ಸ್ತಬ್ಧವಾಗಿದ್ದ ಕ್ರಿಕೆಟ್​ಗೆ ಮತ್ತೆ ಚಾಲನೆ; ದ್ರಾವಿಡ್ ವಿರೋಧಿಸಿದ್ದ ಯೋಜನೆಯಲ್ಲಿ ಅಂತಾರಾಷ್ಟ್ರೀಯ ಪಂದ್ಯ

ಇಂಗ್ಲೆಂಡ್ ಹಾಗೂ ವೆಸ್ಟ್ ಇಂಡೀಸ್ ನಡುವೆ ಜುಲೈ 8ರಂದು ಮೂರು ಪಂದ್ಯಗಳ‌ ಟೆಸ್ಟ್ ಸರಣಿ ಆರಂಭವಾಗುವುದರೊಂದಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಮರಳುತ್ತಿದೆ.

news18-kannada
Updated:July 3, 2020, 3:44 PM IST
ಸ್ತಬ್ಧವಾಗಿದ್ದ ಕ್ರಿಕೆಟ್​ಗೆ ಮತ್ತೆ ಚಾಲನೆ; ದ್ರಾವಿಡ್ ವಿರೋಧಿಸಿದ್ದ ಯೋಜನೆಯಲ್ಲಿ ಅಂತಾರಾಷ್ಟ್ರೀಯ ಪಂದ್ಯ
ಇಂಗ್ಲೆಂಡ್ ತಂಡದ ಆಟಗಾರರು.
  • Share this:
ವಿಶ್ವವ್ಯಾಪಿಯಾಗಿರುವ ಕೊರೋನಾದ ಅಬ್ಬರ ಇನ್ನೂ ಹಿಡಿತಕ್ಕೆ ಸಿಕ್ಕಿಲ್ಲ. ಇದರ ನಡುವೆಯೇ ಕ್ರಿಕೆಟ್ ಪ್ರೇಮಿಗಳು ಖುಷಿಯಲ್ಲಿದ್ದಾರೆ. ಮೂರ್ನಾಲ್ಕು ತಿಂಗಳಿನಿಂದ ಸಂಪೂರ್ಣ ಸ್ತಬ್ಧವಾಗಿದ್ದ ಅಂತಾರಾಷ್ಟ್ರೀಯ ಕ್ರಿಕೆಟ್ ಚಾಲನೆಗೆ ಇನ್ನು ಐದೇ ದಿನ ಬಾಕಿ. ಹಳೆಯ ಪಂದ್ಯಗಳನ್ನೇ ಮತ್ತೆ ಮತ್ತೆ ನೋಡುತ್ತಾ ದಿನದೂಡಿದ್ದ ಕ್ರಿಕೆಟ್ ಆಸಕ್ತರಿಗೆ ಇದು ಕೊಂಚ ಖುಷಿ ನೀಡಿದೆ. ಆದರೂ ಈ ಕ್ರಿಕೆಟ್ ಮೊದಲಿನಂತೆ ವಿಜೃಂಭಿಸುವುದಿಲ್ಲ ಎನ್ನುವುದು ಅಷ್ಟೇ ಸತ್ಯ. ಕಾರಣ ಮತ್ತದೇ ಕೊರೋನಾ!

ಪ್ರೇಕ್ಷಕರಿಲ್ಲದೆ ಖಾಲಿ ಗ್ಯಾಲರಿಯಲ್ಲಿ ಪಂದ್ಯ ಜರುಗಲಿದೆ. ಪ್ರೇಕ್ಷಕರ ಕರತಾಡನ, ಹರ್ಷೋದ್ಘಾರ ಇಲ್ಲದೆ ಸ್ಟೇಡಿಯಂ ಭಣಗುಡಲಿದೆ. ಈ ಹೊಸತನಕ್ಕೆ ಒಗ್ಗಿಕೊಳ್ಳಬೇಕಾದ ಅನಿವಾರ್ಯತೆ ಕ್ರಿಕೆಟಿಗರದ್ದು. ಕೊರೋನಾ ಭಯದಲ್ಲೇ ಅನತಿ ದೂರದಿಂದಲೇ ವಿಕೆಟ್ ಪಡೆದ ಹಾಗು ಗೆಲುವಿನ ಸಂಭ್ರಮ ಕ್ರಿಕೆಟಿಗರು ಸಂಭ್ರಮಿಸಬೇಕಿದೆ.

2011 ವಿಶ್ವಕಪ್ ಫೈನಲ್ ಫಿಕ್ಸಿಂಗ್ ಪ್ರಕರಣ: 10 ಗಂಟೆಗಳ ಕಾಲ ಕುಮಾರ್ ಸಂಗಕ್ಕರ ವಿಚಾರಣೆ

ಇಂಗ್ಲೆಂಡ್ ಹಾಗೂ ವೆಸ್ಟ್ ಇಂಡೀಸ್ ನಡುವೆ ಜುಲೈ 8ರಂದು ಮೂರು ಪಂದ್ಯಗಳ‌ ಟೆಸ್ಟ್ ಸರಣಿ ಆರಂಭವಾಗುವುದರೊಂದಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಮರಳುತ್ತಿದೆ. ಕೊರೋನಾ ಭಯ ಇನ್ನೂ ಮಾಸದ ಕಾರಣ ಒಂದಷ್ಟು ಮುಂಜಾಗ್ರತೆಯೊಂದಿಗೆ ಕ್ರಿಕೆಟಿಗರು ಮೈದಾನಕ್ಕಿಳಿಯಲಿದ್ದಾರೆ. ಸೌತಾಂಪ್ಟನ್​​ನ ಏಜಸ್ ಬೌಲ್ ಕ್ರೀಡಾಂಗಣ ಕೊರೋನೋತ್ತರದ ಐತಿಹಾಸಿಕ ಟೂರ್ನಿಗೆ ಆತಿಥ್ಯ ವಹಿಸಿದೆ. ಎರಡು ಹಾಗೂ ಮೂರನೇ ಟೆಸ್ಟ್ ಮ್ಯಾಂಚೆಸ್ಟರ್​​ನಲ್ಲಿ ಆಯೋಜನೆಗೊಂಡಿದೆ. ಆಟಗಾರರ ಆರೋಗ್ಯದ ದೃಷ್ಟಿಯಿಂದ ಜೈವಿಕ ಸುರಕ್ಷಿತ ವಾತಾವರಣ(Bio-Secure Environment) ನಿರ್ಮಾಣ‌ ಮಾಡಲಾಗಿದೆ.

ಏನಿದು ಜೈವಿಕ ಸುರಕ್ಷಿತ ವಾತಾವರಣ?

ಪಂದ್ಯ ಯಾವುದೇ ಆತಂಕವಿಲ್ಲದೆ ಮುನ್ನಡೆಯುವುದು ಮುಖ್ಯ ಗುರಿಯಾಗಿರುವುದರಿಂದ ವೈರಸ್ ಹರಡಂತೆ ಮೈದಾನವನ್ನು ಸುರಕ್ಷಿತಗೊಳಿಸಲಾಗಿದೆ. ಆಟಗಾರರ ಓಡಾಟ ಹಾಗೂ ಹೊರಗಿನ ಸಂಪರ್ಕವನ್ನು ಸಂಪೂರ್ಣವಾಗಿ ನಿಷೇಧ ಮಾಡಿ ಪಂದ್ಯ ಆಯೋಜಿಸಲಾಗುತ್ತಿದೆ. ಆಟಗಾರರು ತಮ್ಮ ತಂಡದ ಜೊತೆಗಲ್ಲದೆ ಹೊರಗಿನವರನ್ನು ಭೇಟಿ ಮಾಡುವಂತಿಲ್ಲ. ಪಂದ್ಯ ಮುಕ್ತಾಯ ಬಳಿಕ ನೇರವಾಗಿ ಹೋಟೆಲ್​​ಗೆ ತೆರಳುವುದು ಹಾಗೂ ಆಗಾಗ್ಗೆ ಕೈಯನ್ನು ಸ್ಯಾನಿಟೈಸ್ ಮಾಡುವ ಮೂಲಕ ವೈರಸ್ ದಾಳಿ/ಹರಡುವಿಕೆಯ ಸಾಧ್ಯತೆಯನ್ನು ಇಳಿಕೆ ಮಾಡುವುದೇ ಈ ಜೈವಿಕ ಸುರಕ್ಷಿತ ವಾತಾವರಣ.

ಸಲಹೆ ನೀಡಲು ಹೋಗಿದ್ದ ಕೋಚ್​ಗೆ ಚಾಕು ತೋರಿಸಿದ್ದ ಈ ಸ್ಟಾರ್ ಕ್ರಿಕೆಟಿಗ; ಶಾಕಿಂಗ್ ವಿಚಾರ ಬಹಿರಂಗ

ಇಸಿಬಿ ಪ್ಲಾನ್ ವಿರೋಧಿಸಿದ್ದ ದ್ರಾವಿಡ್!

ಇಂಗ್ಲೆಂಡ್ ಆ್ಯಂಡ್ ವೇಲ್ಸ್ ಕ್ರಿಕೆಟ್ ಬೋರ್ಡ್(ಇಸಿಬಿ) ಜೈವಿಕ ಸುರಕ್ಷಿತ ವಾತಾವರಣವನ್ನು ಪರಿಚಯಿಸುವ ಬಗ್ಗೆ ಮಾಹಿತಿ ಹಂಚಿಕೊಂಡ ವೇಳೆ ಖ್ಯಾತ ಕ್ರಿಕೆಟಿಗ ರಾಹುಲ್ ದ್ರಾವಿಡ್ ಆಕ್ಷೇಪ ವ್ಯಕ್ತಪಡಿಸಿದ್ದರು. ಇಸಿಬಿ ಯೋಜನೆ 'ಅವಾಸ್ತವಿಕ' ಎಂದು ಹೇಳಿದ್ದರು. ಒಂದು ವೇಳೆ ಇಸಿಬಿ ಯಶಸ್ವಿಯಾಗಿ ಟೂರ್ನಿ‌ ನಡೆಸಿದರೂ ಕ್ಯಾಲೆಂಡರ್ ವರ್ಷದಲ್ಲಿ ಎಲ್ಲ ಟೂರ್ನಿಗಳನ್ನು ಆಯೋಜಿಸುವುದು ಅಸಾಧ್ಯ ಎಂದು ದ್ರಾವಿಡ್ ಅಭಿಪ್ರಾಯಪಟ್ಟಿದ್ದರು.

- ಕೌಶಿಕ್ ಕೆ. ಎಸ್
First published: July 3, 2020, 3:43 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading