HOME » NEWS » Sports » CRICKET FAF DU PLESSIS RETIRES FROM TEST CRICKET ZP

Faf du Plessis: ಬಿಗ್ ಪ್ಲ್ಯಾನ್​ನೊಂದಿಗೆ ಟೆಸ್ಟ್ ಕ್ರಿಕೆಟ್​ಗೆ ದಿಢೀರ್ ನಿವೃತ್ತಿ ಘೋಷಿಸಿದ ಫಾಫ್ ಡುಪ್ಲೆಸಿಸ್..!

ಫಾಫ್ ಡುಪ್ಲೆಸಿಸ್ ಕಳೆದ ವರ್ಷ ದಕ್ಷಿಣ ಆಫ್ರಿಕಾದ ಟೆಸ್ಟ್ ಮತ್ತು ಟಿ 20 ನಾಯಕನ ಸ್ಥಾನವನ್ನು ತ್ಯಜಿಸಿದ್ದರು. ಇದಾಗ್ಯೂ ತಂಡದಲ್ಲಿ ಸ್ಥಾನ ಪಡೆದಿದ್ದ ಡುಪ್ಲೆಸಿಸ್, ಇತ್ತೀಚೆಗೆ ಪಾಕಿಸ್ತಾನ ವಿರುದ್ಧ ಎರಡು ಟೆಸ್ಟ್ ಸರಣಿಗಳನ್ನು ಆಡಿದ್ದರು.

news18-kannada
Updated:February 17, 2021, 6:22 PM IST
Faf du Plessis: ಬಿಗ್ ಪ್ಲ್ಯಾನ್​ನೊಂದಿಗೆ ಟೆಸ್ಟ್ ಕ್ರಿಕೆಟ್​ಗೆ ದಿಢೀರ್ ನಿವೃತ್ತಿ ಘೋಷಿಸಿದ ಫಾಫ್ ಡುಪ್ಲೆಸಿಸ್..!
faf du plessis
  • Share this:
ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಮಾಜಿ ನಾಯಕ ಫಾಫ್ ಡುಪ್ಲೆಸಿಸ್ ಟೆಸ್ಟ್ ಕ್ರಿಕೆಟ್​ಗೆ ದಿಢೀರ್ ವಿದಾಯ ಹೇಳಿದ್ದಾರೆ. ತಮ್ಮ ನಿರ್ಧಾರದ ಬಗ್ಗೆ ಬುಧವಾರ ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿದ್ದು, ಹೊಸದನ್ನು ಪ್ರಾರಂಭಿಸಲು ಇದು ಸೂಕ್ತ ಸಮಯ ಎಂದು ಭಾವಿಸುವೆ ಎಂದು ಬರೆದುಕೊಂಡಿದ್ದಾರೆ. ದಕ್ಷಿಣ ಆಫ್ರಿಕಾ ಪರ 69 ಟೆಸ್ಟ್ ಪಂದ್ಯಗಳನ್ನು ಆಡಿರುವ ಡುಪ್ಲೆಸಿಸ್​ 4163 ರನ್ ಗಳಿಸಿದ್ದು, ಇದರಲ್ಲಿ 10 ಶತಕಗಳು ಮತ್ತು 21 ಅರ್ಧಶತಕಗಳು ಮೂಡಿಬಂದಿದ್ದವು.

ಇದೊಂದು ಕಠಿಣ ವರ್ಷವಾಗಿತ್ತು. ಇದಾಗ್ಯೂ ನನ್ನ ಹೃದಯ ಸ್ಪಷ್ಟ ನಿರ್ಧಾರ ತಾಳಿದೆ. ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆಯಲು ಇದು ಸರಿಯಾದ ಸಮಯ. ಆಟದ ಎಲ್ಲಾ ಸ್ವರೂಪಗಳಲ್ಲಿ ದೇಶವನ್ನು ಪ್ರತಿನಿಧಿಸುವುದು ಗೌರವವಾಗಿದೆ. ಆದರೆ ಈಗ ನಾನು ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಹೊಂದುವ ಸಮಯ ಬಂದಿದೆ. ಮುಂದಿನ ಎರಡು ವರ್ಷಗಳಲ್ಲಿ ಐಸಿಸಿ ಟಿ 20 ವಿಶ್ವಕಪ್ ಇರಲಿದೆ. ಈ ಕಾರಣಕ್ಕಾಗಿ, ನಾನು ಈ ಚುಟುಕು ಕ್ರಿಕೆಟ್​ನತ್ತ ಹೆಚ್ಚಿನ ಗಮನವನ್ನು ಕೇಂದ್ರೀಕರಿಸುತ್ತಿದ್ದೇನೆ ಎಂದು ಡುಪ್ಲೆಸಿಸ್ ತಿಳಿಸಿದ್ದಾರೆ.

ದಕ್ಷಿಣ ಆಫ್ರಿಕಾ ತಂಡವು ಇದುವರೆಗೆ ಟಿ20 ವಿಶ್ವಕಪ್ ಆಗಲಿ ಅಥವಾ ಏಕದಿನ ವಿಶ್ವಕಪ್​ ಟ್ರೋಫಿಯಾಗಲಿ ಮುಡಿಗೇರಿಸಿಕೊಂಡಿಲ್ಲ. ಇದೀಗ ಮುಂಬರುವ ಎರಡು ಟಿ20 ವಿಶ್ವಕಪ್​ನ್ನು ಗಮನದಲ್ಲಿರಿಸಿ ಟೆಸ್ಟ್ ಕ್ರಿಕೆಟ್​ಗೆ ನಿವೃತ್ತಿ ನೀಡುತ್ತಿರುವುದಾಗಿ ಡುಪ್ಲೆಸಿಸ್​ ಹೇಳಿದ್ದಾರೆ. ಅತ್ತ ಎಬಿ ಡಿವಿಲಿಯರ್ಸ್ ಕೂಡ ಟಿ20 ವಿಶ್ವಕಪ್ ಮೂಲಕ ದಕ್ಷಿಣ ಆಫ್ರಿಕಾ ತಂಡಕ್ಕೆ ಮತ್ತೆ ಮರಳಲಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ ಮುಂದಿನ 2 ವಿಶ್ವಕಪ್​ಗಾಗಿ ದಕ್ಷಿಣ ಆಫ್ರಿಕಾ ಆಟಗಾರರು ಪ್ರಬಲ ಪೈಪೋಟಿ ನಡೆಸಲಿರುವುದಂತು ದಿಟ.

ಫಾಫ್ ಡುಪ್ಲೆಸಿಸ್ ಕಳೆದ ವರ್ಷ ದಕ್ಷಿಣ ಆಫ್ರಿಕಾದ ಟೆಸ್ಟ್ ಮತ್ತು ಟಿ 20 ನಾಯಕನ ಸ್ಥಾನವನ್ನು ತ್ಯಜಿಸಿದ್ದರು. ಇದಾಗ್ಯೂ ತಂಡದಲ್ಲಿ ಸ್ಥಾನ ಪಡೆದಿದ್ದ ಡುಪ್ಲೆಸಿಸ್, ಇತ್ತೀಚೆಗೆ ಪಾಕಿಸ್ತಾನ ವಿರುದ್ಧ ಎರಡು ಟೆಸ್ಟ್ ಸರಣಿಗಳನ್ನು ಆಡಿದ್ದರು. ಆದರೆ ಈ ವೇಳೆ ಫಾರ್ಮ್​ ತೋರ್ಪಡಿಸಲು ಸಾಧ್ಯವಾಗಿರಲಿಲ್ಲ. ಮೊದಲ ಟೆಸ್ಟ್‌ನಲ್ಲಿ 33 ಮತ್ತು ಎರಡನೇ ಟೆಸ್ಟ್‌ನಲ್ಲಿ 22 ರನ್ ಗಳಿಸಿದರು. ಎರಡೂ ಟೆಸ್ಟ್ ಪಂದ್ಯಗಳಲ್ಲಿ ಆತಿಥೇಯರು ದಕ್ಷಿಣ ಆಫ್ರಿಕಾ ತಂಡವನ್ನು ಸೋಲಿಸಿದ್ದರು.

ಈ ಸರಣಿ ಬೆನ್ನಲ್ಲೇ ಡುಪ್ಲೆಸಿಸ್​ ಟೆಸ್ಟ್ ಆಯ್ಕೆ ಬಗ್ಗೆ ಪ್ರಶ್ನೆಗಳೆದಿದ್ದವು. ಆದರೆ, ಎರಡು ತಿಂಗಳ ಹಿಂದೆ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅದ್ಭುತ ಬ್ಯಾಟಿಂಗ್ ಡುಪ್ಲೆಸಿಸ್​ ಮೊದಲ ಇನ್ನಿಂಗ್ಸ್‌ನಲ್ಲಿ 199 ರನ್ ಗಳಿಸಿದ್ದರು. ಇದು ಅವರ ಟೆಸ್ಟ್ ವೃತ್ತಿಜೀವನದ ಅತ್ಯಧಿಕ ಸ್ಕೋರ್ ಕೂಡ ಆಗಿದೆ. ಅಲ್ಲದೆ ಮುಂಬರುವ ಆಸ್ಟ್ರೇಲಿಯಾ ಪ್ರವಾಸದೊಂದಿಗೆ ಟೆಸ್ಟ್ ವೃತ್ತಿಜೀವನಕ್ಕೆ ವಿದಾಯ ಹೇಳಲು ಬಯಸಿದ್ದರು. ಆದರೆ ಕೊರೋನಾ ಕಾರಣದಿಂದ ಆ ಸರಣಿ ರದ್ದಾಗಿದೆ. ಹೀಗಾಗಿ 36 ವರ್ಷದ ಫಾಫ್ ಡುಪ್ಲೆಸಿಸ್ ಮೈದಾನದ ಹೊರಗಿನಿಂದಲೇ ಟೆಸ್ಟ್ ಕ್ರಿಕೆಟ್​​ಗೆ ವಿದಾಯವನ್ನು ಘೋಷಿಸಿದ್ದಾರೆ.
Published by: zahir
First published: February 17, 2021, 6:22 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories