MS Dhoni| ಟಿ20 ವಿಶ್ವಕಪ್​; ಭಾರತ ತಂಡಕ್ಕೆ ಹೊಸ ಮೆಂಟರ್​ ಆಗಿ ಎಂ.ಎಸ್​. ಧೋನಿ ಆಯ್ಕೆ!

ಟಿ20 ವಿಶ್ವಕಪ್ ಟೂರ್ನಿಗೆ ಭಾರತ ತಂಡದ ಮೆಂಟರ್ ಯಾರು? ಎಂಬ ಪ್ರಶ್ನೆ ಕಳೆದ ಒಂದು ವರ್ಷದಿಂದ ಭಾರೀ ಸದ್ದು ಮಾಡುತ್ತಿತ್ತು. ಆದರೆ, ಆ ಮಹತ್ವದ ಪ್ರಶ್ನೆಗೆ ಇಂದು ಕೊನೆಗೂ ಉತ್ತರ ಸಿಕ್ಕಿದೆ.

ಎಂ.ಎಸ್. ಧೋನಿ.

ಎಂ.ಎಸ್. ಧೋನಿ.

 • Share this:
  ಮುಂಬೈ (ಸೆಪ್ಟೆಂಬರ್ 08); ಭಾರತ ಪ್ರಸ್ತುತ ಇಂಗ್ಲೆಂಡ್ ಎದುರು ಟೆಸ್ಟ್​ ಸರಣಿಯಲ್ಲಿ ಮುನ್ನಡೆ ಸಾಧಿಸಿದೆ. ಆದರೆ, ಅಕ್ಟೋಬರ್​ನಲ್ಲಿ ನಡೆಯಲಿರುವ ಟಿ-20 ವಿಶ್ವಕಪ್ ಟೂರ್ನಿ ಗೆಲುವು ನಿಜಕ್ಕೂ ಭಾರತದ ಅತ್ಯಂತ ದೊಡ್ಡ ಗುರಿಯಾಗಿದೆ. ದಶಕಗಳ ನಂತರ ಮತ್ತೆ ಟಿ20 ವಿಶ್ವಕಪ್​ಗೆ ಮುತ್ತಿಕ್ಕಲು ಭಾರತ ತಂಡ ವಿರಾಟ್ ಕೊಹ್ಲಿ ನೇತೃತ್ವದಲ್ಲಿ ಕಾತುರದಿಂದ ಕಾಯುತ್ತಿದೆ. ಆದರೆ, ಈ ಟೂರ್ನಿಗೆ ಭಾರತ ತಂಡದ ಮೆಂಟರ್ ಯಾರು? ಎಂಬ ಪ್ರಶ್ನೆ ಕಳೆದ ಒಂದು ವರ್ಷದಿಂದ ಭಾರೀ ಸದ್ದು ಮಾಡುತ್ತಿತ್ತು. ಆದರೆ, ಆ ಮಹತ್ವದ ಪ್ರಶ್ನೆಗೆ ಇಂದು ಕೊನೆಗೂ ಉತ್ತರ ಸಿಕ್ಕಿದೆ. ಸದ್ಯಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿ ಪಡೆದು ಐಪಿಎಲ್​ನಲ್ಲಿ ಸಕ್ರೀಯವಾಗಿರುವ ಯಶಸ್ವಿ ನಾಯಕ ಎಂ.ಎಸ್​. ಧೋನಿಯನ್ನು ಮುಂದಿನ ಟಿ-20 ವಿಶ್ವಕಪ್​ಗೆ ಭಾರತ ಕ್ರಿಕೆಟ್ ತಂಡದ ಮೆಂಟರ್​ ಆಗಿ ಬಿಸಿಸಿಐ ಇಂದು ಘೋಷಿಸಿದೆ. ಈ ದಿಢೀರ್ ಬೆಳವಣಿಗೆ ಒಮ್ಮೆಲೆ ಅಚ್ಚರಿಗೂ ಕುತೂಹಲಕ್ಕೂ ಕಾರಣವಾಗಿದೆ.  ಎಂ.ಎಸ್​. ಧೋನಿ ಭಾರತದ ಯಶಸ್ವಿ ನಾಯಕರಲ್ಲಿ ಒಬ್ಬರೆನಿಸಿಕೊಂಡಿದ್ದಾರೆ. 2007 ರಲ್ಲಿ ಮೊದಲ ಬಾರಿಗೆ ದಕ್ಷಿಣ ಆಫ್ರಿಕಾದಲ್ಲಿ ನಡೆದ ಟಿ20 ವಿಶ್ವಕಪ್​ನಲ್ಲಿ ಭಾರತ ತಂಡದ ಸಾರಥ್ಯ ವಹಿಸಿದ್ದ ಧೋನಿ ನಂತರ ಹಿಂತಿರುಗಿ ನೋಡಿದ್ದೆ ಇಲ್ಲ. ಮೊದಲ ಟೂರ್ನಿಯಲ್ಲೇ ಭಾರತಕ್ಕೆ ವಿಶ್ವಕಪ್ ಜಯಿಸಿಕೊಟ್ಟಿದ್ದರು. ಅಲ್ಲದೆ ಅದೇ ವರ್ಷ ಏಕದಿನ ತಂಡಕ್ಕೂ ನಾಯಕರಾಗಿ ಬಡ್ತಿ ಹೊಂದಿದ್ದರು.

  2008ರಲ್ಲಿ ಟೆಸ್ಟ್​ಗೂ ನಾಯಕರಾಗುವ ಮೂಲಕ ಭಾರತದ ಎಲ್ಲಾ ಮಾದರಿಯ ಕ್ರಿಕೆಟ್​ಗೂ ನಾಯಕರಾಗಿದ್ದರು. ಅಲ್ಲದೆ, 2011ರಲ್ಲಿ ಏಕದಿನ ವಿಶ್ವಕಪ್ ಗೆಲ್ಲುವ ಮೂಲಕ 28 ವರ್ಷಗಳ ನಂತರ ಭಾರತಕ್ಕೆ ಏಕದಿನ ವಿಶ್ವಕಪ್ ತಂದುಕೊಟ್ಟ ಶ್ರೇಯಕ್ಕೂ ಪಾತ್ರರಾಗಿದ್ದರು. ಅದೇ ವರ್ಷ ಚಾಂಪಿಯನ್ ಟ್ರೋಫಿಯನ್ನೂ ಗೆಲ್ಲುವ ಮೂಲಕ ಮೂರೂ ಮಾದರಿಯಲ್ಲಿ ಟ್ರೋಫಿ ಗೆದ್ದ ಏಕೈಕ ನಾಯಕ ಎಂಬ ಹೊಸ ಇತಿಹಾಸವನ್ನು ಎಂ.ಎಸ್​. ಧೋನಿ ಬರೆದಿದ್ದರು.

  ಇದಲ್ಲದೆ, 2015ರ ವಿಶ್ವಕಪ್​ನಲ್ಲಿ ಧೋನಿ ನೃತೃತ್ವದ ಭಾರತ ತಂಡ ಮತ್ತೊಮ್ಮೆ ಸೆಮಿಫೈನಲ್ ತಲುಪಿತ್ತಾದರೂ ಎಡವಿತ್ತು. ಅದೇ ವರ್ಷ ನಾಯಕತ್ವಕ್ಕೆ ಧೋನಿ ಗುಡ್​ ಬೈ ಹೇಳಿದ್ದರು. ವಿರಾಟ್​ ಕೊಹ್ಲಿ ನೇತೃತ್ವದಲ್ಲಿ ಕೊಹ್ಲಿ ಕೊನೆಯ ಬಾರಿಗೆ 2019ರ ಏಕದಿನ ವಿಶ್ವಕಪ್​ನಲ್ಲಿ ನ್ಯೂಜಿಲೆಂಡ್ ವಿರುದ್ದ ಸೆಮಿ ಫೈನಲ್ ಪಂದ್ಯದಲ್ಲಿ ಕಣಕ್ಕಿಳಿದಿದ್ದರು. ಅಲ್ಲದೆ, ಅರ್ಧ ಶತಕವನ್ನೂ ಬಾರಿಸಿದ್ದರು. ಆದರೆ, ದುರಾದೃಷ್ಟವಶಾತ್ ಈ ಪಂದ್ಯದಲ್ಲಿ ಭಾರತ ಸೋಲನುಭವಿಸಿತ್ತು.

  ಆ ನಂತರ ಮಹೇಂದ್ರ ಸಿಂಗ್ ಧೋನಿ ವಿದಾಯ ಪಂದ್ಯ ಆಡುವ ಮೊದಲೇ ನಿವೃತ್ತಿ ಘೋಷಿಸಿದ್ದರು. ಹೀಗಾಗಿ ಭಾರತ ಕ್ರಿಕೆಟ್ ತಂಡದ ಯಶಸ್ವಿ ನಾಯಕನಿಗೆ ಬಿಸಿಸಿಐ ಭವಿಷ್ಯದಲ್ಲಿ ಯಾವ ಜವಾಬ್ದಾರಿ ನೀಡಲಿದೆ? ಎಂಬ ಪ್ರಶ್ನೆ ಎಲ್ಲೆಡೆ ಮನೆ ಮಾಡಿತ್ತು. ಆದರೆ, ಈ ಎಲ್ಲಾ ಪ್ರಶ್ನೆಗಳಿಗೆ ತೆರೆ ಎಳೆದಿರುವ ಬಿಸಿಸಿಐ ಕೊನೆಗೂ ಧೋನಿಯನ್ನು ಟಿ20 ವಿಶ್ವಕಪ್​ಗೆ ಮೆಂಟರ್ ಆಗಿ ಆಯ್ಕೆ ಮಾಡಿದೆ. ಈ ಬೆಳವಣಿಗೆ ಸಾಮಾನ್ಯವಾಗಿ ಧೋನಿ ಅಭಿಮಾನಿಗಳಲ್ಲಿ ಸಂತೋಷವನ್ನು ಉಂಟು ಮಾಡಿದೆ.
  Published by:MAshok Kumar
  First published: