ಬೆಂಗಳೂರು (ಜೂ. 14): ಸೌತಾಂಪ್ಟನ್ನಲ್ಲಿ ನಡೆದ ವಿಶ್ವಕಪ್ನ 19ನೇ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಆತಿಥೇಯ ಇಂಗ್ಲೆಂಡ್ ಭರ್ಜರಿ ಗೆಲುವು ಸಾಧಿಸಿದೆ. ಬ್ಯಾಟಿಂಗ್-ಬೌಲಿಂಗ್ನಲ್ಲಿ ಮಿಂಚಿದ ಆಂಗ್ಲರು 8 ವಿಕೆಟ್ಗಳ ಜಯ ಸಾಧಿಸಿದ್ದು, ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದೆ.
ವೆಸ್ಟ್ ಇಂಡೀಸ್ ನೀಡಿದ್ದ 213 ರನ್ಗಳ ಸುಲಭ ಗುರಿ ಬೆನ್ನಟ್ಟಿರು ಆಂಗ್ಲರಿಗೆ ಜೋ ರೂಟ್ ಆಕರ್ಷಕ ಶತಕ ಸಿಡಿಸಿ ಗೆಲುವಿನ ಹಾದಿಯನ್ನು ಮತ್ತಷ್ಟು ಸುಗಮಗೊಳಿಸಿದರು.
ಓಪನರ್ಗಳಾದ ಜಾನಿ ಬೈರ್ಸ್ಟೋ ಹಾಗೂ ಜೋ ರೂಟ್ ಉತ್ತಮ ಆರಂಭ ನೀಡಿದರು. ಲೀಲಜಾಲವಾಗಿ ಬ್ಯಾಟ್ ಬೀಸಿದ ಈ ಜೋಡಿ ಪವರ್ ಪ್ಲೇ ಓವರ್ ಅನ್ನು ಸರಿಯಾಗಿಯೇ ಉಪಯೋಗಿಸಿಕೊಂಡರು. ಅಂತೆಯೆ ಮೊದಲ ವಿಕೆಟ್ಗೆ ಈ ಜೋಡಿಯಿಂದ 95 ರನ್ಗಳ ಕಾಣಿಕೆ ಮೂಡಿಬಂತು. ಉತ್ತಮವಾಗಿಯೆ ಆಡುತ್ತಿದ್ದ ಬೈರ್ಸ್ಟೋ 46 ಎಸೆತಗಳಲ್ಲಿ 45 ರನ್ ಬಾರಿಸಿದ ಬ್ರಾಥ್ವೈಟ್ಗೆ ಕ್ಯಾಚ್ ನೀಡಿ ನಿರ್ಗಮಿಸಿದರು.
2ನೇ ವಿಕೆಟ್ಗೆ ರೂಟ್ ಜೊತೆಯಾದ ಕ್ರಿಸ್ ವೋಕ್ಸ್ ಕೂಡ ಅತ್ಯುತ್ತಮ ಇನ್ನಿಂಗ್ಸ್ ಕಟ್ಟಿದರು. ಗೆಲುವನ್ನು ಮತ್ತಷ್ಟು ಸನಿಹ ಮಾಡಿದ ಈ ಜೋಡಿ 104 ರನ್ಗಳ ಜೊತೆಯಾಟ ಆಡಿದರು. ಕ್ರಿಸ್ ವೋಕ್ಸ್ ಗೆಲುವಿನ ಅಂಚಿನಲ್ಲಿ 40 ರನ್ಗೆ ನಿರ್ಗಮಿಸಿದರೆ, ರೂಟ್ ಆಕರ್ಷಕ ಶತಕ ಸಿಡಿಸಿ ಮಿಂಚಿದರು.
ಅಂತಿಮವಾಗಿ ಇಂಗ್ಲೆಂಡ್ 33.1 ಓವರ್ಗಳಲ್ಲೇ 2 ವಿಕೆಟ್ ನಷ್ಟಕ್ಕೆ 213 ರನ್ ಕಲೆಹಾಕಿ 8 ವಿಕೆಟ್ಗಳ ಗೆಲುವು ಸಾಧಿಸಿತು. 94 ಎಸೆತಗಳಲ್ಲಿ 11 ಬೌಂಡರಿ ಜೊತೆ 100 ರನ್ ಬಾರಿಸಿ ಜೋ ರೂಟ್ ಅಜೇಯರಾಗಿ ಉಳಿದರು. ವಿಂಡೀಸ್ ಪರ ಗ್ಯಾಬ್ರಿಯಲ್ 2 ವಿಕೆಟ್ ಪಡೆದರು.
ಈ ಗೆಲುವಿನೊಂದಿಗೆ ಇಂಗ್ಲೆಂಡ್ 6 ಅಂದೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದರೆ, ವೆಸ್ಟ್ ಇಂಡೀಸ್ 2ನೇ ಸೋಲಿನೊಂದಿಗೆ 6ನೇ ಸ್ಥಾನದಲ್ಲಿದೆ. ಶತಕ ಬಾರಿಸಿ ತಂಡಕ್ಕೆ ನೆರವಾದ ಜೋ ರೂಟ್ ಪಂದ್ಯಶ್ರೇಷ್ಠ ಪ್ರಶಸ್ತಿ ಬಾಜಿಕೊಂಡರು.
England win by 8️⃣ wickets!
A clinical performance with bat and ball helps them overcome West Indies in Southampton. 💯
SCORECARD ▶️ https://t.co/HmtembPBxn#WeAreEngland pic.twitter.com/oqdKoDOGHB
— Cricket World Cup (@cricketworldcup) June 14, 2019
🕺 👏 😀
The England fans celebrate a mightily impressive performance from their team! pic.twitter.com/rTIdatWHnE
— Cricket World Cup (@cricketworldcup) June 14, 2019
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ