ಭಾರತದ ಸೋಲಿನಿಂದ ಪಾಕ್​ ಮನೆಗೆ ಹೋಗಿಲ್ಲ; ಚಮತ್ಕಾರ ನಡೆದರೆ ಈಗಲೂ ಇದೆ ಸೆಮಿ ಫೈನಲ್​ಗೇರುವ ಅವಕಾಶ

IND vs ENG: ಭಾರತದ ಸೋಲಿನಿಂದ ಪಾಕಿಸ್ತಾನ ಮನೆಗೆ ತೆರಳಿತು ಎಂದು ಕುಣಿದು ಕುಪ್ಪಳಿಸುತ್ತಿದ್ದಾರೆ. ಆದರೆ, ಪಾಕಿಸ್ತಾನದ ಸೆಮಿಫೈನಲ್​ ಏರುವ ಕನಸು ಇನ್ನೂ ಜೀವಂತವಾಗಿದೆ. ಹೌದು, ಕೆಲ ಪವಾಡಗಳು ನಡೆದರೆ ಪಾಕಿಸ್ತಾನ ಸೆಮಿಫೈನಲ್​ಗೆ​ ಏರಬಹುದಾಗಿದೆ.

ಪಾಕಿಸ್ತಾನ ಕ್ರಿಕೆಟ್ ತಂಡ

ಪಾಕಿಸ್ತಾನ ಕ್ರಿಕೆಟ್ ತಂಡ

  • News18
  • Last Updated :
  • Share this:
ಭಾರತ-ಇಂಗ್ಲೆಂಡ್​ ನಡುವಣ ಪಂದ್ಯದಲ್ಲಿ ಭಾರತ 31ರನ್​ಗಳ ಸೋಲು ಕಂಡಿದೆ. ಈ ಮೂಲಕ ವಿಶ್ವಕಪ್​ ಟೂರ್ನಿಯಲ್ಲಿ ಮೊದಲ ಹಿನ್ನಡೆ ಅನುಭವಿಸಿದೆ. ಸೆಮಿ ಫೈನಲ್​ ಏರುವ ಕನಸು ಕಾಣುತ್ತಿದ್ದ ಪಾಕಿಸ್ತಾನವನ್ನು ಭಾರತದ ಸೋಲು ಕಂಗೆಡಿಸಿದೆ.

ಭಾರತದ ಸೋಲಿನಿಂದ ಪಾಕಿಸ್ತಾನ ಮನೆಗೆ ತೆರಳಿತು ಎಂದು ಅನೇಕರು ಕುಣಿದು ಕುಪ್ಪಳಿಸುತ್ತಿದ್ದಾರೆ. ಆದರೆ, ಪಾಕಿಸ್ತಾನದ ಸೆಮಿಫೈನಲ್​ ಏರುವ ಕನಸು ಇನ್ನೂ ಜೀವಂತವಾಗಿದೆ. ಹೌದು, ಕೆಲ ಪವಾಡಗಳು ನಡೆದರೆ ಪಾಕಿಸ್ತಾನ ಸೆಮಿ ಫೈನಲ್​ಗೆ​ ಏರಬಹುದಾಗಿದೆ.

ಇಂಗ್ಲೆಂಡ್​ ಆಡಿದ 8 ಪಂದ್ಯಗಳಲ್ಲಿ 3 ಪಂದ್ಯವನ್ನು ಸೋತು ನಾಲ್ಕು ಪಂದ್ಯ ಗೆದ್ದಿದೆ. ಈ ಮೂಲಕ ರ್ಯಾಂಕಿಗ್​ ಪಟ್ಟಿಯಲ್ಲಿ 10 ಅಂಕ ಪಡೆದು ನಾಲ್ಕನೇ ಸ್ಥಾನದಲ್ಲಿದೆ. ಮುಂಬರುವ ನ್ಯೂಜಿಲೆಂಡ್​ ಪಂದ್ಯದಲ್ಲಿ ಗೆಲ್ಲಲೇ ಬೇಕಾದ ಅನಿವಾರ್ಯತೆ ಇಂಗ್ಲೆಂಡ್​ಗಿದೆ. ಒಂದೊಮ್ಮೆ ಈ ಪಂದ್ಯ ಗೆದ್ದರೆ 12 ಅಂಕ ಗಳಿಸುವ ಮೂಲಕ ಆಂಗ್ಲರು ಸೆಮಿಫೈನಲ್​ಗೆ ಲಗ್ಗೆ ಇಡಲಿದ್ದಾರೆ.

ಇದನ್ನೂ ಓದಿ:  ರೋಹಿತ್ ಶತಕದ ಹೋರಾಟ ವ್ಯರ್ಥ; ಟೂರ್ನಿಯಲ್ಲಿ ಮೊದಲ ಸೋಲುಂಡ ಭಾರತ

ಇನ್ನು ಪಾಕಿಸ್ತಾನ ಆಡಿದ 8 ಪಂದ್ಯಗಳ ಪೈಕಿ 4 ಪಂದ್ಯಗಳನ್ನು ಗೆದ್ದಿದ್ದು, 3 ಪಂದ್ಯಗಳನ್ನು ಸೋತಿದೆ. ಒಂದು ಮಳೆಯಿಂದಾಗಿ ರದ್ದಾಗಿದೆ. ಹಾಗಾಗಿ ಅಂಕ ಪಟ್ಟಿಯಲ್ಲಿ 9 ಪಾಯಿಂಟ್​ಗಳನ್ನು ಪಡೆದು 5ನೇ ಸ್ಥಾನದಲ್ಲಿದೆ.

ಹಾಗಾಗಿ ಜು.3ರಂದು ನಡೆಯುವ ನ್ಯೂಜಿಲೆಂಡ್​ ವಿರುದ್ಧ ಪಂದ್ಯದಲ್ಲಿ ಇಂಗ್ಲೆಂಡ್​ ಸೋತು, ಜು.5ರಂದು ನಡೆಯುವ ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ ಗೆಲ್ಲಬೇಕು. ಹಾಗಾದಲ್ಲಿ ಅಂಕಪಟ್ಟಿಯಲ್ಲಿ ಇಂಗ್ಲೆಂಡ್​ಗೆ 10, ಪಾಕ್​ಗೆ 11 ಅಂಕ ಸಿಗಲಿದೆ. ಈ ಮೂಲಕ ಪಾಕ್​ ಸೆಮಿಫೈನಲ್​ಗೆ ಏರಲಿದೆ. ಇಷ್ಟೆಲ್ಲ ಚಮಾತ್ಕಾರಗಳು ನಡೆದರೆ ಪಾಕ್​ ಸೆಮೀಸ್​ಗೆ ಲಗ್ಗೆ ಇಡಲಿದೆ.

First published: