ಭಾರತೀಯ ಕ್ರಿಕೆಟ್ ಪ್ರಿಯರು ಐಪಿಎಲ್ ಪಂದ್ಯವನ್ನು ನೋಡಲು ಎಷ್ಟು ಹವಣಿಸುತ್ತಾರೋ, ಅವರಷ್ಟೇ ಫುಟ್ಬಾಲ್ ಪ್ರಿಯರು ಕೂಡ ಯುರೊ 2020 ಚಾಂಪಿಯನ್ಶಿಪ್ ಪಂದ್ಯ ವೀಕ್ಷಿಸಲು ತುದಿಗಾಲಿನಲ್ಲಿ ಕಾಯುತ್ತಾರೆ. ಇದೇ ಜೂನ್ 12 ರಿಂದ ಯುರೊ 2020 ಚಾಂಪಿಯನ್ಶಿಪ್ ಪ್ರಾರಂಭವಾಗಲಿದೆ. ಈ ಬಾರಿ ಜರ್ಮನ್ ಮತ್ತು ಸ್ಪೇನ್ ಸ್ಪರ್ಧೆಯಲ್ಲಿ ಅಂತ್ಯಂತ ಯಶಸ್ವಿ ತಂಡಗಳಾಗಿದ್ದರೆ, ಹಾಲಿ ಚಾಂಪಿಯನ್ ಪೋರ್ಚುಗಲ್ ತಂಡದ ಜೊತೆಗೆ ಫ್ರಾನ್ಸ್ ಕೂಡ ಅನೇಕರ ನೆಚ್ಚಿನ ತಂಡವಾಗಿದೆ. ಬೆಲ್ಜಿಯಂ ಮತ್ತು ಇಂಗ್ಲೆಂಡ್ ತಂಡ ಯುರೋಪಿಯನ್ ಚಾಂಪಿಯನ್ಶಿಪ್ ಪಡೆಯಲು ಪ್ರಬಲ ಸ್ಪರ್ಧಿಗಳಾಗಿ ಗುರಿತಿಸಿಕೊಂಡಿವೆ. ಅಂತೆಯೇ ಇಟಲಿ ಮತ್ತ ನೆದರ್ಲ್ಯಾಂಡ್ ತಂಡವನ್ನು ‘ಡಾರ್ಕ್ ಹಾರ್ಸ್’ ಎಂದು ಕರೆಯುತ್ತಿದ್ದಾರೆ.
ಯುರೋ 2020 ಅಂತರಾಷ್ಟ್ರಿಯ ತಂಡಗಳನ್ನು ಒಳಗೊಂಡ ಅತಿದೊಡ್ಡ ಫುಟ್ಬಾಲ್ ಸ್ಪರ್ಧೆಯಾಗಿದೆ. ಭಾರತದಲ್ಲಿ ಐಪಿಎಲ್ ಜ್ವರ ಆರಂಭವಾದಗ ಪಂದ್ಯವನ್ನು ನೋಡಲು ಹಾತೊರೆಯುತ್ತಿದ್ದರು. ಇದೀಗ ಕೊರೊನಾದಿಂದಾಗಿ ಅವರೆಲ್ಲರ ದೃಷ್ಟಿ ಯುರೊ 2020 ಬಿದ್ದಿದೆ. ಭಾರತೀಯರು ಯುರೊ 2020ಯಲ್ಲಿ ಯಾವ ತಂಡವನ್ನು ಬೆಂಬಲಿಸುತ್ತಾರೆ ಎಂದುದೇ ಕುತೂಹಲ ಸಂಗತಿಯಾಗಿದೆ.
ಅಂದಹಾಗೆಯೇ, ಐಪಿಎಲ್ ತಂಡಕ್ಕೆ ಯುರೊ 2020 ತಂಡವನ್ನು ಹೋಲಿಸಿದರೆ ಹೇಗಿರಬಹುದು!. ಯಾವ ತಂಡ ಬಿಲಿಷ್ಟವಾಗಿದೆ?. ಆರ್ಸಿಬಿ ತಂಡಕ್ಕೆ ಸಮಾನ ಪ್ರದರ್ಶನ ನೀಡುವ ಫುಟ್ಬಾಲ್ ತಂಡ ಯಾವುದು? ಧೋನಿ ನಾಯಕತ್ವದ ಸಿಎಸ್ಕೆಯಂತೆ ಯುರೊ 2020ರಲ್ಲಿ ಹೆಚ್ಚು ಸದ್ದು ಮಾಡುವ ಫುಟ್ಬಾಲ್ ತಂಡ ಯಾವುದು? ಈ ಬಗ್ಗೆ ಮಾಹಿತಿ ಇಲ್ಲಿದೆ
Portugal = Chennai Super Kings: ಕ್ರಿಸ್ಟಿಯಾನೊ ರೊನಾಲ್ಟೊ ಬಹುಸಂಖ್ಯಾ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಪೋರ್ಚುಗಲ್ ತಂಡದಲ್ಲಿ ಕ್ರಿಸ್ಟಿಯಾನೊ ಗುರುತಿಸಿಕೊಂಡಿದ್ದಾರೆ. ಐಪಿಎಲ್ಗೆ ಹೋಲಿಸಿದರೆ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಹೋಲಿಕೆ ಮಾಡಬಹುದಾಗಿದೆ. ಪೋರ್ಚುಗಲ್ ಯುರೊ 2016ರಲ್ಲಿ ಬೆರಗುಗೊಳಿಸುವ ಪ್ರದರ್ಶನ ನೀಡಿತ್ತು. ಅತ್ಯುತ್ತಮ ಪಟ್ಟಿಯಲ್ಲಿ ಪೋರ್ಚುಗಲ್ ತಂಡ ಕೂಡ ಒಂದು ಎಂಬುದನ್ನು ಗಮನಿಸಬೇಕಾಗಿದೆ.
England = Delhi Capitals: ಇಂಗ್ಲೆಂಡ್ ತಂಡವನ್ನು ಐಪಿಎಲ್ನ ಮತ್ತೊಂದು ಬಲಿಷ್ಟ ತಂಡವಾದ ಡೆಲ್ಲಿ ಕ್ಯಾಪಿಟಲ್ಗೆ ಹೋಲಿಸಲಾಗಿದೆ. ಇದರಲ್ಲಿ ಸಿಂಹದಂತಿರುವ ಮೂರು ಸೂಪರ್ ಸ್ಟಾರ್ಗಳನ್ನು ಈ ತಂಡ ಹೊಂದಿದೆ.
France = Mumbai Indians: ಫ್ರಾನ್ಸ್ ಸೂಪರ್ಸ್ಟಾರ್ಗಳನ್ನು ಹೊಂದಿದೆ. ಏಕೆಂದರೆ ಫ್ರಾನ್ಸ್ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಇತ್ತ ಐಪಿಎಲ್ ಗಮನಿಸುವುದಾದರೆ ಮುಂಬೈ ಇಂಡಿಯನ್ಸ್ ಕೂಡ 2021ರಲ್ಲಿ ಹ್ಯಾಟ್ರಿಕ್ ಜಯ ಸಾಧಿಸಿದೆ.
ಫ್ರಾನ್ಸ್ ತಂಡದಲ್ಲಿ ಕೈಲಿಯನ್ ಎಂಬಪ್ಪೆ, ಆ್ಯಂಟೋನಿ ಗ್ರಿಜ್ಮನ್, ಎನ್ಗೊಲೊ, ಕಾಂಟೆ, ಪಾಲ್ಪೊಗ್ಬಾ ಆಟಗಾರರಿದ್ದಾರೆ. ಹಾಗಾಗಿ ಯುರೊ 2020ರಲ್ಲಿ ಬಲಿಷ್ಟವಾದ ತಂಡದಲ್ಲಿದೆ.
Belgium = Royal Challengers Bangalore: ಆರ್ಸಿಬಿ ಬಹುಸಂಖ್ಯಾ ಅಭಿಮಾನಿ ಬಳಗವನ್ನು ಹೊಂದಿದೆ. ಕೊಹ್ಲಿ ಈ ತಂಡವನ್ನು ಮುನ್ನಡೆಸುತ್ತಿದ್ದಾರೆ. ಹಾಗಾಗಿ ಯುರೊ 2020ಗೆ ಹೋಲಿಸಿದರೆ ಫುಟ್ಬಾಲ್ನಲ್ಲಿ ಬೆಲ್ಜಿಯಂ ತಂಡಕ್ಕೆ ಆರ್ಸಿಬಿ ತಂಡ ಸಮಾನಾಗಿದೆ.
ವಿರಾಟ್ ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್ ಆರ್ಸಿಬಿ ತಂಡದ ಪ್ರಮುಖ ಆಟಗಾರರಾಗಿದ್ದರೆ, ಕೆವಿನ್ ಡಿ ಬ್ರಯ್ನೆ ಮತ್ತು ಲುಕಾಕು ಬೆಲ್ಜಿಯಂ ತಂಡದದಲ್ಲಿ ಪ್ರಮುಖರಾಗಿ ಗುರುತಿಸಿಕೊಂಡಿದ್ದಾರೆ. ಕಳೆದ ವರ್ಷ ಈ ತಂಡ ಪ್ಲೇ ಆಫ್ಗೆ ಬಂದು ತಲುಪಿತ್ತು. ಈ ಬಾರಿ ಹೇಗೆ ಸ್ಪರ್ಧಿಸಲಿದೆ ಕಾದು ನೋಡಬೇಕಿದೆ.
Germany = Kolkata Knight Riders: ಯಶಸ್ವಿ ತಂಡದಲ್ಲಿ ಪೈಕಿ ಜರ್ಮನಿ ಕೂಡ ಒಂದಾಗಿದೆ. ಆದರೆ ಕೆಲವು ವರ್ಷಗಳಿಂದ ಅಷ್ಟೇನು ಸ್ಪರ್ಧೆ ತೋರಿಸುತ್ತಿಲ್ಲ. ಜರ್ಮನ್ ತಂಡ ಮೂರು ಬಾರಿ ಯುರೋಪಿಯನ್ ಚಾಂಪಿಯನ್ಶಿಪ್ಗಳನ್ನು ಗೆದ್ದಿದೆ.
Spain = Sunrisers Hyderabad: ಯುರೊ 2012 ಗೆದ್ದ ನಂತರ ಸ್ಪೇನ್ ಅಷ್ಟೇನು ಯಶಸ್ವಿಯಾಟ ಆಡಿಲ್ಲ. ಆದರು ಮೂರು ಪ್ರಶಸ್ತಿ ಗೆದ್ದಿದೆ. ಐಪಿಎಲ್ಗೆ ಹೋಲಿಸುವುದಾದರೆ ಸ್ಪೇನ್ ತಂಡ ಸಮಾನವಾಗಿದೆ ಎಂದು ಹೇಳವಾಗಬಹುದಾಗಿದೆ.
ಯುರೊ 2016 ಮತ್ತು ಫಿಪಾ ವಲ್ಡ್ಕಪ್ 2018ರಲ್ಲಿ ಸ್ಪೇನ್ ತಂಡ 16ನೇ ಸುತ್ತಿನಲ್ಲಿ ಸೋಲೊಪ್ಪಿಕೊಂಡಿತು. ಅಷ್ಟು ಮಾತ್ರವಲ್ಲದೆ ಕ್ಸವಿ, ಇನಿಯೆಸ್ಟಾ, ಸೆಸ್ಕ್, ಫ್ಯಾಬ್ರೆಗಾಸ್, ಡೇವಿಡ್ ವಿಲ್ಲಾ ಮತ್ತು ಕೆಲವು ಆಟಗಾರರು ಈ ತಂಡದಿಂದ ನಿರ್ಗಮಿಸಿರುವು ತಂಡದ ಮೇಲೆ ಪರಿಣಾಮ ಬೀರಿತು
Netherlands = PBKS: ಎರಡು ತಂಡಗಳು ಪ್ರದರ್ಶನ ಸಮನಾಗಿದೆ. ಪಂಬಾಜಗ್ನಲ್ಲಿ ಕನ್ನಡಿಗ ಕೆ.ಎಲ್ ರಾಹುಲ್, ಮಯಾಂಕ್ ಅಗರ್ವಾಲ್, ಗೇಲ್, ವೇಗಿ ಶಮಿಯನ್ನು ತಂಡ ಹೊಂದಿದೆ.ನೆದರ್ಲ್ಯಾಂಡ್ ಮಥಿಜ್ಸ್ ಡಿ ಲಿಗ್ಟ್, ಲ್ಯೂಕ್ ಡಿ ಜೋಂಗ್, ಜಾರ್ಜಿನಿಯೊ ವಿಜ್ನಾಲ್ಡಮ್ ಆಟಗಾರರನ್ನು ತಂಡ ಹೊಂದಿದೆ.
Italy = Rajasthan Royals: 1968ಯಲ್ಲಿ ಇಟಲಿ ಯುರೊ ಪ್ರಶಸ್ತಿಯನ್ನು ತನ್ನದಾಗಿಸಿತ್ತು. ಅಂತೆಯೇ 2012ರಲ್ಲಿ ಯರೋಪಿಯನ್ ಚಾಂಪಿಯನ್ಶಿಪ್ನಲ್ಲಿ ಫೈನಲ್ಗೆ ತಲುಪಿತ್ತು. ಐಪಿಎಲ್ಗೆ ಹೊಲಿಸಿದರೆ ರಾಜಸ್ಥಾನ ತಂಡದ ಪ್ರದರ್ಶನಕ್ಕೆ ಸಮಾನವಾಗಿದೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ