ಭಾರತದ ಮಾಜಿ ಸ್ಫೋಟಕ ಕ್ರಿಕೆಟ್​ ಆಟಗಾರ ಇನ್ನಿಲ್ಲ; ವಿಬಿ ಚಂದ್ರಶೇಖರ್​ ಹೃದಯಾಘಾತದಿಂದ ಸಾವು

ಚಂದ್ರಶೇಖರ್ ಅವರು ಕೋಚಿಂಗ್ ಹಾಗೂ ವೀಕ್ಷಕ ವಿವರಣೆಯಲ್ಲೂ ಕೆಲಸ ಮಾಡಿದ್ದಾರೆ. ಅಲ್ಲದೆ ಕೆಲವು ಸಮಯ ರಾಷ್ಟ್ರೀಯ ಆಯ್ಕೆ ಸಮಿತಿಯಲ್ಲೂ ಸೇವೆ ಸಲ್ಲಿಸಿದ್ದರು.

Vinay Bhat | news18
Updated:August 16, 2019, 9:18 AM IST
ಭಾರತದ ಮಾಜಿ ಸ್ಫೋಟಕ ಕ್ರಿಕೆಟ್​ ಆಟಗಾರ ಇನ್ನಿಲ್ಲ; ವಿಬಿ ಚಂದ್ರಶೇಖರ್​ ಹೃದಯಾಘಾತದಿಂದ ಸಾವು
ವಿಬಿ ಚಂದ್ರಶೇಖರ್
  • News18
  • Last Updated: August 16, 2019, 9:18 AM IST
  • Share this:
ಬೆಂಗಳೂರು (ಆ. 16): ಭಾರತ ಕ್ರಿಕೆಟ್ ತಂಡದ ಮಾಜಿ ಸ್ಪೋಟಕ ಆಟಗಾರ ವಿಬಿ ಚಂದ್ರಶೇಖರ್ ಅವರು ಚೆನ್ನೈನ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. 57 ವರ್ಷ ಪ್ರಾಯದ ಇವರು ಪತ್ನಿ ಹಾಗೂ ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.

ಚಂದ್ರಶೇಖರ್ ಅವರು ಟೀಂ ಇಂಡಿಯಾ ಪರ ಏಳು ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು, ಹೆಚ್ಚಾಗಿ ಪ್ರಥಮ ದರ್ಜೆ ಕ್ರಿಕೆಟ್​​ನಲ್ಲೇ ಮಿಂಚಿದವರು.

ತನ್ನದೇ ಆದ ವಿಶಿಷ್ಟ ರೀತಿಯ ಬ್ಯಾಟಿಂಗ್​ ಸ್ಟೈಲ್​ನಿಂದಲೇ ಮಿಂಚಿದ್ದ ಇವರು 1988 ರಲ್ಲಿ ನಡೆದ ಇರಾನಿ ಟ್ರೋಫಿಯ ಪಂದ್ಯವೊಂದರಲ್ಲಿ ಕೇವಲ 56 ಎಸೆತಗಳಲ್ಲಿ ಶತಕ ಸಿಡಿಸಿ ತಂಡದ ಗೆಲುವಿಗೆ ಪ್ರಮುಖ ಪಾತ್ರವಹಿಸಿದ್ದರು. ಇವರ ಈ ಆಟ ಪ್ರಥಮ ದರ್ಜೆ ಕ್ರಿಕೆಟ್​​ನಲ್ಲಿ ಅತಿ ವೇಗದ ಶತಕವಾಗಿತ್ತು.

Video Viral: ಝಾನ್ಸಿಯಾದ ಜೀವಾ; ಅಪ್ಪನಂತೆ ದೇಶ ಪ್ರೇಮ ಮೆರೆದ ಮಾಹಿ ಮಗಳು

ಚಂದ್ರಶೇಖರ್ ಅವರು ಕೋಚಿಂಗ್ ಹಾಗೂ ವೀಕ್ಷಕ ವಿವರಣೆಯಲ್ಲೂ ಕೆಲಸ ಮಾಡಿದ್ದಾರೆ. ಅಲ್ಲದೆ ಕೆಲವು ಸಮಯ ರಾಷ್ಟ್ರೀಯ ಆಯ್ಕೆ ಸಮಿತಿಯಲ್ಲೂ ಸೇವೆ ಸಲ್ಲಿಸಿದ್ದರು. ಇದೀಗ ಅವರ ಅಕಾಲಿಕ ಮರಣಕ್ಕೆ ಕ್ರಿಕೆಟ್ ಲೋಕ ಕಂಬನಿ ಮಿಡಿದಿದೆ.

First published:August 16, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...