RCB New Captain: ಇವರೇ ನೋಡಿ RCB ತಂಡದ ಮುಂದಿನ ನಾಯಕ

Faf Du Plessis: ವಿರಾಟ್ ಕೊಹ್ಲಿ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಯಾರು ಎನ್ನುವ ಪ್ರಶ್ನೆಗೆ ಬಹುತೇಕ ಉತ್ತರ ಸಿಕ್ಕಿದೆ. ಹೌದು ದಕ್ಷಿಣ ಆಫ್ರಿಕಾದ ಸ್ಟಾರ್ ಆಟಗಾರ ಫಾಪ್ ಡುಪ್ಲಸೀಸ್ ಆರ್ಸಿಬಿಯ ಮುಂದಿನ ನಾಯಕ ಎಂದು ಹೇಳಲಾಗುತ್ತಿದೆ

RCB

RCB

  • Share this:
    ಕಳೆದ ಐಪಿಎಲ್ (IPL)ವೇಳೆ ವಿರಾಟ್ ಕೊಹ್ಲಿ(Virat Kohli) ರಾಯಲ್ ಚಾಲೆಂಜರ್ಸ್ ಬೆಂಗಳೂರು(Royal challengers Bangalore) ತಂಡದ ನಾಯಕತ್ವ(Captaincy) ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಅಭಿಮಾನಿಗಳಲ್ಲಿ(Fans) ಕಾಡುತ್ತಿದ್ದ ಒಂದೇ ಪ್ರಶ್ನೆ ಎಂದರೆ ಅದು ಬೆಂಗಳೂರು ತಂಡದ ಮುಂದಿನ ನಾಯಕ ಯಾರು ಎಂದು. ಐಪಿಎಲ್ ಹರಾಜು ಪ್ರಕ್ರಿಯೆಯ ವೇಳೆ ಆರ್ಸಿಬಿ ಮನೀಶ್ ಪಾಂಡೆ(Manish Pandey), ಡೇವಿಡ್ ವಾರ್ನರ್(David Warner),ಶ್ರೇಯಸ್ ಅಯ್ಯರ್(Shreyas Iyer),ದೇವದತ್ ಪಡಿಕ್ಕಲ್,ಹೀಗೆ ಇವರುಗಳನ್ನು ಖರೀದಿ ಮಾಡಿ ಇದರಲ್ಲಿ ಒಬ್ಬರಿಗೆ ತಂಡದ ನಾಯಕತ್ವ ನೀಡಬಹುದು ಎಂದು ಒಬ್ಬರಲ್ಲಾ ಒಬ್ಬರ ಬಗ್ಗೆ ಗುಸುಗುಸು ಕೇಳಿ ಬರುತ್ತಿತ್ತು. ಅಂತಿಮವಾಗಿ ಕೇಳಿ ಬಂದ ಹೆಸರುಗಳಲ್ಲಿ ಯಾರನ್ನು ಸಹ ಬೆಂಗಳೂರು ಖರೀದಿ ಮಾಡಲಿಲ್ಲ. ಹೀಗಾಗಿ ಬೆಂಗಳೂರು ತಂಡದ ನಾಯಕ ಯಾರಾಗಬಹುದು ಎಂಬ ಮಿಲಿಯನ್ ಡಾಲರ್ ಪ್ರಶ್ನೆ ಅಭಿಮಾನಿಗಳಲ್ಲಿ ಕಾಡುತ್ತಿತ್ತು. ಈಗ ಈ ಎಲ್ಲಾ ಅಂತೆ-ಕಂತೆಗಳಿಗೆ ಬಹುತೇಕ ಉತ್ತರ ಸಿಕ್ಕಿದೆ.

    RCB ಮುಂದಿನ ನಾಯಕ ಫಾಪ್ ಡುಪ್ಲಸೀಸ್

    ವಿರಾಟ್ ಕೊಹ್ಲಿ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಯಾರು ಎನ್ನುವ ಪ್ರಶ್ನೆಗೆ ಬಹುತೇಕ ಉತ್ತರ ಸಿಕ್ಕಿದೆ. ಹೌದು ದಕ್ಷಿಣ ಆಫ್ರಿಕಾದ ಸ್ಟಾರ್ ಆಟಗಾರ ಫಾಪ್ ಡುಪ್ಲಸೀಸ್ ಆರ್ಸಿಬಿಯ ಮುಂದಿನ ನಾಯಕ ಎಂದು ಹೇಳಲಾಗುತ್ತಿದೆ.

    ಫಾಫ್ ಡು ಪ್ಲೆಸಿಸ್ ಐಪಿಎಲ್‌ನಲ್ಲಿ ಅತ್ಯುತ್ತಮ ಅಂಕಿಅಂಶವನ್ನು ಹೊಂದಿದ್ದು ಅಂತಾರಾಷ್ಟ್ರೀಯ ಮಟ್ಟದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಮುನ್ನಡೆಸಿದ ಅನುಭವ ಕೂಡ ಅವರಿಗೆ ಇದೆ.

    ಇದನ್ನೂ ಓದಿ: ಹರಿಯಾಣ ಸ್ಟೀಲರ್ಸ್ ಗೆ ಗುದ್ದಿದ ಬೆಂಗಳೂರು ಬುಲ್ಸ್

    .ಈ ಹಿಂದೆ ಗ್ಲೆನ್ ಮ್ಯಾಕ್ಸ್ವೆಲ್ ಅವರಿಗೆ ಬೆಂಗಳೂರು ತಂಡದ ನಾಯಕತ್ವ ವಹಿಸಿ ಕೊಡಲಾಗುತ್ತದೆ ಎಂದು ಹೇಳಲಾಗುತ್ತಿತ್ತು. ಆದರೆ ಗ್ಲೆನ್ ಮ್ಯಾಕ್ಸ್ವೆಲ್ ನಮ್ಮ ಮದುವೆಯಾದ ಮೇಲೆ ಐಪಿಎಲ್ ನ ಆರಂಭಿಕ ಪಂದ್ಯಗಳಿಗೆ ಲಭ್ಯವಾಗುವುದಿಲ್ಲ. ಹೀಗಾಗಿ ಫಾಪ್ ಡುಪ್ಲಸೀಸ್ ಅವರನ್ನ ಬೆಂಗಳೂರು ತಂಡ ನಾಯಕನನ್ನಾಗಿ ಮಾಡಲಿದೆ ಎಂದು ಹೇಳಲಾಗುತ್ತಿದೆ.

    ಇನ್ನು ಫಾಫ್ ಡು ಪ್ಲೆಸಿಸ್ ಸೂಕ್ತ ಆಯ್ಕೆ ಎಂದು ನಾವು ಅಂದುಕೊಂಡಿದ್ದೇವೆ. ಆದರೆ ಅದನ್ನು ನಿರ್ಧರಿಸಲು ಸಮಯ ಬೇಕಿದೆ. ಮ್ಯಾಕ್ಸ್‌ವೆಲ್ ಅವರ ಪರಿಸ್ಥಿತಿ ಹಾಗೂ ಲಭ್ಯತೆಯ ಬಗ್ಗೆ ನಾವು ಸ್ಪಷ್ಟತೆಗಾಗಿ ಕಾಯುತ್ತಿದ್ದೇವೆ. ಈಗಿನ ಮಾಹಿತಿಗಳ ಪ್ರಕಾರ ಆರಂಭಿಕ ಕೆಲ ಪಂದ್ಯಗಳಲ್ಲಿ ಅವರ ಲಭ್ಯತೆ ಕಷ್ಟವಾಗಲಿದೆ. ಹೀಗಾಗಿ ಫಾಫ್ ಸೂಕ್ತ ಆಯ್ಕೆ" ಎಂದು ಮೂಲಗಳ ಹೇಳಿಕೆಯನ್ನು ಉಲ್ಲೇಖಿಸಿ ಹಲವು ಮಾಧ್ಯಮಗಳು ವರದಿ ಮಾಡಿವೆ.

    ಕಳೆದ ವರ್ಷ RCB ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದ ವಿರಾಟ್

    ಇನ್ನು ಕಳೆದ ವರ್ಷ ಐಪಿಎಲ್ ನ ಎರಡನೇ ಚರಣದ ವೇಳೆ ಇದ್ದಕ್ಕಿದ್ದಂತೆ ವಿರಾಟ್ ಕೊಹ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕತ್ವ ಸ್ಥಾನಕ್ಕೆ ರಾಜೀನಾಮೆ ನೀಡಿದ್ರು. ಅಲ್ಲದೆ ಕೇವಲ ಆರ್ಸಿಬಿ ತಂಡದಲ್ಲಿ ಆಟಗಾರನಾಗಿ ಮುಂದುವರಿಯುವುದಾಗಿ ಹೇಳಿದ್ರು. ಇನ್ನು ಬೆಂಗಳೂರು ಸಹ ಹರಾಜು ಪ್ರಕ್ರಿಯೆಗೆ ಮುನ್ನ 16 ಕೋಟಿ ರೂಪಾಯಿ ವಿರಾಟ್ ಕೊಹ್ಲಿ ಅವರನ್ನು ಮಾಡಿಕೊಂಡಿತ್ತು

    ಇದನ್ನೂ ಓದಿ: ಬೆಂಗಳೂರಿನಲ್ಲಿ ಶುರುವಾಗುವ ಹೊಸಾ ಕ್ರಿಕೆಟ್ ಅಕಾಡೆಮಿಯಲ್ಲಿ ಏನೇನು ಇರಲಿದೆ? ಅಲ್ಲಿಗೆ ಪ್ರವೇಶ ಹೇಗೆ?

    ಹರಾಜಿನ ಬಳಿಕ ಆರ್‌ಸಿಬಿ ತಂಡ

    ವಿರಾಟ್ ಕೊಹ್ಲಿ(15 ಕೋಟಿ), ಗ್ಲೆನ್ ಮ್ಯಾಕ್ಸ್‌ವೆಲ್(11 ಕೋಟಿ), ಮೊಹಮ್ಮದ್ ಸಿರಾಜ್ (7 ಕೋಟಿ), ಫಾಫ್ ಡು ಪ್ಲೆಸಿಸ್ (7 ಕೋಟಿ), ಹರ್ಷಲ್ ಪಟೇಲ್ (10.75 ಕೋಟಿ), ವನಿಂದು ಹಸರಂಗ (10.75 ಕೋಟಿ), ದಿನೇಶ್ ಕಾರ್ತಿಕ್ (5.50 ಕೋಟಿ), ಜೋಶ್ ಹೇಜಲ್‌ವುಡ್ (7.75 ಕೋಟಿ), ಶಹಬಾಜ್ ಅಹ್ಮದ್ (2.40 ಕೋಟಿ) ಅನುಜ್ ರಾವತ್ (3.4 ಕೋಟಿ ರೂ.),

    ಆಕಾಶ್ ದೀಪ್ ಸಿಂಗ್ (20 ಲಕ್ಷ ರೂ.). ಮಹಿಪಾಲ್ ಲೊಮ್ರೋರ್ (95 ಲಕ್ಷ ರೂ.). ಫಿನ್ ಅಲೆನ್ (80 ಲಕ್ಷ ರೂ.), ಶೆರ್ಫೇನ್ ರುದರ್‌ಫೋರ್ಡ್ (1 ಕೋಟಿ ರೂ.), ಜೇಸನ್ ಬೆಹ್ರೆಂಡಾರ್ಫ್ (ರೂ. 75 ಲಕ್ಷ), ಸುಯಶ್ ಪ್ರಭುದೇಸಾಯಿ (ರೂ. 30 ಲಕ್ಷ), ಚಾಮಾ ಮಿಲಿಂದ್ (ರೂ. 25 ಲಕ್ಷ),

    ಅನೀಶ್ವರ್ ಗೌತಮ್ (ರೂ. 20 ಲಕ್ಷ), ಕರ್ಣ್ ಶರ್ಮಾ (50 ಲಕ್ಷ), ಲುವ್ನಿತ್ ಸಿಸೋಡಿಯಾ ( 20 ಲಕ್ಷ), ಸಿದ್ಧಾರ್ಥ್ ಕೌಲ್ (75 ಲಕ್ಷ), ಡೇವಿಡ್ ವಿಲ್ಲೆ (2 ಕೋಟಿ)
    Published by:ranjumbkgowda1 ranjumbkgowda1
    First published: