HOME » NEWS » Sports » CRICKET EVERYONE WAS ASKING QUESTIONS WHEN I PICKED T NATARAJAN IN KXIP SQUAD VIRENDER SEHWAG ZP

Virender Sehwag: ಅಂದು ನಟರಾಜನ್‌ ಅವರನ್ನು ಆಯ್ಕೆ ಮಾಡಿದಾಗ ನನ್ನನ್ನು ಟೀಕಿಸಲಾಗಿತ್ತು..!

ಪಂಜಾಬ್ ತಂಡಕ್ಕೆ ಡೆತ್ ಓವರ್ ಸ್ಪೆಷಲಿಸ್ಟ್ ಅಗ್ಯವಿತ್ತು. ಆದರೆ ದುರಾದೃಷ್ಟವಶಾತ್ ಆ ವರ್ಷ ಗಾಯಗೊಂಡಿದ್ದರಿಂದ ಹೆಚ್ಚಿನ ಪಂದ್ಯಗಳನ್ನು ಆಡಲಾಗಲಿಲ್ಲ. ಆದರೆ ಆತ ಆಡಿದ ಪಂದ್ಯಗಳನ್ನು ನಾವು ಗೆದ್ದಿದ್ದವು.

news18-kannada
Updated:December 3, 2020, 7:02 PM IST
Virender Sehwag: ಅಂದು ನಟರಾಜನ್‌ ಅವರನ್ನು ಆಯ್ಕೆ ಮಾಡಿದಾಗ ನನ್ನನ್ನು ಟೀಕಿಸಲಾಗಿತ್ತು..!
T natarajan - sehwag
  • Share this:
ಟಿ ನಟರಾಜನ್, ಐಪಿಎಲ್​ನಲ್ಲಿ ಭರ್ಜರಿ ಯಾರ್ಕರ್ ಎಸೆತಗಳ ಮೂಲಕ ಗಮನ ಸೆಳೆದ ಎಡಗೈ ವೇಗಿ ಇದೀಗ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದಾರೆ. ಅಲ್ಲದೆ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಅಂತರಾಷ್ಟ್ರೀಯ ಕ್ರಿಕೆಟ್​ಗೂ ಪಾದರ್ಪಣೆ ಮಾಡಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಸನ್​ರೈಸರ್ಸ್ ಹೈದರಾಬಾದ್ ಪರ ಮಿಂಚಿನ ದಾಳಿ ಸಂಘಟಿಸಿದ್ದ ನಟರಾಜನ್ ಒಂದೇ ಸೀಸನ್​ನಲ್ಲಿ ಖ್ಯಾತಿ ಪಡೆದಿದ್ದರು. ಆದರೆ ತಮಿಳುನಾಡಿನ ಈ ವೇಗಿ 2017 ರಲ್ಲೇ ಐಪಿಎಲ್​ಗೆ ಪಾದರ್ಪಣೆ ಮಾಡಿದ್ದರು ಎಂಬುದು ಅನೇಕರಿಗೆ ಗೊತ್ತಿಲ್ಲ.

ಹೌದು, 2017ರ ಐಪಿಎಲ್ ಹರಾಜಿನಲ್ಲಿ ನಟರಾಜನ್ ಅವರನ್ನು 3 ಕೋಟಿ ರೂ. ನೀಡಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಖರೀದಿಸಿತ್ತು. ಆದರೆ ಯುವ ವೇಗಿಯನ್ನು ಇಷ್ಟು ಮೊತ್ತಕ್ಕೆ ಖರೀದಿಸಿದಾಗ ಪಂಜಾಬ್ ತಂಡ ಸಲಹೆಗಾರರಾಗಿದ್ದ ವೀರೇಂದ್ರ ಸೆಹ್ವಾಗ್ ಅವರನ್ನು ಟೀಕಿಸಲಾಗಿತ್ತು. ಇದಕ್ಕೆ ಕಾರಣ ಆ ವರ್ಷದ ಟೂರ್ನಿಯಲ್ಲಿ ನಟರಾಜನ್ 6 ಪಂದ್ಯಗಳಲ್ಲಿ ಕೇವಲ 2 ವಿಕೆಟ್ ಪಡೆಯಲು ಮಾತ್ರ ಯಶಸ್ವಿಯಾಗಿದ್ದರು.

ಈ ಬಗ್ಗೆ ಮಾತನಾಡಿರುವ ಸೆಹ್ವಾಗ್, ಅಂದು ನಾನು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಕ್ಕೆ ನಟರಾಜನ್ ಅವರನ್ನು ಆಯ್ಕೆ ಮಾಡಿದ್ದು ನನಗೆ ಬಹಳ ಸಂತಸ ನೀಡಿತ್ತು. ಏಕೆಂದರೆ ನಟರಾಜನ್ ತಮಿಳುನಾಡು ಪ್ರೀಮಿಯರ್ ಲೀಗ್​ನಲ್ಲಿ ಗಮನ ಸೆಳೆದಿದ್ದರು. ಆದರೆ ಆತ ಆಗ ದೇಶಿ ಕ್ರಿಕೆಟ್​ ಆಡಿರಲಿಲ್ಲ. ಆದರೆ ಆತನಲ್ಲಿ ನನಗೆ ಪ್ರತಿಭೆ ಕಾಣಿಸಿತ್ತು ಹೀಗಾಗಿ ಮಣೆ ಹಾಕಿದೆ ಎಂದು ಸೆಹ್ವಾಗ್ ತಿಳಿಸಿದ್ದಾರೆ.

ನಟರಾಜನ್ ಆಯ್ಕೆ ಹಿಂದೆ ತಮಿಳುನಾಡಿನ ಮೂವರು ಆಟಗಾರರು ಕೂಡ ಭಾಗಿಯಾಗಿದ್ದರು. ಅವರು ಯುವ ಬೌಲರ್ ಡೆತ್ ಓವರ್​ನಲ್ಲಿ ಉತ್ತಮವಾಗಿ ಬೌಲಿಂಗ್ ಮಾಡುತ್ತಾನೆ. ಯಾರ್ಕರ್ ಎಸೆಯುವುದರಲ್ಲಿ ನಿಸ್ಸೀಮರು ಎಂದು ತಿಳಿಸಿದ್ದರು. ನಾವು ಆತನ ಹಲವು ವಿಡಿಯೋಗಳನ್ನು ವೀಕ್ಷಿಸಿ ಅಂತಿಮವಾಗಿ ಹರಾಜಿನಲ್ಲಿ ತೆಗೆದುಕೊಳ್ಳಲು ನಿರ್ಧರಿಸಿದ್ದೆವು ಸೆಹ್ವಾಗ್ ತಿಳಿಸಿದರು.

ಅಂದು ಪಂಜಾಬ್ ತಂಡಕ್ಕೆ ಡೆತ್ ಓವರ್ ಸ್ಪೆಷಲಿಸ್ಟ್ ಅಗ್ಯವಿತ್ತು. ಆದರೆ ದುರಾದೃಷ್ಟವಶಾತ್ ಆ ವರ್ಷ ಗಾಯಗೊಂಡಿದ್ದರಿಂದ ಹೆಚ್ಚಿನ ಪಂದ್ಯಗಳನ್ನು ಆಡಲಾಗಲಿಲ್ಲ. ಆದರೆ ಆತ ಆಡಿದ ಪಂದ್ಯಗಳನ್ನು ನಾವು ಗೆದ್ದಿದ್ದವು. ಆತ ಹೊರಗಿದ್ದ ಪಂದ್ಯದಲ್ಲಿ ಸೋಲನುಭವಿಸಿತ್ತು. ಇದಾಗ್ಯೂ ಪಂಜಾಬ್ ತಂಡಕ್ಕೆ ನಟರಾಜನ್‌ ಅವರನ್ನು ಭಾರಿ ಮೊತ್ತ ನೀಡಿ ಖರೀದಿಸಿದ್ದೇಕೆ ಎಂದು ಹಲವರು ಪ್ರಶ್ನೆ ಮಾಡಿದ್ದರು. ಇದೀಗ ಟಿ ನಟರಾಜನ್ ಟೀಮ್ ಇಂಡಿಯಾದಲ್ಲಿದ್ದಾರೆ. ಆತ ತನ್ನ ಜವಾಬ್ದಾರಿಯನ್ನು ಉತ್ತಮವಾಗಿ ನಿರ್ವಹಿಸಲಿದ್ದಾನೆ. ಭಾರತ ತಂಡದಲ್ಲಿ ಸ್ಥಾನವನ್ನು ಭದ್ರಪಡಿಸಿಕೊಳ್ಳಲಿದ್ದಾರೆ ಎಂದು ಭಾವಿಸುತ್ತೇನೆ, ಆಲ್ ದಿ ಬೆಸ್ಟ್ ಎಂದು ವೀರೇಂದ್ರ ಸೆಹ್ವಾಗ್ ಹಾರೈಸಿದ್ದಾರೆ.

ಇದನ್ನೂ ಓದಿ: 55 ಎಸೆತ, 5 ಬೌಂಡರಿ, 20 ಸಿಕ್ಸ್, ಸ್ಪೋಟಕ ಶತಕ: ಈ ಬ್ಯಾಟ್ಸ್​ಮನ್ ಮೇಲೆ ಕಣ್ಣಿಟ್ಟಿದೆ RCB..!
Published by: zahir
First published: December 3, 2020, 7:02 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories