• ಹೋಂ
 • »
 • ನ್ಯೂಸ್
 • »
 • ಕ್ರೀಡೆ
 • »
 • Euro 2020: ಆತನನ್ನು ಸಾವಿನ ದವಡೆಯಿಂದ ಪಾರು ಮಾಡಿದ್ವಿ: ಎರಿಕ್ಸನ್ ಟ್ರೀಟ್ಮೆಂಟ್ ಬಗ್ಗೆ ಡಾಕ್ಟರ್ ಹೇಳಿಕೆ

Euro 2020: ಆತನನ್ನು ಸಾವಿನ ದವಡೆಯಿಂದ ಪಾರು ಮಾಡಿದ್ವಿ: ಎರಿಕ್ಸನ್ ಟ್ರೀಟ್ಮೆಂಟ್ ಬಗ್ಗೆ ಡಾಕ್ಟರ್ ಹೇಳಿಕೆ

Euro 2020- Christian Eriksen

Euro 2020- Christian Eriksen

Christian Eriksen: ಸದ್ಯ ಕೋಪನ್​ ಹ್ಯಾಗನ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಎರಿಕ್ಸನ್​​ ಸ್ಥಿರ ಸ್ಥಿರತಿಯಲ್ಲಿದ್ದು, ಭಾನುವಾರ ವಿಡಿಯೋ ಲಿಂಕ್​ ಮೂಲಕ ತಂಡದ ಸದಸ್ಯರೊಂದಿಗೆ ಮಾತನಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 • Share this:

  ಯುರೋ 2020 ಪಂದ್ಯಾಟ ಪ್ರಾರಂಭವಾಗಿದೆ.  ಆರಂಭದಲ್ಲೇ  ಸಂಭವಿಸಿದ ಘಟನೆಯೊಂದು ಫುಟ್ಬಾಲ್ ಪ್ರಿಯರನ್ನು ಬೆಚ್ಚಿಬೀಳಿಸುವಂತೆ ಮಾಡಿದೆ. ಡೆನ್ಮಾಕ್​ ಮತ್ತು ಫಿನ್​ಲ್ಯಾಂಡ್​ ನಡುವಿನ ಪಂದ್ಯದ ವೇಳೆ ಡೆನ್ಮಾಕ್​ ಆ್ಯಟಾಕಿಂಗ್​ ಮಿಡ್​ಫೀಲ್ಡರ್​, ನಾಯಕ ಕ್ರಿಶ್ಚಿಯನ್​​ ಎರಿಕ್ಸನ್​  ಹೃದಯಘಾತದಿಂದ ಕುಸಿದು ಬಿದ್ದಿದ್ದರು. 5 ನಿಮಿಷಗಳ ಕಾಲ ಎರಿಕ್ಸನ್​ ಹೃದಯ ನಿಂತು ಹೋಗಿತ್ತು. ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದ ಕಾರಣ ಬದುಕುಳಿದಿದ್ದಾರೆ ಎಂದು ಡೆನ್ಮಾರ್ಕ್​​ ಫುಟ್​ಬಾಲ್​ ತಂಡದ ಡಾಕ್ಟರ್​ ಮೊರ್ಟನ್​​ ಬೊಯಿಸನ್​ ಅವರು ಹೇಳಿದ್ದಾರೆ.


  ನಂತರ ಮಾತು ಮುಂದುವರಿಸಿದ ಮೊರ್ಟನ್​​ ಬೊಯಿಸನ್, ​ ಎರಿಕ್ಸನ್​ ಹೃದಯಾಘಾತದಿಂದ 5 ನಿಮಿಷ ಉಸಿರು ನಿಲ್ಲಿಸಿದ್ದರು. ನಾವು ಎಷ್ಟು ಹತ್ತಿರದಲ್ಲಿದ್ದೆವು? ನನಗೆ ಗೊತ್ತಿಲ್ಲ. ಒಂದು ಕ್ಷಣಾರ್ಧದಲ್ಲಿ ಅವರನ್ನು ಸಾವಿನ ದವಡೆಯಿಂದ ಪಾರು ಮಾಡಿದ್ದೇವೆ ಎಂದು ಹೇಳಿದರು.


  ಸದ್ಯ ಕೋಪನ್​ ಹ್ಯಾಗನ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಎರಿಕ್ಸನ್​​ ಸ್ಥಿರ ಸ್ಥಿರತಿಯಲ್ಲಿದ್ದು, ಭಾನುವಾರ ವಿಡಿಯೋ ಲಿಂಕ್​ ಮೂಲಕ ತಂಡದ ಸದಸ್ಯರೊಂದಿಗೆ ಮಾತನಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


  ಎರಿಕ್ಸನ್​​ ಆರೋಗ್ಯ ಪರಿಸ್ಥಿತಿ ಗಮನಿಸಿದರೆ ಮತ್ತೆ ಅವರು ಫುಟ್​ಬಾಲ್​ ಆಡುವುದಿಲ್ಲ ಎಂದು ಇಂಗ್ಲೆಂಡ್​ ರಾಷ್ಟ್ರೀಯ ಆರೋಗ್ಯ ಸೇವೆ ಹೃದ್ರೋಗ ತಜ್ನ ಡಾ ಸ್ಕಾಟ್​ ಮರ್ರೆ ಹೇಳಿದ್ದಾರೆ. ಮತ್ತೊಂದೆಡೆ ಸದ್ಯದ ಪರಿಸ್ಥಿತಿ ನೋಡಿದಾಗ ಇಟಲಿಯ  ಇಂಟರ್​ ಮಿಲನ್​ ತಂಡದ ಪರ ಆಡುವ ಎರಿಕ್ಸನ್​ ಇದೀಗ ಇಟಲಿ ತಂಡದಿಂದ ಬ್ಯಾನ್​ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.


  ಇನ್ನು ಇಟಲಿ ತಂಡ ಹೃದಯ ಸಂಬಂಧಿಸಿದ  ತೊಂದರೆಯಿದ್ದರೆ ತಂಡದಿಂದ ಬ್ಯಾನ್ ಮಾಡುತ್ತಾರೆ. ಇದು ಇಟಲಿ ತಂಡದ ನಿಯಮವಾಗಿದೆ. ಹಾಗಾಗಿ ಎರಿಕ್ಸನ್​ ಕೂಡ ಇಟಲಿ ತಂಡದಿಂದ ಹೊರಬೀಳುವ ಸಾಧ್ಯತೆಯಿದೆ.

  Published by:Harshith AS
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು