Vinay BhatVinay Bhat
|
news18-kannada Updated:September 10, 2019, 10:32 AM IST
ಇದಕ್ಕೂ ಮೊದಲು ನ್ಯೂಜಿಲೆಂಡ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕೆಲವೊಂದು ವಿಚಾರವನ್ನು ಹಂಚಿಕೊಂಡಿದ್ದಾರೆ.
ಬೆಂಗಳೂರು (ಸೆ. 10): ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಥವಾ ಅವರ ಪತ್ನಿ ಅನುಷ್ಕಾ ಶರ್ಮಾ ಸಾಮಾಜಿಕ ತಾಣಗಳಲ್ಲಿ ಫೊಟೋ ಹಂಚಿಕೊಂಡರೆ ಈಗೀಗ ಟ್ರೋಲ್ ಆಗುವುದು ಸಾಮಾನ್ಯ ಆಗಿ ಬಿಟ್ಟಿದೆ.
ಇತ್ತೀಚೆಗಷ್ಟೆ
ಕೊಹ್ಲಿ ಶರ್ಟ್ ಇಲ್ಲದೆ ಕುಳಿತುಕೊಂಡಿರುವ ಫೋಟೋ ಒಂದನ್ನು ಟ್ವಿಟ್ಟರ್ನಲ್ಲಿ ಹಾಕಿ ಟ್ರೋಲ್ಗಳಿಗೆ ಆಹಾರವಾಗಿದ್ದರು. ಸದ್ಯ ಕೊಹ್ಲಿ ಮತ್ತೊಂದು ಫೋಟೋ ಹಂಚಿಕೊಂಡಿದ್ದು ಇದೂಕೂಡ ವೈರಲ್ ಆಗುವ ಜೊತೆಗೆ ಸಖತ್ ಟ್ರೋಲ್ ಆಗುತ್ತಿದೆ.
ಅರೆಸ್ಟ್ ವಾರೆಂಟ್ಗೆ ಕೋರ್ಟ್ನಿಂದ ತಡೆ; ಶಮಿಗೆ ತಾತ್ಕಾಲಿಕ ರಿಲೀಫ್
ಬೀಚ್ ಪಕ್ಕ ನಿತ್ತಿರುವ ಫೋಟೋವನ್ನು ವಿರಾಟ್ ಕೊಹ್ಲಿ ತಮ್ಮ ಟ್ವಿಟ್ಟರ್ನಲ್ಲಿ ಶೇರ್ ಮಾಡಿದ್ದಾರೆ. ಇದನ್ನ ಅಭಿಮಾನಿಯೊಬ್ಬ ಫೋಟೋಶಾಪ್ನಲ್ಲಿ ಅನುಷ್ಕಾರನ್ನು ಎಡಿಟ್ ಮಾಡಿ ಟ್ರೋಲ್ ಮಾಡಿದ್ದಾರೆ.
ಸದ್ಯ ವೆಸ್ಟ್ ಇಂಡೀಸ್ ಪ್ರವಾಸ ಮುಗಿಸಿರುವ ಭಾರತ ತವರಿನಲ್ಲಿದೆ. ಸೆ. 15 ರಿಂದ ಮೊದಲ ಟಿ-20 ಪಂದ್ಯವನ್ನು ಆಡುವ ಮೂಲಕ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿ ಆರಂಭಿಸಲಿದೆ.
First published:
September 10, 2019, 9:47 AM IST