Finn allen: ಟಿ20 ಬ್ಲಾಸ್ಟ್​ನಲ್ಲಿ RCB ಆಟಗಾರನ ಆರ್ಭಟ..!

ಈ ಸಾಧಾರಣ ಗುರಿ ಬೆನ್ನತ್ತಿದ ಲಂಕ​ಶೈರ್ ತಂಡಕ್ಕೆ ಅಲೆನ್ ಅಬ್ಬರ ಆರಂಭ ಒದಗಿಸಿದರು. ಮೊದಲ ಓವರ್​ನಿಂದಲೇ ನಾರ್ಥಂಪ್ಟನ್​ ಬೌಲರುಗಳ ಬೆಂಡೆತ್ತಲು ಆರಂಭಿಸಿದ ಅಲೆನ್ ಫೋರ್​-ಸಿಕ್ಸ್​ಗಳ ಸುರಿಮಳೆಗೈದರು.

Finn allen

Finn allen

 • Share this:
  ಇಂಗ್ಲೆಂಡ್​ನಲ್ಲಿ ನಡೆಯುತ್ತಿರುವ ವಿಟಾಲಿಟಿ ಟಿ20 ಬ್ಲಾಸ್ಟ್ ಟೂರ್ನಿಯಲ್ಲಿ RCB ಆಟಗಾರ ಫಿನ್ ಅಲೆನ್ ಆರ್ಭಟ ಮುಂದುವರೆದಿದೆ. ಮ್ಯಾಂಚೆಸ್ಟರ್​ನಲ್ಲಿ ನಡೆದ ನಾರ್ಥಂಪ್ಟನ್​ಶೈರ್ ಮತ್ತು ಲಂಕ​ಶೈರ್ ನಡುವಣ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಅಲೆನ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಇದಕ್ಕೂ ಮುನ್ನ ಟಾಸ್ ಗೆದ್ದ ನಾರ್ಥಂಪ್ಟನ್​ಶೈರ್ ತಂಡವು ರಾಬ್ ಕೀಗ್ ಅವರ ಅರ್ಧಶತಕ ಹಾಗೂ ಅಫ್ಘಾನಿಸ್ತಾನ್ ಆಲ್​ರೌಂಡರ್ ಮೊಹಮ್ಮದ್ ನಬಿ 27 ರನ್​ಗಳ ನೆರವಿನಿಂದ 8 ವಿಕೆಟ್​ ನಷ್ಟಕ್ಕೆ 142 ರನ್​ ಕಲೆಹಾಕಿತು.

  ಈ ಸಾಧಾರಣ ಗುರಿ ಬೆನ್ನತ್ತಿದ ಲಂಕ​ಶೈರ್ ತಂಡಕ್ಕೆ ಅಲೆನ್ ಅಬ್ಬರ ಆರಂಭ ಒದಗಿಸಿದರು. ಮೊದಲ ಓವರ್​ನಿಂದಲೇ ನಾರ್ಥಂಪ್ಟನ್​ ಬೌಲರುಗಳ ಬೆಂಡೆತ್ತಲು ಆರಂಭಿಸಿದ ಅಲೆನ್ ಫೋರ್​-ಸಿಕ್ಸ್​ಗಳ ಸುರಿಮಳೆಗೈದರು. ಪರಿಣಾಮ ಮೊದಲ 10 ಓವರ್​ ವೇಳೆಗೆ ಲಂಕ​ಶೈರ್ ತಂಡದ ಮೊತ್ತವು 100ರ ಗಡಿ ತಲುಪಿತು.

  ಸಾಧಾರಣ ಸವಾಲಾಗಿದ್ದರೂ ತಮ್ಮ ಆರ್ಭಟ ಮುಂದುವರೆಸಿದ್ದ ಅಲೆನ್ ಕೇವಲ 37 ಎಸೆತಗಳಲ್ಲಿ 3 ಭರ್ಜರಿ ಸಿಕ್ಸರ್ ಹಾಗೂ 7 ಬೌಂಡರಿಗಳೊಂದಿಗೆ 66 ರನ್​ ಚಚ್ಚಿದರು. ಮತ್ತೊಂದೆಡೆ ಆರಂಭಿಕ ಆಟಗಾರ ಕೇಟನ್ ಜೆನ್ನಿಂಗ್ಸ್ ಕೂಡ ಅರ್ಧಶತಕದ ಕೊಡುಗೆ ನೀಡಿದರು. ಪರಿಣಾಮ 15.4 ಓವರ್​ನಲ್ಲಿ ಲಂಕಶೈರ್ ತಂಡವು 2 ವಿಕೆಟ್ ನಷ್ಟಕ್ಕೆ 144 ರನ್​ಗಳಿಸಿ 8 ವಿಕೆಟ್​ಗಳ ಭರ್ಜರಿ ಜಯ ತನ್ನದಾಗಿಸಿಕೊಂಡಿತು.

  ಸ್ಪೋಟಕ ಬ್ಯಾಟಿಂಗ್ ಮೂಲಕ ಗಮನ ಸೆಳೆದ ಫಿನ್ ಅಲೆನ್ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ವಿಟಾಲಿಟಿ ಟಿ20 ಬ್ಲಾಸ್ಟ್​​ನಲ್ಲಿ ಅಲೆನ್ ಬಿರುಸಿನ ಬ್ಯಾಟಿಂಗ್ ಮೂಲಕ ಭರ್ಜರಿ ಫಾರ್ಮ್​ ಪ್ರದರ್ಶಿಸುತ್ತಿದ್ದು, ಯುಎಇನಲ್ಲಿ ನಡೆಯಲಿರುವ ಐಪಿಎಲ್​ನಲ್ಲೂ ಯುವ ದಾಂಡಿಗನ ಫಾರ್ಮ್​ ಆರ್​ಸಿಬಿ ಪಾಲಿಗೆ ವರವಾಗಲಿದೆ.

  (ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)
  Published by:zahir
  First published: