ಮ್ಯಾಂಚೆಸ್ಟರ್: ಇಂಗ್ಲೆಂಡ್ ಹಾಗೂ ಪ್ರವಾಸಿ ವೆಸ್ಟ್ ಇಂಡೀಸ್ ನಡುವೆ ಇಲ್ಲಿನ ಓಲ್ಡ್ ಟ್ರಾಫರ್ಡ್ ಕ್ರೀಡಾಂಗಣದಲ್ಲಿ ಎರಡನೇ ಟೆಸ್ಟ್ ಕ್ರಿಕೆಟ್ ಪಂದ್ಯ ಆರಂಭವಾಗಿದ್ದು, ಆಂಗ್ಲರು ಮೊದಲ ದಿನದ ಗೌರವ ಸಂಪಾದಿಸಿದ್ದಾರೆ. ಮಳೆಯ ನಡುವೆಯೂ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ಮೊದಲ ದಿನದಾಟದ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 207 ರನ್ ಕಲೆಹಾಕಿದೆ. ಈ ಮೂಲಕ ರೂಟ್ ಪಡೆ ಉತ್ತಮ ಮೊತ್ತದತ್ತ ದಾಪುಗಾಲಿಡುತ್ತಿದೆ.
ಮೊದಲಿಗೆ ಟಾಸ್ ಗೆದ್ದ ವೆಸ್ಟ್ ಇಂಡೀಸ್ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಪಂದ್ಯ ಇನ್ನೇನು ಆರಂಭವಾಗಬೇಕು ಎಂಬುವಹೊತ್ತಿಗೆ ಮಳೆಸುರಿದ ಪರಿಣಾಮ ಸುಮಾರು ಒಂದೂವರೆ ಗಂಟೆ ತಡವಾಗಿ ಪ್ರಾರಂಭಿಸಲಾಯಿತು. ತಂಡದ ಮೊತ್ತ 29 ಆಗುವಷ್ಟರಲ್ಲೇ ಇಂಗ್ಲೆಂಡ್ ತನ್ನ ಮೊದಲ ವಿಕೆಟ್ ಕಳೆದುಕೊಂಡಿತು. ರಾಸ್ಟನ್ ಚೇಸ್ ಬೌಲಿಂಗ್ನಲ್ಲಿ ರಾರಿ ಬರ್ನ್ಸ್ 15 ರನ್ ಗಳಿಸಿ ಎಲ್ಬಿ ಬಲೆಗೆ ಸಿಲುಕಿದರು.
T20 ಕ್ರಿಕೆಟ್ನಲ್ಲಿ ವಿಶ್ವ ದಾಖಲೆ ಬರೆದ ವಿಕೆಟ್ ಕೀಪರ್ಗಳು ಯಾರು ಗೊತ್ತೇ?
304 balls
126 runs
A proper graft from these two today 🤜🤛 pic.twitter.com/NLkUrh4bNb
— England Cricket (@englandcricket) July 16, 2020
ಕೊರೋನಾ ನಿಯಮ ಉಲ್ಲಂಘನೆ: ತಂಡದಿಂದ ಜೋಫ್ರಾ ಆರ್ಚರ್ ಔಟ್..!
ಈ ಸಂದರ್ಭ ಒಂದಾದ ಆಲ್ರೌಂಡರ್ ಬೆನ್ ಸ್ಟೋಕ್ಸ್ ಹಾಗೂ ಡೊಮಿನಿಕ್ ಎಚ್ಚರಿಕೆಯ ಆಟಕ್ಕೆ ಮುಂದಾದರು. ಸದ್ಯ ನಾಲ್ಕನೇ ವಿಕೆಟ್ಗೆ 126 ರನ್ ಸೇರಿಸಿ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ವಿಂಡೀಸ್ ಪರ ಸ್ಪಿನ್ನರ್ ರೋಸ್ಟನ್ ಚೇಸ್ 2 ಹಾಗೂ ಅಲ್ಜಾರಿ ಜೋಸೆಫ್ ಒಂದು ವಿಕೆಟ್ ಪಡೆದಿದ್ದಾರೆ. ಸ್ಟೋಕ್ಸ್ 59 ಹಾಗೂ ಡೊಮಿನಿಕ್ 86 ರನ್ ಗಳಿಸಿ ಕ್ರೀಸ್ನಲ್ಲಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ