ಟೀಂ ಇಂಡಿಯಾದಿಂದ ಅರ್ಧಕ್ಕೆ ಕೈ ಬಿಟ್ಟ ವಿಚಾರ; 37 ವರ್ಷಗಳಾದರೂ ನೋವು ಮರೆತಿಲ್ಲ ಕನ್ನಡಿಗ ಗುಂಡಪ್ಪ ವಿಶ್ವನಾಥ್

ಗುಂಡಪ್ಪ ಕರ್ನಾಟಕದವರು. ಕರ್ನಾಟಕದಿಂದ ಟೀಂ ಇಂಡಿಯಾಗೆ ಆಯ್ಕೆಯಾದ ಮೊದಲ ಅತ್ಯದ್ಭುತ​ ಬ್ಯಾಟ್ಸ್​ಮನ್​ ಕೂಡ ಹೌದು. ಕರ್ನಾಟಕ ರಣಜಿ ತಂಡದಲ್ಲಿ ಇವರು ಪ್ರಮುಖ ಪಾತ್ರವಹಿಸಿದ್ದರು.

news18-kannada
Updated:June 28, 2020, 11:32 AM IST
ಟೀಂ ಇಂಡಿಯಾದಿಂದ ಅರ್ಧಕ್ಕೆ ಕೈ ಬಿಟ್ಟ ವಿಚಾರ; 37 ವರ್ಷಗಳಾದರೂ ನೋವು ಮರೆತಿಲ್ಲ ಕನ್ನಡಿಗ ಗುಂಡಪ್ಪ ವಿಶ್ವನಾಥ್
ಗುಂಡಪ್ಪ
  • Share this:
70ರ ದಶಕದಲ್ಲಿ ಭಾರತ ಕಂಡ ಅತ್ಯುತ್ತಮ ಕ್ರಿಕೆಟ್​ ಆಟಗಾರ ಎಂದರೆ, ಗುಂಡಪ್ಪ ವಿಶ್ವನಾಥ್​. ಒಂದು ಮ್ಯಾಚ್​ನಲ್ಲಿ ಆಡಿಲ್ಲ ಎನ್ನುವ ಕಾರಣಕ್ಕೆ ಕನ್ನಡಿಗನ ಕ್ರಿಕೆಟ್​ ಜೀವನಕ್ಕೆ ಪೂರ್ಣವಿರಾಮ ಇಡಲಾಗಿತ್ತು. 37 ವರ್ಷಗಳೇ ಕಳೆದರೂ ಈ ನೋವನ್ನು ಗುಂಡಪ್ಪ ಮರೆತಿಲ್ಲ.

1982-83ನೇ ಅವಧಿಯಲ್ಲಿ ಪಾಕ್​ ವಿರುದ್ಧದ 6 ಟೆಸ್ಟ್​ ಸರಣಿಯಲ್ಲಿ ಗುಂಡಪ್ಪ ಕಳಪೆ ಪ್ರದರ್ಶನ ನೀಡಿದ್ದರು. ಹೀಗಾಗಿ, ಅವರನ್ನು ವೆಸ್ಟ್​ ಇಂಡೀಸ್​ ಟೂರ್​ನಿಂದ ಕೈಬಿಡಲಾಗಿತ್ತು. 1983ರ ವಿಶ್ವಕಪ್​ ತಂಡದಲ್ಲೂ ಗುಂಡಪ್ಪ ಅವರಿಗೆ ಸ್ಥಾನ ಸಿಕ್ಕಿರಲಿಲ್ಲ. ನಂತರ ಅವರ ಕ್ರಿಕೆಟ್​ ಕೆರಿಯರ್​ ಸಂಪೂರ್ಣವಾಗಿ ಅಂತ್ಯ ಕಂಡಿತ್ತು.

“ನನ್ನನ್ನು ತಂಡದಿಂದ ಕೈ ಬಿಟ್ಟ ವಿಚಾರ ತುಂಬಾನೇ ನೋವು ತಂದಿತ್ತು. ಮೊದಲ ಮೂರು ಇನ್ನಿಂಗ್ಸ್​ನಲ್ಲಿ ನಾನು ತಪ್ಪು ನಿರ್ಧಾರಗಳನ್ನು ಕೈಗೊಂಡಿದ್ದೆ. ನಂತರದ ಎರಡು ಇನ್ನಿಂಗ್ಸ್​ನಲ್ಲಿ ನಾನು ಉತ್ತಮ ಪ್ರದರ್ಶನ ನೀಡಿದ್ದರೆ ನನ್ನನ್ನು ತಂಡದಿಂದ ಕೈ ಬಿಡುತ್ತಿರಲಿಲ್ಲ,” ಎಂದಿದ್ದಾರೆ ಗುಂಡಪ್ಪ.

ಇದನ್ನೂ ಓದಿ: KKR ತಂಡದಿಂದ ಔಟ್: IPL ಗೆ ಗುಡ್​ಬೈ, CPL ಗೆ ಜೈ..!

ಗುಂಡಪ್ಪ ಕರ್ನಾಟಕದವರು. ಕರ್ನಾಟಕದಿಂದ ಟೀಂ ಇಂಡಿಯಾಗೆ ಆಯ್ಕೆಯಾದ ಮೊದಲ ಅತ್ಯದ್ಭುತ​ ಬ್ಯಾಟ್ಸ್​ಮನ್​ ಕೂಡ ಹೌದು. ಕರ್ನಾಟಕ ರಣಜಿ ತಂಡದಲ್ಲಿ ಇವರು ಪ್ರಮುಖ ಪಾತ್ರವಹಿಸಿದ್ದರು. “ಎರಪ್ಪಳ್ಳಿ ಪ್ರಸನ್ನ ಅವರು ನನ್ನ ಟ್ಯಾಲೆಂಟ್​ಅನ್ನು ಮೊದಲು ಗುರುತಿಸಿದ್ದರು. ಅವರಿಗೆ ನಾನು ಧನ್ಯವಾದ ಹೇಳಲೇಬೇಕು. ರಾಜ್ಯಕ್ಕೋಸ್ಕರ ಆಡಲು ಅವರ ಉತ್ತೇಜನವೇ ಸಹಕಾರಿಯಾಗಿತ್ತು. ಟೀಂ ಇಂಡಿಯಾ ನಾಯಕನಾಗಿದ್ದ ಮನ್ಸೂರ್ ಅಲಿ ಖಾನ್​  ನನ್ನನ್ನು ಹತ್ತಿರದಿಂದ ಗಮನಿಸಿದ್ದರು,” ಎಂದಿದ್ದಾರೆ

1969ರಲ್ಲಿ ಕಾನ್ಪುರದಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಮ್ಯಾಚ್​ನಲ್ಲಿ ಗುಂಡಪ್ಪ ಮೊದಲ ಬಾರಿಗೆ ಬ್ಯಾಟ್ ಬೀಸಿದ್ದರು. ಮೊದಲ ಪಂದ್ಯದಲ್ಲೇ ಅವರು ಶತಕ ಬಾರಿಸಿದ್ದರು. 
First published:June 28, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading