T20 World Cup: ಭಾರತದ ಸೋಲಿಗೆ ಐದು ಕಾರಣಗಳು

1992 ರಿಂದ ನಿರಂತರವಾಗಿ 12 ಗೆಲುವುಗಳನ್ನು ತನ್ನದಾಗಿಸಿಕೊಂಡಿದ್ದ ಭಾರತ (India) ನಿನ್ನೆ ಸೋಲಿನ ರುಚಿ ಕಂಡಿದೆ. ಇತ್ತ 12 ಸೋಲುಗಳ ಬಳಿಕ ಪಾಕಿಸ್ತಾನ ಮೊದ ವಿಶ್ವಕಪ್ ಪಂದ್ಯಗಳಲ್ಲಿ ಗೆದ್ದು ಬೀಗಿದೆ. ಹಾಗಾದ್ರೆ ಭಾರತದ ಸೋಲಿಗೆ ಕಾರಣಗಳು ಏನು ಎಂಬುದರ ಮಾಹಿತಿ ಇಲ್ಲಿದೆ.

ಟೀಂ ಇಂಡಿಯಾ

ಟೀಂ ಇಂಡಿಯಾ

  • Share this:
ನವದೆಹಲಿ: ಇಷ್ಟು ದಿನ ನಡೆಯದ ಘಟನೆ ಭಾನುವಾರ ದುಬೈ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಿತು. ಕಳೆದ 29 ವರ್ಷಗಳಲ್ಲಿ ಮೊದಲ ಬಾರಿಗೆ ಟೀಂ ಇಂಡಿಯಾ (Team India) ವಿಶ್ವಕಪ್ ಪಂದ್ಯ(T20 World Cup)ಗಳಲ್ಲಿ ಪಾಕಿಸ್ತಾನ(Pakistan)ದ ವಿರುದ್ಧ ಸೋಲು ಕಂಡಿದೆ. 1992 ರಿಂದ ನಿರಂತರವಾಗಿ 12 ಗೆಲುವುಗಳನ್ನು ತನ್ನದಾಗಿಸಿಕೊಂಡಿದ್ದ ಭಾರತ (India) ನಿನ್ನೆ ಸೋಲಿನ ರುಚಿ ಕಂಡಿದೆ. ಇತ್ತ 12 ಸೋಲುಗಳ ಬಳಿಕ ಪಾಕಿಸ್ತಾನ ಮೊದ ವಿಶ್ವಕಪ್ ಪಂದ್ಯಗಳಲ್ಲಿ ಗೆದ್ದು ಬೀಗಿದೆ. ಹಾಗಾದ್ರೆ ಭಾರತದ ಸೋಲಿಗೆ ಕಾರಣಗಳು ಏನು ಎಂಬುದರ ಮಾಹಿತಿ ಇಲ್ಲಿದೆ.

1. ಪ್ಲಾನಿಂಗ್ ಮಾಡಿಕೊಳ್ಳದ ರೋಹಿತ್ ಮತ್ತು ರಾಹುಲ್

ಶಾಹಿನ್ ಶಾ  ಅಫ್ರಿದಿ ಟಿ20ಯಲ್ಲಿ ಹೇಗೆ ಆಡುತ್ತಾರೆ ಎಂಬುವುದು ಎಲ್ಲರಿಗೂ ತಿಳಿದಿರುವ ವಿಚಾರ. ಓಪನಿಂಗ್ ಓವರ್ ನಲ್ಲಿ ಬೌಲಿಂಗ್ ನಲ್ಲಿ ವಿಕೆಟ್ ಪಡೆದುಕೊಳ್ಳುವ ಆಟಗಾರ ಅನ್ನೋದು ಹಿಂದಿನ ಪಂದ್ಯಗಳಲ್ಲಿ ಸಾಬೀತಾಗಿದೆ. ಪ್ರತಿಗಂಟೆಗೆ 145 ಕಿ.ಮೀ. ವೇಗದಲ್ಲಿ ಬಾಲ್ ಎಸೆಯುವ ಬಗ್ಗೆ ಟೀಂ ಇಂಡಿಯಾ ಆಟಗಾರರು ನಿರ್ಲಕ್ಷ್ಯ ಮಾಡಿದ್ರು ಎಂಬ ಮಾತುಗಳು ಕೇಳಿ ಬರುತ್ತಿವೆ. ತಮ್ಮ 62 ಇನ್ನಿಂಗ್ಸ್ 22 ಬಾರಿ ಮೊದಲ ಬಾರಿಗೆ ವಿಕೆಟ್ ಪಡೆದುಕೊಂಡಿದ್ದಾರೆ. ಪವರ್ ಪ್ಲೇನಲ್ಲಿಯೂ ವಿಕೆಟ್ ತೆಗೆಯುವ ಬೌಲರ್ ಆಗಿದ್ದಾರೆ. ಆರಂಭಿಕರಾಗಿ ಮೈದಾನಕ್ಕಿಳಿದ ರೋಹಿತ್ ಶರ್ಮಾ ಮತ್ತು ಕೆ.ಎಲ್.ರಾಹುಲ್ ಹೋಮ್ ವರ್ಕ್ ಮಾಡಿಕೊಂಡಿರಲಿಲ್ವಾ ಅನ್ನೋ ಪ್ರಶ್ನೆ ಎದುರಾಗಿದೆ.

ಇದನ್ನೂ ಓದಿ:  Fans Depression- ಟೀಮ್ ಇಂಡಿಯಾ ಸೋಲಿಂದ ಖಿನ್ನರಾದ ಫ್ಯಾನ್ಸ್; ಮನಃಶಾಸ್ತ್ರಜ್ಞರಿಂದ ಈ ಸಲಹೆ

2. ಮತ್ತೆ ವಿಫಲವಾದ ರಿಷಬ್ ಪಂತ್

ಟೀಂ ಇಂಡಿಯಾದ ಮೂರು ವಿಕೆಟ್ ಗಳು ಮೂರು 31 ರನ್ ಗಳಲ್ಲಿ ಹೋಗಿದ್ದವು. ತದನಂತರ ಬಂದ ರಿಷಭ್ ಪಂತ್ ಕ್ಯಾಪ್ಟನ್ ವಿರಾಟ್ ಕೊಹ್ಲಿಗೆ ಜೊತೆಯಾಗಿ ಆಡಲು ಪ್ರಯತ್ನಿಸಿದರು. ಇಬ್ಬರು ಜೊತೆಯಾಗಿ ತಂಡದ ರನ್ 84ವರೆಗೂ ತಂದಿತ್ತು. ಆದ್ರೆ ತಪ್ಪು ಹೊಡೆತದಿಂದಾಗಿ ರಿಷಬ್ ಪಂತ್ ಪೆವಿಲಿಯನ್ ಸೇರಿದರು. 2019ರ ವಿಶ್ವ ಕಪ್ ನಲ್ಲಿ ನ್ಯೂಜಿಲೆಂಡ್ ವಿರುದ್ಧ ಇಂತಹವುದೇ ಹೊಡೆತಕ್ಕೆ ಮುಂದಾಗಿ ವಿಕೆಟ್ ಒಪ್ಪಿಸಿದ್ದರು.

3 . ಹಾರ್ದಿಕ್ ಪಾಂಡ್ಯ ಸೇಪರ್ಡೆ

ಹಾರ್ದಿಕ್ ಪಾಂಡ್ಯ ಬೌಲಿಂಗ್ ಮಾಡಲ್ಲ ಅನ್ನೋದು ಸ್ಪಷ್ಟವಾಗಿತ್ತು. ಕಳೆದ ಕೆಲ ದಿನಗಳಿಂದ ಬ್ಯಾಟಿಂಗ್ ನಲ್ಲಿಯೂ ಹಾರ್ದಿಕ ಉತ್ತರ ಪ್ರದರ್ಶನ ನೀಡುವಲ್ಲಿ ವಿಫಲವಾಗಿದ್ದಾರೆ. ಆದ್ರೂ ಈ ಕೊರತೆಗಳ ನಡುವೆ ಹಾರ್ದಿಕ್ ಪಾಂಡ್ಯರನ್ನು ಟೀಂ 11ರ ಬಳಗದಲ್ಲಿ ಸೇರಿಸಿಕೊಳ್ಳಲಾಗಿತ್ತು. ಹಾರ್ದಿಕ್ ಪಾಂಡ್ಯ 8 ಎಸೆತದಲ್ಲಿ 11 ರನ್ ಗಳಿಸಲು ಮಾತ್ರ ಶಕ್ತರಾದರು.

ಇದನ್ನೂ ಓದಿ:  Shaheen Afridi- ಶಾಹೀನ್ ಮೊದಲ ಓವರ್ ತಂಬಾ ಡೇಂಜರ್ ಎಂದು ಇವರಂದದ್ದು ನಿಜ ಆಯ್ತು

4. ಬೌಲಿಂಗ್ ಪ್ಲಾನ್ ಪ್ಲಾಪ್

ವಿರಾಟ್ ಕೊಹ್ಲಿ ಬೌಲಿಂಗ್ ಪ್ಲಾನ್ ಸಂಪೂರ್ಣ ಪ್ಲಾಪ್ ಆಗಿತ್ತು. ಭಾರತಕ್ಕೆ ಮೊದಲ ಓವರ್ ನಿಂದಲೇ ವಿಕೆಟ್ ತೆಗೆದುಕೊಳ್ಳುವ ಅನಿವಾರ್ಯತೆ ಇತ್ತು. ಆದ್ರೂ ವಿರಾಟ್ ಕೊಹ್ಲಿ ಯಾವುದೇ ಬಲಿಷ್ಠ ಪ್ಲಾನ್ ರೂಪಿಸಿಕೊಂಡಿರೋದು ನಿನ್ನೆಯ ಪಂದ್ಯದಲ್ಲಿ ಕಾಣಿಸುತ್ತಿತ್ತು. ಮೊದಲ ನಾಲ್ಕು ಓವರ್ ನಲ್ಲಿ ನಾಲ್ವರಿಂದ ಬೌಲಿಂಗ್ ಮಾಡಿಸಿ ವಿಕೆಟ್ ತೆಗೆದುಕೊಳ್ಳುವ ಪ್ರಯತ್ನ ಫಲಪ್ರದ ಕೊಡಲಿಲ್ಲ. ಆದ್ರೆ ಬೌನ್ಸರ್ ಗಳನ್ನು ವಿರಾಟ್ ಕೊಹ್ಲಿ ಬಳಸಿಕೊಳ್ಳಲಿಲ್ಲ.

5. ಬಾಬರ್ ಮತ್ತು ರಿಜ್ವಾನ್ ವಿರುದ್ಧ ಇರಲಿಲ್ಲ ಪ್ಲಾನ್ ಬಿ

ಈ ಪಂದ್ಯದಲ್ಲಿ ಪಾಕಿಸ್ತಾನದ ಮೂವರು ಆಟಗಾರರು ಭಾರತಕ್ಕೆ ದೊಡ್ಡ ಸವಾಲು ಆಗ್ತಾರೆ ಅಂತ ಮೊದಲಿನಿಂದಲೇ ಹೇಳಲಾಗುತ್ತಿತ್ತು. ಬೌಲಿಂಗ್ ನಲ್ಲಿ ಶಾಹಿನ್ ಶಾ ಆಫ್ರಿದಿ ಮತ್ತು ಬ್ಯಾಟಿಂಗ್ ನಲ್ಲಿ ಬಾಬರ್ ಅಜಮ್ ಹಾಗೂ ಮೊಹ್ಮದ್ ರಿಜ್ವಾನ್. ಇಬ್ಬರು ಆಟಗಾರರು ಸ್ಪೋಟಕವಾಗಿ ಬ್ಯಾಟ್ ಬೀಸುತ್ತಿದ್ರೆ ಟೀಂ ಇಂಡಿಯಾ ಬೌಲರ್ ಗಳ ಬಾಲ್ ಸ್ವಿಂಗ್ ಆಗುತ್ತಿರಲಿಲ್ಲ. ಇತ್ತ ಆಫ್ರಿದಿ ಬೌಲಿಂಗ್ ಮಾಡುತ್ತಿದ್ರೆ ವಿಕೆಟ್ ಒಪ್ಪಿಸಲು ಆಟಗಾರರು ನಿಂತಂತೆ ಕಾಣಿಸುತ್ತಿತ್ತು.

5. ಕೊಹ್ಲಿ ಮಾತ್ರ ದಿಟ್ಟ ಬ್ಯಾಟಿಂಗ್:

ಭಾರತದ ಇನ್ನಿಂಗ್ಸಲ್ಲಿ ವಿರಾಟ್ ಕೊಹ್ಲಿ ಅವರೊಬ್ಬರೇ ದಿಟ್ಟವಾಗಿ ಪಾಕ್ ಬೌಲಿಂಗ್ ದಾಳಿಯನ್ನ ಎದುರಿಸಿದ್ದು. ರಿಷಭ್ ಪಂತ್ ಕೆಲವಷ್ಟು ಜೀವದಾನಗಳನ್ನ ಪಡೆದರೂ ಬಿಡುಬೀಸಾಗಿ ಬ್ಯಾಟ್ ಬೀಸಿ ರನ್ ಗಳಿಸುವಲ್ಲಿ ಯಶಸ್ವಿಯಾದರು. ಸೂರ್ಯಕುಮಾರ್ ಯಾದವ್ ಉತ್ತಮ ಲಯದಲ್ಲಿದ್ದಂತಿದ್ದರೂ ದುರದೃಷ್ಟವಶಾತ್ ಬೇಗನೇ ಔಟಾಗಿಬಿಟ್ಟರು. 19ನೇ ಓವರ್​ನಲ್ಲಿ ವಿರಾಟ್ ಕೊಹ್ಲಿಯೂ ಔಟಾದರು. ಶಾಹೀನ್ ಅಫ್ರಿದಿ ಅವರು ತಮ್ಮ ಕೊನೆಯ ಓವರ್​ನಲ್ಲಿ ಕೊಹ್ಲಿಯನ್ನ ಬಲಿತೆಗೆದುಕೊಂಡರು
Published by:Mahmadrafik K
First published: