ಬೇರೆಯವರ ಮನೆಗೆ ಕಲ್ಲೆಸೆಯುವ ಪ್ರಯತ್ನ ಬೇಡ; ಪಾಕ್ ಆಟಗಾರರ ಮೈಚಳಿ ಬಿಡಿಸಿದ ಧವನ್

ನೀವು ಗಾಜಿನ ಮನೆಯಲ್ಲಿದ್ದೀರಿ. ಹೀಗಿರುವಾಗ ಬೇರೆಯವರ ಮನೆಗೆ ಕಲ್ಲು ಎಸೆಯುವ ಪ್ರಯತ್ನವನ್ನೂ ಮಾಡಬೇಡಿ ಎಂದು ಪಾಕ್ ವಿರುದ್ಧ ಗಬ್ಬರ್ ಗರಂ ಆಗಿದ್ದಾರೆ.

Vinay Bhat | news18-kannada
Updated:September 30, 2019, 8:18 AM IST
ಬೇರೆಯವರ ಮನೆಗೆ ಕಲ್ಲೆಸೆಯುವ ಪ್ರಯತ್ನ ಬೇಡ; ಪಾಕ್ ಆಟಗಾರರ ಮೈಚಳಿ ಬಿಡಿಸಿದ ಧವನ್
ಶಿಖರ್ ಧವನ್
  • Share this:
ಬೆಂಗಳೂರು (ಸೆ. 30): ಪಾಕಿಸ್ತಾನ ಕ್ರಿಕೆಟಿಗರು ಭಾರತದ ಬಗ್ಗೆ ಮನಬಂದಂತೆ ಮಾತನಾಡುವಾಗ ಭಾರತೀಯನಾಗಿ ನಾನು ಕೈಕಟ್ಟಿ ಕೂರಲಾರೆ ಎಂದು ಧವನ್ ಪಾಕ್ ಆಟಗಾರರಿಗೆ ಚಾಟಿ ಬೀಸಿದ್ದಾರೆ.

ಆಫ್ ಕಿ ಅದಾಲತ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಧವನ್, ನಮ್ಮ ದೇಶದ ವಿರುದ್ಧ ಯಾರಾದರು ಮಾತನಾಡಿದರೆ ನಾನು ಅದನ್ನು ಖಂಡಿಸುತ್ತೇನೆ. ಭಾರತ ದೇಶಕ್ಕೆ ವಿದೇಶದವರ ಸಲಹೆ ಬೇಕಾಗಿಲ್ಲ.

ಮೊದಲು ಅವರ ದೇಶದ ಸಮಸ್ಯೆ ಬಗೆ ಹರಿಸಿಕೊಳ್ಳಲಿ. ಭಾರತದ ಬಗ್ಗೆ ಬಾಯಿಗೆ ಬಂದಂತೆ ಪಾಕಿಸ್ತಾನ ಕ್ರಿಕೆಟಿಗರು ಸಾಮಾಜಿಕ ತಾಣಗಳಲ್ಲಿ ಹಂಚಿಕೊಂಡರೆ ನಾನು ಕೈಕಟ್ಟಿ ಕೂರಲಾರೆ ಎಂದು ಧವನ್ ಹೇಳಿದ್ದಾರೆ.

ಮತ್ತೊಂದು ವಿಶ್ವದಾಖಲೆ ನಿರ್ಮಿಸುವ ತವಕದಲ್ಲಿ ಕೊಹ್ಲಿ; ಹರಿಣಗಳ ವಿರುದ್ಧದ ಟೆಸ್ಟ್​ ಪಂದ್ಯವೇ ವೇದಿಕೆ

ನೀವು ಗಾಜಿನ ಮನೆಯಲ್ಲಿದ್ದೀರಿ. ಹೀಗಿರುವಾಗ ಬೇರೆಯವರ ಮನೆಗೆ ಕಲ್ಲು ಎಸೆಯುವ ಪ್ರಯತ್ನವನ್ನೂ ಮಾಡಬೇಡಿ ಎಂದು ಪಾಕ್ ವಿರುದ್ಧ ಗಬ್ಬರ್ ಗರಂ ಆಗಿದ್ದಾರೆ.

ಕಳೆದ ಏಪ್ರಿಲ್‌ನಲ್ಲಿ ಕಾಶ್ಮೀರ ಕುರಿತಾಗಿ ಪಾಕ್ ಮಾಜಿ ನಾಯಕ ಶಾಹಿದ್‌ ಅಫ್ರಿದಿ ನೀಡಿದ್ದ ಹೇಳಿಕೆಯನ್ನು ಖಂಡಿಸಿದ್ದ ಧವನ್‌, ಭಾರತದ ವಿಚಾರದಲ್ಲಿ ಬೇರೆಯವರು ಸಲಹೆ ನೀಡುವ ಅಗತ್ಯವೇನು ಇಲ್ಲ ಎಂದು ಗುಡುಗಿದ್ದರು.

ಜೊತೆಗೆ ರಿಷಭ್ ಪಂತ್ ವಿಚಾರವಾಗಿ ಮಾತನಾಡಿದ ಧವನ್, ಪಂತ್ ಅತ್ಯುತ್ತಮ ಆಟಗಾರ. ಅವರಿಗೆ ಉತ್ತಮ ಭವಿಷ್ಯವಿದೆ. ವೈಫಲ್ಯ ಕಂಡರಷ್ಟೆ ನಮ್ಮ ತಪ್ಪುಗಳನ್ನು ಸರಿ ಪಡಿಸಲು ಸಾಧ್ಯ. ಪಂತ್ ಕೂಡ ಅದೆ ಹಾದಿಯಲ್ಲಿದ್ದಾರೆ ಎಂದರು.ವಿಡಿಯೋ ಕೃಪೆ: ಇಂಡಿಯಾ ಟಿವಿ

First published:September 30, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading