IPL 2020: ಅಂದುಕೊಂಡಂತೆ ಆಗಿದ್ದರೆ ನಿನ್ನೆ 13ನೇ ಆವೃತ್ತಿಯ ಐಪಿಎಲ್ ಆರಂಭ; ಧೋನಿಯೂ ಕಮ್​ಬ್ಯಾಕ್​

Coronavirus: ಐಪಿಎಲ್ ರದ್ದಾದರೆ ಧೋನಿಗೆ ಟಿ-20 ವಿಶ್ವಕಪ್​ನಲ್ಲಿ ಸ್ಥಾನವಿಲ್ಲ ಎಂಬುದು ಅನೇಕರ ನುಡಿ ಆದರೆ, ಇನ್ನೂ ಕೆಲವು ಐಪಿಎಲ್ ನಡೆಯಲಿ ಬಿಡಲಿ ವಿಶ್ವಕಪ್​ನಲ್ಲಿ ಧೋನಿಗೆ ಕೊನೆಯ ಅವಕಾಶವನ್ನಾದರು ನೀಡಬೇಕು ಎನ್ನುವುದು ಕೆಲವರ ಮಾತು.

Vinay Bhat | news18-kannada
Updated:March 30, 2020, 8:00 AM IST
IPL 2020: ಅಂದುಕೊಂಡಂತೆ ಆಗಿದ್ದರೆ ನಿನ್ನೆ 13ನೇ ಆವೃತ್ತಿಯ ಐಪಿಎಲ್ ಆರಂಭ; ಧೋನಿಯೂ ಕಮ್​ಬ್ಯಾಕ್​
ಎಂ ಎಸ್ ಧೋನಿ ಮತ್ತು ರೋಹಿತ್ ಶರ್ಮಾ.
  • Share this:
ಹೌದು, ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ನಿನ್ನೆ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆರಂಭವಾಗಬೇಕಿತ್ತು. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್​ ಹಾಗೂ ಚೆನ್ನೈ ಸೂಪರ್ ಕಿಂಗ್ಸ್​ ತಂಡಗಳು ಸೆಣೆಸಾಟ ನಡೆಸಬೇಕಿತ್ತು. ಇವೇಲ್ಲದಕ್ಕಿಂತ ಮುಖ್ಯವಾಗಿ ಸುಮಾರು ಎಂಟು ತಿಂಗಳ ಬಳಿಕ ಮಹೇಂದ್ರ ಸಿಂಗ್ ಧೋನಿ ಕಣಕ್ಕಿಳಿಯುತ್ತಿದ್ದರು!.

ಆದರೆ, ಮಾರಕ ಕೊರೋನಾ ವೈರಸ್ ಇಡೀ ವಿಶ್ವದಲ್ಲಿ ಮರಣ ಮೃದಂಗ ಭಾರಿಸುತ್ತಿರುವ ಹಿನ್ನಲೆ ಐಪಿಎಲ್ 2020 ನಡೆಯುವುದೇ ಅನುಮಾನ ಎಂಬಂತಿದೆ. ಹೀಗಾಗಿ ಎಂಎಸ್ ಧೋನಿ ಕ್ರಿಕೆಟ್ ಭವಿಷ್ಯ ಮತ್ತಟ್ಟು ಕಠಿಣವಾಗಿದೆ.

ಮನೆಯಲ್ಲೇ ಇರಿ..ಇಲ್ಲಾಂದ್ರೆ ರನೌಟ್ ಆಗ್ತೀರಾ: ಫೀಲ್ಡಿಂಗ್ ವಿಡಿಯೋ ಮೂಲಕ ಎಚ್ಚರಿಸಿದ ಕೈಫ್

ಧೋನಿಗೆ ಅಂತರಾಷ್ಟ್ರೀಯ ಕ್ರಿಕೆಟ್​ಗೆ ಕಮ್​ಬ್ಯಾಕ್ ಮಾಡಲು ಅದರಲ್ಲೂ ಟಿ-20 ವಿಶ್ವಕಪ್​ನಲ್ಲಿ ಸ್ಥಾನ ಪಡೆಯಲು ಐಪಿಎಲ್ ಒಂದೇ ಮಾರ್ಗವಾಗಿತ್ತು. ಸದ್ಯ ಈ ಹಾದಿಯೂ ಮುಚ್ಚಿದರೆ ಕೂಲ್ ಕ್ಯಾಪ್ಟನ್ ಕ್ರಿಕೆಟ್ ಜೀವನ ಇಲ್ಲಿಗೆ ಅಂತ್ಯವಾಗುವ ಎಲ್ಲ ಲಕ್ಷಣಗಳು ಗೋಚರಿಸುತ್ತಿದೆ.

ಈಗಾಗಲೇ ಅನೇಕ ಕ್ರಿಕೆಟ್ ತಜ್ಷರೂ ಧೋನಿ ಭವಿಷ್ಯದ ಕುರಿತು ಮಾತುಗಳನ್ನಾಡುತ್ತಿದ್ದಾರೆ. ಐಪಿಎಲ್ ರದ್ದಾದರೆ ಧೋನಿಗೆ ಟಿ-20 ವಿಶ್ವಕಪ್​ನಲ್ಲಿ ಸ್ಥಾನವಿಲ್ಲ ಎಂಬುದು ಅನೇಕರ ನುಡಿ ಆದರೆ, ಇನ್ನೂ ಕೆಲವು ಐಪಿಎಲ್ ನಡೆಯಲಿ ಬಿಡಲಿ ವಿಶ್ವಕಪ್​ನಲ್ಲಿ ಧೋನಿಗೆ ಕೊನೆಯ ಅವಕಾಶವನ್ನಾದರು ನೀಡಬೇಕು ಎನ್ನುವುದು ಕೆಲವರ ಮಾತು.

ಇನ್ನೂ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಂತೂ ಐಪಿಎಲ್ ವಿಚಾರದಲ್ಲಿ ಸಾಕಷ್ಟು ತಲೆಕೆಡಿಸಿಕೊಂಡಿದೆ. ಎಂಟು ಫ್ರಾಂಚೈಸಿಗಳ ಮಾಲೀಕರೊಂದಿಗೆ ನಡೆಯಬೇಕಿದ್ದ ವಿಡಿಯೋ ಸಂವಾದ ಕೂಡ ಮುಂದಕ್ಕೆ ಹೋಗಿದ್ದು, ಸದ್ಯ ನಿಗದಿ ಮಾಡಿರುವ ನೂತನ ದಿನಾಂಕ ಏಪ್ರಿಲ್ 15ಕ್ಕೂ ಮಿಲಿಯನ್ ಡಾಲರ್ ಟೂರ್ನಿ ಆರಂಭ ಅಸಾಧ್ಯ ಎಂಬಂತಾಗಿದೆ.

IPL: ಐಪಿಎಲ್​ನಲ್ಲಿ ದ್ವಿಶತಕ ಸಿಡಿಸಿಬಲ್ಲ 4 ಸ್ಟಾರ್ ಆಟಗಾರರು ಯಾರೆಲ್ಲ?; ಇಲ್ಲಿದೆ ಮಾಹಿತಿಕಟ್ಟುನಿಟ್ಟಾಗಿ ಲಾಕ್ ಡೌನ್ ಜಾರಿಗೆ ತಂದರೂ ಭಾರತದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಏರುಗತಿಯಲ್ಲೇ ಇದೆ. ದೇಶಾದ್ಯಂತ ಕೊರೋನಾ ವೈರಸ್ ಸೋಂಕು ತಗುಲಿದವರ ಸಂಖ್ಯೆ 1,024ಕ್ಕೆ ಮುಟ್ಟಿದೆ ಎಂದು ಇತ್ತೀಚಿನ ವರದಿಗಳು ಹೇಳುತ್ತಿವೆ. ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ, 901 ಮಂದಿಯಲ್ಲಿ ಈಗ ಕೊರೋನಾ ಸೋಂಕು ಇರುವುದು (Active cases) ಪತ್ತೆಯಾಗಿದೆ. 27 ಮಂದಿ ಸಾವನ್ನಪ್ಪಿದ್ದಾರೆ.

First published:March 30, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading