ಭಾರತ ಫುಟ್ಬಾಲ್ ತಂಡದ ನಾಯಕನ ನೆಟ್ಫ್ಲಿಕ್ಸ್ ಪಾಸ್ವರ್ಡ್ ಕೇಳಿದ ಅಭಿಮಾನಿ!; ಯಾಕಂತೆ?
ಅಭಿಮಾನಿ ಫೇಸ್ಬುಕ್ನಲ್ಲಿ ಬರೆದುಕೊಂಡಿರುವ ಬೇಡಿಕೆಯನ್ನು ಚೆಟ್ರಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಫೋಟೋ, ಆಟೋಗ್ರಾಫ್ ಬದಲಿಗೆ ಇಲ್ಲೊಬ್ಬ ಅಭಿಮಾನಿ ವಿನೂತನ ಬೇಡಿಕೆ ಇಟ್ಟಿದ್ದಾನೆ. ನಾನು ಅಭಿಮಾನಿಯ ಈ ಬೇಡಿಕೆಯನ್ನು ಪರಿಗಣಿಸಲು ಬಯಸುತ್ತೇನೆ ಎಂದು ಬರೆದುಕೊಂಡಿದ್ದಾರೆ
ಸಾಮಾನ್ಯವಾಗಿ ಅಭಿಮಾನಿಗಳು ಸೆಲೆಬ್ರಿಟಿಗಳ ಜೊತೆಗೆ ಆಟೋಗ್ರಾಫ್, ಜರ್ಸಿ, ಕ್ಯಾಪ್ ಕೇಳುವುದು ಸಾಮಾನ್ಯ. ಆದರೆ ಇಲ್ಲೊಬ್ಬ ಅಭಿಮಾನಿ ನೆಟ್ಫ್ಲಿಕ್ಸ್ ಐಡಿ ಮತ್ತು ಪಾಸ್ವರ್ಡ್ ಕೊಡಿ ಎಂದು ಭಾರತದ ಫುಟ್ಬಾಲ್ ತಂಡದ ನಾಯಕ ಸುನೀಲ್ ಚೆಟ್ರಿ ಅವರ ಬಳಿ ಕೇಳಿದ್ದಾನೆ. ಅಭಿಮಾನಿಯ ಈ ಬೇಡಿಕೆ ಸುನೀಲ್ ಚೆಟ್ರಿ ಅವರಿಗೆ ಅಚ್ಚರಿ ಮೂಡಿಸಿದೆ.
ಲಾಕ್ಡೌನ್ ಅವಧಿಯಲ್ಲಿ ಕ್ರೀಡಾಪಟುಗಳು ಮನೆಯಲ್ಲಿ ಇದ್ದುಕೊಂಡು ಫ್ಯಾಮಿಲಿ ಜೊತೆಗೆ ಸಮಯ ಕಳೆಯುತ್ತಿದ್ದಾರೆ. ಬಿಡುವಿದ್ದಾಗ ಸಾಮಾಜಿಕ ಜಾಲತಾಣ ಬಳಸುತ್ತಿರುತ್ತಾರೆ. ಅದರಂತೆ ಸುನೀಲ್ ಚೆಟ್ರಿ ಕೂಡ ಮನೆಯಲ್ಲಿ ಇದ್ದುಕೊಂಡು ಲಾಕ್ಡೌನ್ ಆದೇಶ ಪಾಲಿಸಸುತ್ತಾ, ಬಿಡುವಿದ್ದಾಗ ಸೋಷಿಯಲ್ ಮೀಡಿಯಾ ಬಳಸುತ್ತಿದ್ದಾರೆ. ಈ ವೇಳೆ ಅವರಿಗೆ ಅಭಿಮಾನಿಯೊಬ್ಬ ಫೇಸ್ಬುಕ್ನಲ್ಲಿ ಹೀಗೊಂದು ಬೇಡಿಕೆ ಇಟ್ಟಿದ್ದಾನೆ. ‘ಚೆಟ್ರಿ ಬಾಯ್ ನಿಮ್ಮ ನೆಟ್ಫ್ಲಿಕ್ಸ್ ಯೂಸರ್ ಐಡಿ ಹಾಗೂ ಫಾಸ್ವರ್ಡ್ ಕೊಡಿ ಎಂದು ಕೆಳಿಕೊಂಡಿದ್ದಾನೆ. ಲಾಕ್ಡೌನ್ ಮುಗಿದ ಬಳಿಕ ಪಾಸ್ವರ್ಡ್ ಬದಲಾಯಿಸಿಕೊಳ್ಳಿ ಎಂದು ಹೇಳಿದ್ದಾನೆ.
Jersey ❌
Autograph on a picture ❌
Reply to the post ❌
Video wishing the neighbour's son's pet dog ❌
Here's someone who has priorities straight and it's really making me want to consider the demand. 😂 pic.twitter.com/OdBGrS7g5v
ಅಭಿಮಾನಿ ಫೇಸ್ಬುಕ್ನಲ್ಲಿ ಬರೆದುಕೊಂಡಿರುವ ಬೇಡಿಕೆಯನ್ನು ಚೆಟ್ರಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಫೋಟೋ, ಆಟೋಗ್ರಾಫ್ ಬದಲಿಗೆ ಇಲ್ಲೊಬ್ಬ ಅಭಿಮಾನಿ ವಿನೂತನ ಬೇಡಿಕೆ ಇಟ್ಟಿದ್ದಾನೆ. ನಾನು ಅಭಿಮಾನಿಯ ಈ ಬೇಡಿಕೆಯನ್ನು ಪರಿಗಣಿಸಲು ಬಯಸುತ್ತೇನೆ ಎಂದು ಬರೆದುಕೊಂಡಿದ್ದಾರೆ. ಇನ್ನು ಚೆಟ್ರಿ ಅವರ ಈ ಟ್ವೀಟ್ ನೋಡಿ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಮತ್ತು ಸೈನಾ ನೆಹ್ವಾಲ್ ಪ್ರತಿಕ್ರಿಯಿಸಿದ್ದಾರೆ.