ಕ್ರಿಕೆಟ್ ಅಂಗಳದ ನಾನಾ ರೀತಿಯ ಘಟನೆಗಳಿಗೆ ಸಾಕ್ಷಿಯಾಗಿರುವುದನ್ನು ನೀವು ನೋಡಿರುತ್ತೀರಿ. ಅದರಲ್ಲೂ ಆಟಗಾರರ ನಡುವಣ ಸ್ಲೆಡ್ಜಿಂಗ್ ಎಂಬುದು ಈಗ ಸಾಧಾರಣ ವಿಷಯ. ಇನ್ನು ಕೆಲವೊಂದು ಬಾರಿ ಇದು ಅತಿರೇಕಕ್ಕೂ ಹೋಗಿದ್ದು ಇದೆ. ಇದಾಗ್ಯೂ ಅನೇಕ ಬಾರಿ ಕ್ರಿಕೆಟ್ ಮೈದಾನ ಹಲವು ಹಾಸ್ಯ ಸನ್ನಿವೇಶಗಳಿಗೂ ಸಾಕ್ಷಿಯಾಗಿವೆ. ಆದರೆ ಅದೆಲ್ಲವನ್ನೂ ಹಿಂದಕ್ಕೆ ಸರಿಸುವಂತಹ ಹಾಸ್ಯ ಪ್ರಸಂಗ ಅಬುಧಾಬಿ ಟಿ10 ಕ್ರಿಕೆಟ್ ಲೀಗ್ನಲ್ಲಿ ನಡೆದಿದೆ.
ಹೌದು, ಅಬುಧಾಬಿ ಟಿ10 ಲೀಗ್ನಲ್ಲಿ ನಡೆದ ಟೀಮ್ ಅಬುಧಾಬಿ ಮತ್ತು ನಾರ್ತನ್ ವಾರಿಯರ್ಸ್ ಪಂದ್ಯವು ಹಾಸ್ಯ ಸನ್ನಿವೇಶಕ್ಕೆ ಸಾಕ್ಷಿಯಾಯಿತು. ನಾರ್ತನ್ ವಾರಿಯರ್ಸ್ ಬ್ಯಾಟ್ಸ್ಮನ್ ವಾಸಿಂ ಮೊಹಮ್ಮದ್ ಚೆಂಡನ್ನು ಬೌಂಡರಿಯತ್ತ ಬಾರಿಸಿದ್ದರು. ಆದರೆ ಅಲ್ಲಿ ಫೀಲ್ಡಿಂಗ್ ನಿಂತಿದ್ದ ಟೀಮ್ ಅಬುಧಾಬಿ ತಂಡದ ಆಟಗಾರ ರೋಹನ್ ಮುಸ್ತಾಫ ಮಾತ್ರ ತಮಗೂ ಕ್ರಿಕೆಟ್ಗೂ ಸಂಬಂಧವೇ ಇಲ್ಲ ಎಂಬಂತೆ ಜೆರ್ಸಿ ಬದಲಿಸುತ್ತಿದ್ದರು.
ಅತ್ತ ಚೆಂಡು ರೋಹನ್ ಮುಸ್ತಾಫ ಪಕ್ಕದಲ್ಲೇ ಬೌಂಡರಿ ಲೈನ್ ದಾಟಿತು. ಈ ಸನ್ನಿವೇಶ ನೋಡಿ ಸಹ ಆಟಗಾರರು ಹಾಗೂ ಎದುರಾಳಿ ಆಟಗಾರರು ನಗೆಗಡಲಲ್ಲಿ ತೇಲಿದರು. ಇದೀಗ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಈ ಘಟನೆ ಬಗ್ಗೆ ತಂಡದ ಹಾಗೂ ಅಬುಧಾಬಿ ಟಿ10 ಲೀಗ್ ಆಯೋಜಕರ ಕ್ಷಮೆಯಾಚಿಸಿರುವ ರೋಹನ್ ಮುಸ್ತಾಫ, ನಾನು ಬೌಲಿಂಗ್ ಮಾಡಲು ತಯಾರಿ ನಡೆಸುತ್ತಿದ್ದೆ. ಇದೇ ವೇಳೆ ಸ್ವೆಟರ್ ತೆಗೆಯಲು ಮುಂದಾದಾಗ ನನ್ನ ಜೆರ್ಸಿ ಕೂಡ ಸಿಲುಕಿಕೊಂಡಿತ್ತು ಎಂದು ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ