ಬ್ಯಾಟಿಂಗ್ ದಿಗ್ಗಜ ಸಚಿನ್ ದಾಖಲೆ ಸರಿಗಟ್ಟಿದ ಕಿವೀಸ್ ಬೌಲರ್ ಟಿಮ್ ಸೌಥಿ

ಸೌಥಿಗೆ ಸಚಿನ್ ದಾಖಲೆ ಮುರಿಯಲು ಇನ್ನೊಂದು ಸಿಕ್ಸ್​ ಬೇಕಿದೆ. ಹಾಗೆಲ್ಲಾದರು ಸೌಥಿ 1 ಸಿಕ್ಸ್ ಬಾರಿಸಿದರೆ, 70 ಸಿಕ್ಸ್​ನೊಂದಿಗೆ ಪಾಕಿಸ್ತಾನ ಕ್ರಿಕೆಟ್ ದಿಗ್ಗಜ ಯೂನಿಸ್ ಖಾನ್ ದಾಖಲೆಯನ್ನೂ ಸರಿಗಟ್ಟಲಿದ್ದಾರೆ.

Vinay Bhat | news18
Updated:August 16, 2019, 1:02 PM IST
ಬ್ಯಾಟಿಂಗ್ ದಿಗ್ಗಜ ಸಚಿನ್ ದಾಖಲೆ ಸರಿಗಟ್ಟಿದ ಕಿವೀಸ್ ಬೌಲರ್ ಟಿಮ್ ಸೌಥಿ
ಸಚಿನ್ ತೆಂಡೂಲ್ಕರ್ ಹಾಗೂ ಟಿಮ್ ಸೌಥಿ
  • News18
  • Last Updated: August 16, 2019, 1:02 PM IST
  • Share this:
ಬೆಂಗಳೂರು (ಆ. 16): ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಪ್ರಮುಖ ವೇಗಿ ಟಿಮ್ ಸೌಥಿ ಬ್ಯಾಟಿಂಗ್ ದಿಗ್ಗಜ, ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ದಾಖಲೆ ಮುರಿಯುವ ಸನಿಹದಲ್ಲಿದ್ದಾರೆ. ಅರೇ, ಇದೇನಿದು ಬೌಲರ್, ಬ್ಯಾಟ್ಸ್​ಮನ್​ ದಾಖಲೆ ಮುರಿಯುವುದು ಎಂದು ಅಚ್ಚರಿ ಪಟ್ಟರೂ ಇದೇ ಸತ್ಯ.

ಟೆಸ್ಟ್​ ಕ್ರಿಕೆಟ್​ನಲ್ಲಿ ಸಚಿನ್ ತೆಂಡೂಲ್ಕರ್ ಬಾರಿಸಿದಷ್ಟೆ ಸಿಕ್ಸರ್​ಗಳನ್ನು ಸದ್ಯ ಟಿಮ್ ಸೌಥಿ ಕೂಡ ಸಿಡಿಸಿ ಕ್ರಿಕೆಟ್ ದೇವರ ದಾಖಲೆಯನ್ನು ಸರಿಗಟ್ಟಿದ್ದಾರೆ. ಇನ್ನೊಂದು ಸಿಕ್ಸ್​ ಬಾರಿಸಿದರೆ ಸಚಿನ್ ದಾಖಲೆಯನ್ನು ಮುರಿಯಲಿದ್ದಾರೆ.

ಟೆಸ್ಟ್​ನಲ್ಲಿ ಸಚಿನ್ 329 ಇನ್ನಿಂಗ್ಸ್​ಗಳಲ್ಲಿ 69 ಸಿಕ್ಸರ್ ಬಾರಿಸಿದ್ದರೆ, ಸೌಥಿ ಕೇವಲ 89 ಇನ್ನಿಂಗ್ಸ್​ಗಳಲ್ಲಿ 69 ಸಿಕ್ಸ್ ಸಿಡಿಸಿದ್ದಾರೆ. ಸದ್ಯ ಸಾಗುತ್ತಿರುವ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್​ನಲ್ಲಿ ನ್ಯೂಜಿಲೆಂಡ್ ಪರ 10ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸೌಥಿ 19 ಎಸೆತಗಳಲ್ಲಿ 14 ರನ್ ಗಳಿಸಿದ್ದರು. ಇದರಲ್ಲಿ 1 ಸಿಕ್ಸ್​ ಕೂಡ ಸೇರಿತ್ತು.

ಭಾರತದ ಸ್ಫೋಟಕ ಆಟಗಾರ ಚಂದ್ರಶೇಖರ್ ಸತ್ತಿದ್ದು ಹೃದಯಾಘಾತದಿಂದಲ್ಲ; ಬಯಲಾಯಿತು ಅಸಲಿ ಕಾರಣ

ಸದ್ಯ ಸೌಥಿಗೆ ಸಚಿನ್ ದಾಖಲೆ ಮುರಿಯಲು ಇನ್ನೊಂದು ಸಿಕ್ಸ್​ ಬೇಕಿದೆ. ಹಾಗೆಲ್ಲಾದರು ಸೌಥಿ 1 ಸಿಕ್ಸ್ ಬಾರಿಸಿದರೆ, 70 ಸಿಕ್ಸ್​ನೊಂದಿಗೆ ಪಾಕಿಸ್ತಾನ ಕ್ರಿಕೆಟ್ ದಿಗ್ಗಜ ಯೂನಿಸ್ ಖಾನ್ ದಾಖಲೆಯನ್ನೂ ಸರಿಗಟ್ಟಲಿದ್ದಾರೆ. ಯೂನಿಸ್ 213 ಟೆಸ್ಟ್​ ಇನ್ನಿಂಗ್ಸ್​ಗಳಲ್ಲಿ 70 ಸಿಕ್ಸ್ ಬಾರಿಸಿದ್ದರು.

ಟೆಸ್ಸ್​ ಕ್ರಿಕೆಟ್​ನಲ್ಲಿ ಗರಿಷ್ಠ ಸಿಕ್ಸ್ ಬಾರಿಸಿದ ಆಟಗಾರರ ಪೈಕಿ ಸಚಿನ್ ಹಾಗೂ ಟಿಮ್ ಸೌಥಿ ಜಂಟಿಯಾಗಿ 17ನೇ ಸ್ಥಾನದಲ್ಲಿದ್ದಾರೆ. ಮೊದಲ ಸ್ಥಾನದಲ್ಲಿ ಕಿವೀಸ್ ತಂಡ ಬ್ರೆಂಡನ್ ಮೆಕಲಮ್ ಇದ್ದು, ಇವರು 176 ಇನ್ನಿಂಗ್ಸ್​ಗಳಲ್ಲಿ 107 ಸಿಕ್ಸರ್ ಬಾರಿಸಿದ್ದಾರೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್​ಸ್ಕ್ರೈಬ್​ ಮಾಡಲು ಇಲ್ಲಿ ಕ್ಲಿಕ್​ ಮಾಡಿ
First published: August 16, 2019, 1:02 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading