HOME » NEWS » Sports » CRICKET FIRST LOOK OF HARBHAJAN SINGH FRIENDSHIP IS UNINSPIRING HG

ಯ್ಯೂಟೂಬ್​ನಲ್ಲಿ ಬಿಡುಗಡೆಯಾಗಿದೆ ಹರ್ಭಜನ್ ಸಿಂಗ್​​​​​ ‘ಫ್ರೆಂಡ್​​ಶಿಪ್‘​​ ಸಿನಿಮಾದ ಮೋಷನ್​​ ಪೋಸ್ಟರ್​​!

‘ಫ್ರೆಂಡ್​ಶಿಪ್‘ ಸಿನಿಮಾದ ಫಸ್ಟ್​​ಲುಕ್​​ ಪೋಷನ್​​ ಪೋಸ್ಟರ್​​ನಲ್ಲಿ​​ ಖ್ಯಾತ ನಟ ಅರ್ಜುನ್​ ಸರ್ಜಾ, ಶ್ರೀಲಂಕಾದ ಟೆಲಿವಿಷನ್​​​ ಆ್ಯಂಕರ್​​​ ಲೋಸ್ಲಿಯಾ ಮರಿಯನೇಸನ್ ಕಾಣಿಸಿಕೊಂಡಿದ್ದಾರೆ.

news18-kannada
Updated:June 6, 2020, 6:40 PM IST
ಯ್ಯೂಟೂಬ್​ನಲ್ಲಿ ಬಿಡುಗಡೆಯಾಗಿದೆ ಹರ್ಭಜನ್ ಸಿಂಗ್​​​​​ ‘ಫ್ರೆಂಡ್​​ಶಿಪ್‘​​ ಸಿನಿಮಾದ ಮೋಷನ್​​ ಪೋಸ್ಟರ್​​!
ಫ್ರೆಂಡ್​ಶಿಪ್
  • Share this:
ಟೀಂ ಇಂಡಿಯಾದ ಆಟಗಾರ ಹರ್ಭಜನ್​ಸಿಂಗ್​ ತಮಿಳಿನ ‘ಫ್ರೆಂಡ್​ಶಿಪ್‘​ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಪೂರ್ಣ ಪ್ರಮಾಣದಲ್ಲಿ ನಾಯಕ ನಟನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ಈ ಸಿನಿಮಾದ ಫಸ್ಟ್​ಲುಕ್​ ಮೋಷನ್​​ ಪೋಸ್ಟರ್​​​​ ಯ್ಯೂಟೂಬ್​​ನಲ್ಲಿ ಬಿಡುಗಡೆಗೊಂಡಿದ್ದು, ಅನೇಕರು ಭಜ್ಜಿಯ ಅವತಾರಕ್ಕೆ ಫಿದಾ ಆಗಿದ್ದಾರೆ.

‘ಫ್ರೆಂಡ್​ಶಿಪ್‘ ಸಿನಿಮಾದ ಫಸ್ಟ್​​ಲುಕ್​​ ಪೋಷನ್​​ ಪೋಸ್ಟರ್​​ನಲ್ಲಿ​​ ಖ್ಯಾತ ನಟ ಅರ್ಜುನ್​ ಸರ್ಜಾ, ಹರ್ಭಜನ್​ಸಿಂಗ್ ಮತ್ತು ಶ್ರೀಲಂಕಾದ ಟೆಲಿವಿಷನ್​​​ ಆ್ಯಂಕರ್​​​ ಲೋಸ್ಲಿಯಾ ಮರಿಯನೇಸನ್ ಕಾಣಿಸಿಕೊಂಡಿದ್ದಾರೆ. ಅನೇಕರು ಈ ಮೋಷನ್​ ಪೋಸ್ಟರ್​ ನೋಡಿ ಸಂತಸಗೊಂಡಿದ್ದು, ಅರ್ಜುನ್​ ಸರ್ಜಾ ಮತ್ತು ಹರ್ಭಜನ್​​ ಕುರಿತಾಗಿ ಬಗೆ ಬಗೆಯ  ಕಾಮೆಂಟ್​ ಬರೆಯುತ್ತಿದ್ದಾರೆ.

ಹರ್ಭಜನ್​ ಸಿಂಗ್​​ ತೆರೆ ಹಂಚಿಕೊಳ್ಳುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಪಂಜಾಬಿ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಮಿಂಚಿದ್ದರು. ಇದೀಗ ‘ಫ್ರೆಂಡ್​​​ಶಿಪ್‘​​ ಸಿನಿಮಾದ ಮೂಲಕ ಪೂರ್ಣ ಪ್ರಮಾಣದಲ್ಲಿ ನಾಯಕನಾಗಿ ಮಿಂಚತ್ತಿದ್ದಾರೆ. ಅಂದಹಾಗೆ, ಈ ಸಿನಿಮಾ 2020 ಆಗಸ್ಟ್​​ ತಿಂಗಳಿನಲ್ಲಿ ಬಿಡುಗಡೆಯಾಗಲಿದೆ ಎಂದು ಪೋಸ್ಟರ್​ನಲ್ಲಿ ತಿಳಿಸಿದ್ದಾರೆ. ಆದರೆ ಕೊರೋನಾದಿಂದಾಗಿ ಸಿನಿಮಾ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗಲಿದೆಯಾ? ಅಥವಾ ಆಗಸ್ಟ್​ನಲ್ಲೇ ಬಿಡುಗಡೆಯಾಗಲಿದೆಯಾ? ಕಾದುನೋಡಬೇಕಿದೆ.

ಫ್ರೆಂಡ್​ಶಿಪ್​​ ಸಿನಿಮಾ ಕಾಲೇಜು, ಸ್ಟೋಟ್ಸ್​​​​​​ ಇದರ ಸುತ್ತ ಸುತ್ತುವ ಕಥೆಯಾಗಿದೆ. ಈ ಚಿತ್ರವನ್ನು ಜಾನ್ ಪೌಲ್ ಹಾಗೂ ಶ್ಯಾಮ್ ಸೂರ್ಯ ನಿರ್ದೇಶಿಸುತ್ತಿದ್ದಾರೆ. ಜೆ.ಪಿ ಆರ್ ಮತ್ತು ಸ್ಟಾಲಿನ್ ನಿರ್ಮಾಣದ  ಹೊಣೆ ಹೊತ್ತಿದ್ದಾರೆ.ಮುಂಬೈನಲ್ಲಿ ಸಿಲುಕಿದ್ದ 170 ಕಾರ್ಮಿಕರನ್ನು ವಿಮಾನ ವ್ಯವಸ್ಥೆ ಮಾಡಿ ಮನೆಗೆ ತಲುಪಿಸಿದ ಸೋನು ಸೂದ್​!

ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಖ್ಯಾತ ಸೀರಿಯಲ್​ ನಟ-ನಟಿ!
First published: June 6, 2020, 6:33 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading