ಸನ್‌ರೈಸರ್ಸ್ ಹೈದರಾಬಾದ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB vs SRH) ನಡುವಿನ ಪಂದ್ಯಕ್ಕೂ ಮುನ್ನ ಸ್ಟಾರ್ ಸ್ಪೋರ್ಟ್ಸ್ (Star Sports) ಟಿವಿಯಲ್ಲಿ ಪಂದ್ಯಕ್ಕೂ ಮುನ್ನ ಪ್ರಸಾರ ಮಾಡಲಾದ ವಿಡಿಯೋ ಒಂದು ಪ್ರತ್ಯೇಕ ವಿವಾದದ ಹುಟ್ಟುಹಾಕಿದೆ. ಪಂದ್ಯಕ್ಕೂ ಮುನ್ನ ವಾಹಿನಿ ಕಾರ್ಯಕ್ರಮ ಆಯೋಜಿಸಿತ್ತು. ಈ ಪ್ರದರ್ಶನದ ಸಮಯದಲ್ಲಿ, ಮಾಯಾಂತಿ ಲ್ಯಾಂಗರ್ ಸೇರಿದಂತೆ ಅನೇಕ ಕ್ರೀಡಾ ನಿರೂಪಕರು ಉಪಸ್ಥಿತರಿದ್ದರು. ಯಾವ ಕ್ರಿಕೆಟಿಗ ತುಂಬಾ ಹಾಟ್ ಆಗಿದ್ದಾನೆ ಎನ್ನುವುದರ ಕುರಿತು ಒಂದು ಚಿಕ್ಕ ಕಾರ್ಯುಕ್ರಮ ನಡೆದಿದ್ದು, ಇದೀಗ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ವಿರಾಟ್ ಕೊಹ್ಲಿ (Virat Kohli) ಮತ್ತು ಶುಭಮನ್ ಗಿಲ್ ಅವರ ಶರ್ಟ್ ಲೆಸ್ ಚಿತ್ರಗಳನ್ನು ತೋರಿಸಿ ಈ ಬಗ್ಗೆ ಅಭಿಪ್ರಾಯ ಕೇಳಲಾಗಿತ್ತು.
ನೆಟ್ಟಿಗರ ಆಕ್ರೋಶಕ್ಕೆ ಕಾರಣವಾದ ಕಾರ್ಯಕ್ರಮ:
ಸ್ಟಾರ್ ಸ್ಪೋರ್ಟ್ಸ್‌ನ ಈ ಶೋ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಅಭಿಮಾನಿಗಳು ತೀವ್ರವಾಗಿ ಕಾರ್ಯಕ್ರಮದ ಬಗ್ಗೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಇದು ಕ್ರೀಡಾ ಚಾನೆಲ್ ಎಂದು ಅವರು ಹೇಳುತ್ತಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ ಇಂತಹ ವಿಷಯಗಳು ಕ್ರೀಡೆಗೆ ಸಂಬಂಧಿಸಿದ ಚಾನಲ್‌ನ ವಿಷಯದ ಭಾಗವಾಗಬಾರದು. ಕಾರ್ಯಕ್ರಮದ ಸಮಯದಲ್ಲಿ, ಮಾಯಾಂತಿ ಲ್ಯಾಂಗರ್ ಕೂಡ ಅಂತಹ ವಿಷಯದ ಮುಂದೆ ತುಂಬಾ ಅಹಿತಕರವಾಗಿ ಕಾಣುತ್ತಿದ್ದರು. ಸುರೇನ್ ಸುಂದರಂ ಕಾರ್ಯಕ್ರಮ ನಿರೂಪಕರಾಗಿದ್ದರು. ಮತ್ತು ಬಾಲಿವುಡ್ ನಟ ವಿದ್ಯುತ್ ಜಮ್ವಾಲ್ ಕೂಡ ಅದರ ಭಾಗವಾಗಿದ್ದರು.
Here... pic.twitter.com/LzvPUi2RFR
— Kush Katakia (@kushkatakia) May 18, 2023
ಈ ಕಾರ್ಯಕ್ರಮದ ಹೆಸರು 'ಹಾಟ್ ಆರ್ ನಾಟ್'. ನಮ್ಮ ಟೀಂ ಇಂಡಿಯಾದ ಕ್ರಿಕೆಟಿಗರು ಹಾಟ್ ಆಗಿದ್ದಾರೋ ಇಲ್ಲವೋ ಎಂದು ತಿಳಿಯುವ ಪ್ರಯತ್ನ ನಡೆಯುತ್ತಿತ್ತು ಎಂಬುದು ಹೆಸರಿನಿಂದಲೇ ಸ್ಪಷ್ಟವಾಗಿದೆ. ಕ್ರಿಕೆಟಿಗರ ವೈಯಕ್ತಿಕ ಜೀವನದಿಂದ ತೆಗೆದ ಕೆಲವು ಫೋಟೋಗಳಿಗೆ ಸಂಬಂಧಿಸಿದಂತೆ ಆ್ಯಂಕರ್‌ಗಳಿಗೆ ಮಾತ್ರ ಪ್ರಶ್ನೆಗಳನ್ನು ಕೇಳಲಾಯಿತು.
Star with their 'Hot or Not' segment in today's pre-match show clearly embarrassed themselves.
Imagine asking a senior anchor and married woman like Mayanti Langer to pick sides for a junior fellow like Shubman Gill. She was clearly uncomfortable. #NotDone#IPL2023
— Subhayan Chakraborty (@CricSubhayan) May 18, 2023
ಇದನ್ನೂ ಓದಿ: Virat Kohli: ಕಿಂಗ್ ಕೊಹ್ಲಿ ಅಬ್ಬರಕ್ಕೆ ದಾಖಲೆಗಳೆಲ್ಲಾ ಉಡೀಸ್, ಐಪಿಎಲ್ನಲ್ಲಿ ಹೊಸ ಇತಿಹಾಸ ನಿರ್ಮಾಣ
ಆರ್ಸಿಬಿಗೆ ಭರ್ಜರಿ ಜಯ:
ಇನ್ನು, ಈ ಕಾರ್ಯಕ್ರಮದ ಬಳಿಕ ನಡೆದ ಐಪಿಎಲ್ 2023ರ 65ನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಭರ್ಜರಿ ಗೆಲುವು ದಾಖಲಿಸಿತು. ಹೈದರಾಬಾದ್ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 186 ರನ್ ಗಳ ಬೃಹತ್ ಮೊತ್ತ ಕಲೆಹಾಕಿತು. ಈ ಮೊತ್ತ ಬೆನ್ನಟ್ಟಿದ ಆರ್ಸಿಬಿ ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ವಿರಾಟ್ ಕೊಹ್ಲಿ ಮತ್ತು ನಾಯಕ ಫಾಫ್ ಡು ಪ್ಲೇಸಿಸ್ ಶತಕದ ಜೊತೆಯಾಟದ ಮೂಲಕ ತಂಡಕ್ಕೆ ಭರ್ಜರಿ ಗೆಲುವು ತಂದುಕೊಟ್ಟರು. ಆರ್ಸಿಬಿ 19.2 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 187 ರನ್ ಗಳಿಸುವ ಮೂಲಕ 8 ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸಿತು. ಈ ಮೂಲಕ ಆರ್ಸಿಬಿ ಪ್ಲೇಆಫ್ ಹಂತಕ್ಕೆ ಸನಿಹವಾಗಿದ್ದಲ್ಲದೇ ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ