• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • ಕ್ರಿಕೆಟ್​ನಲ್ಲಿ ಹಿಂದೆಂದೂ ನೋಡಿರದ ಕಳಪೆ ಫೀಲ್ಡಿಂಗ್; ಸುಲಭ ಕ್ಯಾಚ್ ಕೈಚೆಲ್ಲಿದ ಜೋ ಡೆನ್ಲಿ

ಕ್ರಿಕೆಟ್​ನಲ್ಲಿ ಹಿಂದೆಂದೂ ನೋಡಿರದ ಕಳಪೆ ಫೀಲ್ಡಿಂಗ್; ಸುಲಭ ಕ್ಯಾಚ್ ಕೈಚೆಲ್ಲಿದ ಜೋ ಡೆನ್ಲಿ

ಸುಲಭ ಕ್ಯಾಚ್ ಕೈಚೆಲ್ಲಿದ ಜೋ ಡೆನ್ಲಿ

ಸುಲಭ ಕ್ಯಾಚ್ ಕೈಚೆಲ್ಲಿದ ಜೋ ಡೆನ್ಲಿ

ಡೆನ್ಲಿ ಅವರು ವಿಲಿಯಮ್ಸನ್ ಕ್ಯಾಚ್ ಬಿಟ್ಟಿದ್ದಕ್ಕೆ ದೊಡ್ಡ ಬೆಲೆಯನ್ನೇ ತೆರಬೇಕಾಯಿತು. ಈ ಸಂದರ್ಭ 62 ರನ್ ಗಳಿಸಿದ್ದ ವಿಲಿಯಮ್ಸನ್ ಬಳಿಕ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿ ಅಮೋಘ ಶತಕ ಸಿಡಿಸಿದರು.

  • Share this:

ಬೆಂಗಳೂರು (ನ. 04): ನ್ಯೂಜಿಲೆಂಡ್ ಪ್ರವಾಸ ಬೆಳೆಸಿದ್ದ ಇಂಗ್ಲೆಂಡ್ ತಂಡ ಟೆಸ್ಟ್​ ಸರಣಿಯಲ್ಲಿ ಸೋಲುವ ಮೂಲಕ ತವರಿಗೆ ಹಿಂತಿರುಗಿದೆ. ಮೊದಲ ಟೆಸ್ಟ್​ನಲ್ಲಿ ಕಿವೀಸ್ ಇನ್ನಿಂಗ್ಸ್​ ಜೊತೆಗೆ 65 ರನ್ ಗಳ ಜಯ ಸಾಧಿಸಿತ್ತು. ನಿನ್ನೆಗೆ ಅಂತ್ಯಕಂಡ 2ನೇ ಟೆಸ್ಟ್​ ಡ್ರಾಗೊಂಡ ಪರಿಣಾಮ ಕೇನ್ ಪಡೆ 1-0 ಯಿಂದ ಸರಣಿ ಗೆದ್ದು ಬೀಗಿತು.

ಈ ನಡುವೆ ಕೊನೆಯ ದಿನದಾಟದಲ್ಲಿ ಗಮನ ಸೆಳೆದಿದ್ದು ಇಂಗ್ಲೆಂಡ್ ತಂಡದ ಜೋ ಡೆನ್ಲಿ. ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್ ಬೌಲಿಂಗ್​ನಲ್ಲಿ ಶಾರ್ಟ್ ಮಿಡ್ ವಿಕೆಟ್ ಕ್ಷೇತ್ರದಲ್ಲಿ ಫೀಲ್ಡಿಂಗ್ ನಡೆಸುತ್ತಿದ್ದ ಜೋ ಡೆನ್ಲಿ ಸುಲಭ ಕ್ಯಾಚ್ ಕೈಚೆಲ್ಲಿದರು.

ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ನೀಡಿದ್ದ ಸುಲಭ ಕ್ಯಾಚ್​ ಅನ್ನು ಕೈಚೆಲ್ಲಿದ್ದ ಡೆನ್ಲಿಯ ವಿಡಿಯೋ ಸಾಮಾಜಿಕ ತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಈಸಿ ಕ್ಯಾಚ್​ ಅನ್ನ ಡೆನ್ಲಿ ಹಿಡಿಯುತ್ತಾರೆ ಎಂಬ ನಂಬಿಕೆಯಿಂದ ಬಾಲ್ ಫೀಲ್ಡರ್ ಬಳಿ ತೆರಳುತ್ತಿದೆ ಎಂಬುವಹೊತ್ತಿಗೆ ಆರ್ಚೆರ್​ ಸೆಲೆಬ್ರೇಷನ್​ನಲ್ಲಿ ತೊಡಗಿಕೊಂಡಿದ್ದರು.

ನೂತನ ಟೆಸ್ಟ್​ ರ‍್ಯಾಂಕಿಂಗ್‌ ಪಟ್ಟಿ ಪ್ರಕಟ: ಸ್ಮಿತ್ ಹಿಂದಿಕ್ಕಿ ಮತ್ತೆ ಅಗ್ರಸ್ಥಾನಕ್ಕೇರಿದ ಕಿಂಗ್ ಕೊಹ್ಲಿ!

 



ಡೆನ್ಲಿ ಅವರು ವಿಲಿಯಮ್ಸನ್ ಕ್ಯಾಚ್ ಬಿಟ್ಟಿದ್ದಕ್ಕೆ ದೊಡ್ಡ ಬೆಲೆಯನ್ನೇ ತೆರಬೇಕಾಯಿತು. ಈ ಸಂದರ್ಭ 62 ರನ್ ಗಳಿಸಿದ್ದ ವಿಲಿಯಮ್ಸನ್ ಬಳಿಕ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿ ಅಮೋಘ ಶತಕ ಸಿಡಿಸಿದರು.

ಎರಡನೇ ಟೆಸ್ಟ್​ನ ಮೊದಲ ಇನ್ನಿಂಗ್ಸ್​ನಲ್ಲಿ ನ್ಯೂಜಿಲೆಂಡ್ ತಂಡ ಟಾಮ್ ಲಥನ್ ಅವರ 105, ಡ್ಯಾರಿ ಮಿಚೆಲ್ ಅವರ 73 ಜೊತೆಗೆ ರಾಸ್ ಟೇಲರ್ ಹಾಗೂ ಬಿಕೆ ವಾಲ್ಟಿಂಗ್​ರ ಅರ್ಧಶತಕದ ನೆರವಿನಿಂದ 375 ರನ್ ಕಲೆಹಾಕಿತು.

Manish Pandey Marriage: ಕನ್ನಡಿಗನ ರಿಸೆಪ್ಷನ್​ನಲ್ಲಿ ಯುವಿ ಭರ್ಜರಿ ಸ್ಟೆಪ್; ವೈರಲ್ ಆಗುತ್ತಿದೆ ವಿಡಿಯೋ

 


ಇದಕ್ಕೆ ಪ್ರತ್ಯುತ್ತರವಾಗಿ ಇಂಗ್ಲೆಂಡ್ 476 ರನ್ ಬಾರಿಸಿತು. ನಾಯಕ ಜೋ ರೂಟ್(226) ಅಮೋಘ ದ್ವಿಶತಕ ಸಿಡಿಸಿ ಮಿಂಚಿದರೆ, ರಾರಿ ಬರ್ನ್ಸ್​​ 101 ಹಾಗೂ ಒಲ್ಲಿ ಪೋಪ್ 75 ರನ್ ಗಳಿಸಿದರು.

ಇತ್ತ 101 ರನ್​ಗಳ ಹಿನ್ನಡೆಯೊಂದಿಗೆ 2ನೇ ಇನ್ನಿಂಗ್ಸ್​ ಆರಂಭಿಸಿದ ನ್ಯೂಜಿಲೆಂಡ್ ಕೊನೆಯ ದಿನದಾಟದ ಅಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 241 ರನ್ ಕಲೆಹಾಕಿತು. ಈ ಮೂಲಕ ಎರಡನೇ ಟೆಸ್ಟ್​ ಡ್ರಾನಲ್ಲಿ ಅಂತ್ಯಕಂಡಿತು. ಕಿವೀಸ್ ಪರ 2ನೇ ಇನ್ನಿಂಗ್ಸ್​ನಲ್ಲಿ ರಾಸ್ ಟೇಲರ್ ಅಜೇಯ 105 ಹಾಗೂ ವಿಲಿಯಮ್ಸನ್ ಅಜೇಯ 104 ರನ್ ಗಳಿಸಿದರು.

ಕೆಪಿಎಲ್ ಮ್ಯಾಚ್ ಫಿಕ್ಸಿಂಗ್: ಕೋಚ್ ಸುಧೀಂದ್ರ ಶಿಂಧೆ ಬಂಧನ; ಅಪ್ರೂವರ್ ಆಗುವಂತೆ ತಪ್ಪಿತಸ್ಥ ಆಟಗಾರರಿಗೆ ಪೊಲೀಸ್ ಆಯುಕ್ತ ಕಿವಿಮಾತು

ಎರಡು ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದ ನ್ಯೂಜಿಲೆಂಡ್ ಸರಣಿ ವಶಪಡಿಸಿಕೊಂಡಿತು. ದ್ವಿಶತಕ ಸಿಡಿಸಿದ ಜೋ ರೂಟ್ ಪಂದ್ಯಶ್ರೇಷ್ಠ ಬಾಜಿಕೊಂಡರೆ, ಟೂರ್ನಿಯಿದ್ದಕ್ಕೂ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿ ಒಟ್ಟು 13 ವಿಕೆಟ್ ಕಿತ್ತ ನೈಲ್ ವಾಗ್ನರ್ ಸರಣಿಶ್ರೇಷ್ಠ ತಮ್ಮದಾಗಿಸಿದರು.

First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು