'ರಸ್ತೆ ಅಪಘಾತದಲ್ಲಿ ಖ್ಯಾತ ಕ್ರಿಕೆಟಿಗ ಸನತ್ ಜಯಸೂರ್ಯ ಸಾವು'; ಸುದ್ದಿ ಕೇಳಿ ಅಶ್ವಿನ್​ ಮಾಡಿದ ಟ್ವೀಟ್ ನೋಡಿ!

Sanath Jayasuriya: ಹೋಂಡಾಕಾರ್​ನಲ್ಲಿ ಬಂದ ಅಪರಿಚಿತ ವ್ಯಕ್ತಿಯೊಬ್ಬ ಕ್ರಿಕೆಟಿಗ ಜಯಸೂರ್ಯ ಅವರಿಗೆ ಡಿಕ್ಕಿ ಹೊಡೆದಿದ್ದು ಸಾಕಷ್ಟು ಗಾಯಗಳಾಗಿವೆ. ತಕ್ಷಣವೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರು ಎಳೆದಿದ್ದಾರೆ

ಸನತ್ ಜಯಸೂರ್ಯ ಸಾವು ಸುಳ್ಳು ಸುದ್ದಿ

ಸನತ್ ಜಯಸೂರ್ಯ ಸಾವು ಸುಳ್ಳು ಸುದ್ದಿ

  • News18
  • Last Updated :
  • Share this:
ಬೆಂಗಳೂರು (ಮೇ. 27): ಶ್ರೀಲಂಕಾ ಕ್ರಿಕೆಟ್ ತಂಡದ ಮಾಜಿ ನಾಯಕ ಸನತ್ ಜಯಸೂರ್ಯ ಅವರು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆಂಬ ಸುಳ್ಳುಸುದ್ದಿ ಎಲ್ಲೆಡೆ ಹರಿದಾಡುತ್ತಿದೆ.

'ಕೆನಡಾದಲ್ಲಿ ಹೋಂಡಾಕಾರ್​ನಲ್ಲಿ ಬಂದ ಅಪರಿಚಿತ ವ್ಯಕ್ತಿಯೊಬ್ಬ ಕ್ರಿಕೆಟಿಗ ಜಯಸೂರ್ಯ ಅವರಿಗೆ ಡಿಕ್ಕಿ ಹೊಡೆದಿದ್ದು ಸಾಕಷ್ಟು ಗಾಯಗಳಾಗಿವೆ. ತಕ್ಷಣವೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರು ಎಳೆದಿದ್ದಾರೆ' ಎಂಬ ಸುದ್ದಿ ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿತ್ತು.

 ಇದನ್ನೂ ಓದಿ: ಈ ನಾಲ್ಕು ಸ್ಟಾರ್ ಆಟಗಾರರಿಲ್ಲದೆ '2019 ವಿಶ್ವಕಪ್' ಬೋರೋ ಬೋರು!


ಸನತ್ ಜಯಸೂರ್ಯ
ಸನತ್ ಜಯಸೂರ್ಯ


 

ಆದರೆ, ಜಯಸೂರ್ಯ ಈ ಬಗ್ಗೆ ತಮ್ಮ ಟ್ವಿಟ್ಟರ್​ನಲ್ಲಿ ಅಧಿಕೃತ ಹೇಳಿಕೆ ನೀಡಿದ್ದು, 'ನನ್ನ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ. ನನಗೇನು ಆಗಿಲ್ಲ. ಆರೋಗ್ಯವಾಗಿದ್ದೇನೆ. ನಾನು ಶ್ರೀಲಂಕಾದಲ್ಲೇ ಇರುವೆ. ಕೆನಡಾಕ್ಕೆ ಭೇಟಿಯೇ ನೀಡಿಲ್ಲ' ಎಂದಿದ್ದಾರೆ.

 ಇನ್ನು ಈ ಸುಳ್ಳು ಸುದ್ದಿಯನ್ನು ಭಾರತದ ಕ್ರಿಕೆಟ್ ತಂಡದ ಆಟಗಾರ ರವಿಚಂದ್ರನ್ ಅಶ್ವಿನ್ ನಂಬಿದ್ದರಂತೆ. 9.45 ಮಿಲಿಯನ್ ಹಿಂಬಾಲಕರನ್ನು ಹೊಂದಿರುವ ಅಶ್ವಿನ್​​ ತಮ್ಮ ಟ್ವೀಟರ್​ನಲ್ಲಿ, ಈ ಸುದ್ದಿ ಬಗೆಗಿನ ಸತ್ಯವನ್ನು ಹೇಳುವಂತೆ ಕೇಳಿದ್ದರು.

'ಸನತ್ ಜಯಸೂರ್ಯ ಬಗ್ಗೆ ಕೇಳು ಬರುತ್ತಿರುವ ಸುದ್ದಿ ನಿಜವೇ?. ನನಗೆ ವಾಟ್ಸ್​ಆಪ್​ ಮೂಲಕ ಜಯಸೂರ್ಯ ಸಾವನ್ನಪ್ಪಿದ್ದಾರೆ ಎಂಬ ಸುದ್ದಿ ತಿಳಿಯಿತು. ಆದರೆ ಟ್ವಿಟ್ಟರ್​ನಲ್ಲಿ ಈ ಬಗ್ಗೆ ಯಾವುದೇ ಮಾಹಿತಿಯಿಲ್ಲವೆಂದು' ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಅಬ್ಬಾ..! ವಿಶ್ವಕಪ್​​ನಲ್ಲಿ ಪ್ರತಿ ಭಾರತೀಯ ಆಟಗಾರನ ಸಂಭಾವನೆ ಎಷ್ಟು ಗೊತ್ತಾ..?

 ಅಶ್ವಿನ್ ಅವರ ಗೊಂದಲಕ್ಕೆ ಅನೇಕರು ಕಮೆಂಟ್ ಮಾಡಿ ಇದು ಸುಳ್ಳು ಸುದ್ದಿ ಎಂದು ತಿಳಿಸಿದ್ದಾರೆ.

 

First published: