ಆಸೀಸ್- ಲಂಕಾ ಸರಣಿಗೆ ಇಂದು ಭಾರತ ತಂಡ ಪ್ರಕಟ; ಈ ಒಬ್ಬ ಆಟಗಾರನ ಮೇಲೆ ಎಲ್ಲರ ಕಣ್ಣು!

ವೆಸ್ಟ್​ ಇಂಡೀಸ್ ವಿರುದ್ಧದ ಎರಡನೇ ಏಕದಿನ ಸರಣಿ ವೇಳೆ ವಿಶಾಖಪಟ್ಟಣದಲ್ಲಿ ಜಸ್​ಪ್ರೀತ್ ಬುಮ್ರಾ ಟೀಂ ಇಂಡಿಯಾ ಜೊತೆ ಅಭ್ಯಾಸ ನಡೆಸಿದ್ದರು. ಆದರೆ, ಬುಮ್ರಾಗೆ ಫಿಟ್ನೆಸ್ ಪ್ರಮಾಣ ಪತ್ರ ನೀಡಲು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ನಿರಾಕರಿಸಿತ್ತು.

news18-kannada
Updated:December 23, 2019, 11:39 AM IST
ಆಸೀಸ್- ಲಂಕಾ ಸರಣಿಗೆ ಇಂದು ಭಾರತ ತಂಡ ಪ್ರಕಟ; ಈ ಒಬ್ಬ ಆಟಗಾರನ ಮೇಲೆ ಎಲ್ಲರ ಕಣ್ಣು!
ಟೀಂ ಇಂಡಿಯಾ- ಬಿಸಿಸಿಐ
  • Share this:
ಬೆಂಗಳೂರು (ಡಿ. 23): ವೆಸ್ಟ್​ ಇಂಡೀಸ್ ವಿರುದ್ಧದ ಏಕದಿನ ಸರಣಿಯನ್ನು 2-1 ಅಂತರದಿಂದ ವಶಪಡಿಸಿಕೊಂಡು ಟೀಂ ಇಂಡಿಯಾ 2019 ವರ್ಷವನ್ನು ಅತ್ಯುತ್ತಮವಾಗಿ ಅಂತ್ಯಗೊಳಿಸಿದೆ. ಇದರ ಬೆನ್ನಲ್ಲೆ 2020 ಹೊಸ ವರ್ಷದ ಮೊದಲ ವಾರದಲ್ಲಿ ಮತ್ತೊಂದು ಕಾದಾಟಕ್ಕೆ ತವರಿನಲ್ಲಿ ಭಾರತ ಸಜ್ಜಾಗಿದೆ.

ಶ್ರೀಲಂಕಾ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಸೀಮಿತ ಓವರ್​ಗಳ ಸರಣಿಯಲ್ಲಿ ಭಾರತ ಭಾಗವಹಿಸಲಿದ್ದು, ಇಂದು ಈ ಪಂದ್ಯಕ್ಕೆ ತಂಡ ಪ್ರಕಟವಾಗಲಿದೆ. ನವ ದೆಹಲಿಯಲ್ಲಿ ಸಂಜೆ ಹೊತ್ತಿಗೆ ಬಿಸಿಸಿಐ ಸಭೆ ಸೇರಲಿದ್ದು, ಲಂಕಾ- ಆಸೀಸ್ ಸರಣಿಗೆ ಟೀಂ ಇಂಡಿಯಾವನ್ನು ಆಯ್ಕೆ ಮಾಡಲಿದ್ದಾರೆ.

Virat Kohli: ಈ ವರ್ಷದ ಆ 30 ನಿಮಿಷ ಬಿಟ್ಟು ಉಳಿದ ಘಳಿಗೆ ಅದ್ಭುತವಾಗಿತ್ತು; ವಿರಾಟ್ ಕೊಹ್ಲಿ

ಆಯ್ಕೆ ಸಮಿತಿ ಮುಖ್ಯಸ್ಥ ಎಂಎಸ್‌ಕ ಪ್ರಸಾದ್ ನೇತೃತ್ವದಲ್ಲಿ ನಡೆಯಲಿರುವ ಕೊನೆಯ ಆಯ್ಕೆ ಪ್ರಕ್ರಿಯೆ ಇದಾಗಿದೆ ಎಂದು ಹೇಳಲಾಗುತ್ತಿದೆ. ಈ ಮೂಲಕ ಪ್ರಸಾದ್ ಅಧಿಕಾರವಧಿ ಅಂತ್ಯಗೊಳ್ಳಲಿದ್ದು , ಹೊಸ ವರ್ಷದಲ್ಲಿ ನೂತನ ಆಯ್ಕೆ ಸಮಿತಿ ಅಧ್ಯಕ್ಷನನ್ನು ಬಿಸಿಸಿಐ ಘೋಷಿಸಲಿದೆ.

ಲಂಕಾ ಹಾಗೂ ಆಸ್ಟ್ರೇಲಿಯಾ ಸರಣಿಗೆ ಟೀಂ ಇಂಡಿಯಾದ ಯಾವ ಆಟಗಾರರಿಗೆ ಅವಕಾಶ ಎಂಬುವುದು ಕುತೂಹಲ ಕೆರಳಿಸಿದೆ. ಕಳೆದ ಕೆಲವು ಸರಣಿ ನೋಡುವಾಗ ಭಾರತದ ಬೌಲಿಂಗ್ ವಿಭಾದ ಸಾಕಷ್ಟು ದುರ್ಬಲವಾಗಿದೆ. ಹೀಗಾಗಿ ಯಾರ್ಕರ್ ಸ್ಪೆಷಲಿಸ್ಟ್​ ಜಸ್​ಪ್ರೀತ್ ಬುಮ್ರಾ ತಂಡ ಸೇರಿಕೊಳ್ಳುತ್ತಾರ ಎಂಬುವುದು ನೋಡಬೇಕಿದೆ.

IND vs WI: ಭಾರತ- ವೆಸ್ಟ್​ ಇಂಡೀಸ್ ಫೈನಲ್ ಫೈಟ್​ನ ಕೆಲ ರೋಚಕ ಕ್ಷಣಗಳು ಇಲ್ಲಿದೆ!

ವೆಸ್ಟ್​ ಇಂಡೀಸ್ ವಿರುದ್ಧದ ಎರಡನೇ ಏಕದಿನ ಸರಣಿ ವೇಳೆ ವಿಶಾಖಪಟ್ಟಣದಲ್ಲಿ ಜಸ್​ಪ್ರೀತ್ ಬುಮ್ರಾ ಟೀಂ ಇಂಡಿಯಾ ಜೊತೆ ಅಭ್ಯಾಸ ನಡೆಸಿದ್ದರು. ಆದರೆ, ಬುಮ್ರಾಗೆ ಫಿಟ್ನೆಸ್ ಪ್ರಮಾಣ ಪತ್ರ ನೀಡಲು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ನಿರಾಕರಿಸಿತ್ತು. ಅಲ್ಲದೆ ಲಂಕಾ- ಆಸೀಸ್ ಸರಣಿ ಬಳಿಕ ಭಾರತ, ನ್ಯೂಜಿಲೆಂಡ್ ಪ್ರವಾಸ ಬೆಳೆಸಲಿದೆ. ಹೀಗಾಗಿ ಬುಮ್ರಾ ಫಿಟ್ ಆಗಿದ್ದರೆ, ಇಂದು ಆಯ್ಕೆ ಸಮಿತಿ ಇವರ ಹೆಸರು ಘೋಷಿಸುವ ಸಾಧ್ಯತೆಯಿದೆ.ಭಾರತ ತಂಡ 2020 ಜನವರಿ ಮೊದಲ ವಾರದಲ್ಲಿ ಶ್ರೀಲಂಕಾ ವಿರುದ್ಧ ಮೂರು ಪಂದ್ಯಗಳ ಟಿ-20 ಸರಣಿ ಆಡಲಿದೆ. ಜ. 5 ರಂದು ಗುವಾಹಟಿಯಲ್ಲಿ ಮೊದಲ ಟಿ-20, ಜ. 7 ರಂದು ಇಂದೋರ್​ನಲ್ಲಿ ಎರಡನೇ ಪಂದ್ಯ ಹಾಗೂ ಜ. 10 ರಂದು ಪುಣೆಯಲ್ಲಿ ಅಂತಿಮ ಟಿ-20 ಪಂದ್ಯ ನಡೆಯಲಿದೆ.

IND vs WI: ರೋಹಿತ್ ವಿಶ್ವ ದಾಖಲೆ, ಶಮಿ ವಿಶೇಷ ದಾಖಲೆ; 300+ ಚೇಸಿಂಗ್​ನಲ್ಲಿ ಭಾರತವೇ ನಂ. 1

ಇನ್ನು ಆಸ್ಟ್ರೇಲಿಯಾ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿ ಆಡಲಿದೆ. ಮೊದಲ ಏಕದಿನ ಜ. 14 ರಂದು ಮುಂಬೈನಲ್ಲಿ, ಎರಡನೇ ಏಕದಿನ ಜ. 17 ರಂದು ರಾಜ್ಕೋಟ್​ನಲ್ಲಿ ಹಾಗೂ ಅಂತಿಮ ಪಂದ್ಯ ಜ. 19 ರಂದು ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ.

First published:December 23, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ