಮೊದಲ ಪಂದ್ಯವನ್ನು ಆಡುವ ಮೂಲಕ ಗುರುತಿಸಿಕೊಂಡರು.

  ಸುಭಾಷ್​ ಭೌಮಿಕ್​ ಅವರು ಭಾರತದಕ್ಕಾಗಿ ಸುಮಾರು 24 ಅಂತರಾಷ್ಟ್ರೀಯ ಪಂದ್ಯವನ್ನು ಆಡಿದ್ದು, 9 ಗೋಲುಗಳನ್ನು ಗಳಿಸಿದ್ದಾರೆ. 1971ರಲ್ಲಿ ನಡೆದ ಮೆರ್ಡೆಕಾ ಕಪ್​ನಲ್ಲಿ ಫಿಲಿಫಯನ್ಸ್​ ವಿರುದ್ಧ ಹ್ಯಾಟ್ರಿಕ್​ ಗಳಿಸುವ ಮೂಲಕ ಸುದ್ದಿಯಾಗಿದ್ದರು. ಮಾತ್ರವಲ್ಲದೆ ಈ ಪಂದ್ಯದಲ್ಲಿ ಭಾರತ 5-1 ಗೋಲು ಬಾರಿಸಿತ್ತು. ಹಾಗಾಗಿ ತಂಡವನ್ನು ಗೆಲ್ಲಿಸಲು ಕಾರಣವಾದ ಕೀರ್ತಿ ಅವರಿಗೆ ಸಲ್ಲುತ್ತದೆ.

  ರಾಜಸ್ಥಾನ ಕ್ಲಬ್​ನೊಂದಿಗೆ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದರೆ. 1968ರ ವೇಳೆಗೆ ಕ್ಲಬ್​ ಸೇರುವ ಮೂಲಕ ಅನೇಕ ಸಾಧನೆಯನ್ನು ಅವರು ಮಾಡಿದ್ದಾರೆ. ಸುಭಾಷ್​ ಭೌಮಿಕ್ ಕೋಲ್ಕತ್ತಾ ಫುಟ್ಬಾಲ್​ ಲೀಗ್​ನಲ್ಲಿ ತಮ್ಮ ಮೊದಲ ಋತುವಿನಲ್ಲಿ 7 ಗೋಲು ಗಳಿಸಿದ್ದರು.

  ಇದನ್ನು ಓದಿ: T20 World Cup 2022: ಭಾರತಕ್ಕೆ ಪಾಕಿಸ್ತಾನವೇ ಮೊದಲ ಎದುರಾಳಿ; ಇಲ್ಲಿದೆ ವೇಳಾಪಟ್ಟಿ

  ದೇಶಿಯಲ್ಲಿ ಮಟ್ಟದಲ್ಲೂ ಸುಭಾಷ್​ ಭೌಮಿಕ್ ಗುರುತಿಸಿಕೊಳ್ಳುವ ಮೂಲಕ ಅನೇಕ ಮೆಚ್ಚುಗೆಗೆ ಪಾತ್ರರಾಗಿದ್ದರು. ಬಂಗಾಳಕ್ಕಾಗಿ 5 ಬಾರಿ ಸಂತೋಷ್​​ ಟ್ರೋಫಿಯಲ್ಲಿ ಭಾಗವಹಿಸಿದ್ದರು. ಮಾತ್ರವಲ್ಲದೆ ತಂಡದ ನಾಯಕತ್ವವನ್ನು ಮುನ್ನಡೆಸುವ ಮೂಲಕ 4 ಬಾರಿ ಚಾಂಪಿಯನ್​ ಆದರು. ಜೊತೆಗೆ 24 ಗೋಲಿಗಳನ್ನು ಬಾರಿಸುವ ಮೂಲಕ ಗುರುತಿಸಿಕೊಂಡಿದ್ದರು.

  ಸುಭಾಷ್​ ಭೌಮಿಕ್ ಕ್ಲಬ್​ಗಾಗಿ ಮೂರು ಬಾರಿ ಐಎಫ್​ಎ ಶೀಲ್ಡ್​ ಗೆದ್ದಿದ್ದಾರೆ. ಈಸ್ಟ್​​ ಬೆಂಗಾಲ್​ ಜೊತೆಗೆ ಜಿದ್ದಿಗೆ ಇಳಿದಾಗ 82 ಗೋಲುಗಳನ್ನು ಗಳಿಸುವ ಮೂಲಕ ಅಚ್ಚರಿ ಮೂಡಿಸಿದ್ದರು. ಮೂರು ಬಾರಿ ಕೋಲ್ಕತ್ತಾ ಫುಟ್​ಬಾಲ್​ ಲೀಗ್​ ಪ್ರಶಸ್ತಿಯನ್ನು ಗೆದ್ದಿದ್ದಾರೆ.

  ಇದನ್ನು ಓದಿ: ಭಾರತದಲ್ಲಿ ಸುಳ್ಳು ಸುದ್ದಿ ಹರಡುತ್ತಿದ್ದ ಪಾಕಿಸ್ತಾನದ 41 Social Media ಖಾತೆ ಬ್ಯಾನ್

  ಸುಭಾಷ್​ ಭೌಮಿಕ್ ಕೋಚ್​ ಆಗಿಯೂ ಕೆಲಸ ಮಾಡಿದ್ದಾರೆ. 2002- 2004ರ ನಡುವೆ ಕಠ್ಮಂಡುವಿನಲ್ಲಿ ನಡೆದ ರಾಷ್ಟ್ರೀಯ ಫುಟ್​ಬಾಲ್​ ಲೀಗ್​ ಗಾಗಿ ಪೂರ್ವ ಬಂಗಾಳವನ್ನು ಮುನ್ನೆಸಿದ್ದರು. 2003ರಲ್ಲಿ ತಂಡದ ತರಬೇತುದಾರರಾಗಿ ಜಕಾರ್ತಾದಲ್ಲಿ ನಡೆದ ಎಲ್​ಜಿ ಏಷ್ಯನ್​ ಬ್ಲಬ್​ ಕಪ್​ ಪ್ರಶಸ್ತಿ ಗೆಲ್ಲಲು ಕಾರಣರಾದರು. ಫುಟ್ಬಾಲ್​ ಅಂಗಳದಲ್ಲಿ ಸಾಕಷ್ಟು ಸಾಧನೆ ಮಾಡಿದ ಸುಭಾಷ್​ ಭೌಮಿಕ್ ಅವರಿಗೆ 2017ರಲ್ಲಿ ಪೂರ್ವ ಬಂಗಾಳದ ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡಲಾಯಿತು.
  Published by:Harshith AS
  First published: