England vs West Indies: ಸೌತಾಂಪ್ಟನ್​ನಲ್ಲಿ ಬಲಿಷ್ಠರ ಕಾಳಗ; ಆಂಗ್ಲರಿಗೆ ಸೋಲುಣಿಸಲು ವಿಂಡೀಸ್ ತಯಾರಿ

ಕ್ರಿಸ್​​ಗೇಲ್​, ಶಾಯ್ ಹೋಪ್​, ಹೆಟ್​ಮೇರ್​​​, ಆ್ಯಂಡ್ರ್ಯೂ ರಸೆಲ್​ರಂತಹ ಘಟಾನುಘಟಿ ಬ್ಯಾಟ್ಸ್​ಮನ್​​ಗಳೇ ಇದ್ದರು ನಿತ್ತು ಆಡುವಲ್ಲಿ ವಿಫಲರಾಗುತ್ತಿದ್ದಾರೆ.

Vinay Bhat | news18
Updated:June 14, 2019, 7:29 AM IST
England vs West Indies: ಸೌತಾಂಪ್ಟನ್​ನಲ್ಲಿ ಬಲಿಷ್ಠರ ಕಾಳಗ; ಆಂಗ್ಲರಿಗೆ ಸೋಲುಣಿಸಲು ವಿಂಡೀಸ್ ತಯಾರಿ
ವೆಸ್ಟ್​ ಇಂಡೀಸ್ ಆಟಗಾರರು
Vinay Bhat | news18
Updated: June 14, 2019, 7:29 AM IST
ಬೆಂಗಳೂರು (ಜೂ. 14): ಇಂದು ಸೌತಾಂಪ್ಟನ್​ನಲ್ಲಿ ಬಲಿಷ್ಠರ ಕಾಳಗ. ಬ್ಯಾಟಿಂಗ್​ನಲ್ಲಿ ಬಲ ಹೊಂದಿರುವ ಇಂಗ್ಲೆಂಡ್ ತಂಡ ಆಲ್ರೌಂಡರ್​ಗಳೇ ಇರುವ ವೆಸ್ಟ್​ ಇಂಡೀಸ್ ವಿರುದ್ಧ ಸೆಣೆಸಾಡಲು ಸಿದ್ಧವಾಗಿದೆ.

ಇಂಗ್ಲೆಂಡ್ ತಂಡ ಉತ್ತಮ ಸ್ಥಿತಿಯಲ್ಲಿದ್ದು, ಆಡಿರುವ ಮೂರು ಪಂದ್ಯಗಳಲ್ಲಿ ಎರಡನ್ನು ಗೆದ್ದು 4ನೇ ಸ್ಥಾನದಲ್ಲಿದೆ. ಇತ್ತ ವೆಸ್ಟ್​ ಇಂಡೀಸ್ ಮೂರು ಪಂದ್ಯಗಳಲ್ಲಿ ಒಂದು ಗೆಲುವು, ಇಂದು ಸೋಲು ಹಾಗೂ ಒಂದು ಪಂದ್ಯ ರದ್ದಾಗಿರುವ ಕಾರಣ 6ನೇ ಸ್ಥಾನದಲ್ಲಿದೆ. ಹೀಗಾಗಿ ಕೆರಿಬಿಯನ್ನರಿಗೆ ಇದು ಪ್ರಮುಖ ಪಂದ್ಯವಾಗಿದ್ದು, ಆಂಗ್ಲರಿಗೂ ತನ್ನ ಹಾದಿಯನ್ನು ಸುಗಮಗೊಳಿಸಲು ಗೆಲ್ಲಬೇಕಿದೆ.

ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ಹೊಂದಿರುವ ಮಾರ್ಗನ್ ಟೀಂ ಕಳೆದ ಪಂದ್ಯದಲ್ಲಿ ಬಾಂಗ್ಲಾ ವಿರುದ್ಧ 106 ರನ್​ಗಳ ಭರ್ಜರಿ ಗೆಲುವು ಸಾಧಿಸಿತ್ತು. ಜೇಸನ್ ರಾಯ್ ಅತ್ಯುತ್ತಮ ಫಾರ್ಮ್​ನಲ್ಲಿದ್ದರೆ ಬೈರ್​ಸ್ಟೋ ಸಾತ್ ನೀಡಬೇಕಿದೆ.

World Cup Points Table 2019: ಯಾವ ತಂಡ ಯಾವ ಸ್ಥಾನದಲ್ಲಿದೆ?; ತಾಜಾ ಅಂಕಪಟ್ಟಿಯ ಸಂಪೂರ್ಣ ವಿವರ ಇಲ್ಲದೆ!

ಮಧ್ಯಮ ಕ್ರಮಾಂಕದಲ್ಲಿ ಅಬ್ಬರದ ಬ್ಯಾಟಿಂಗ್ ನಡೆಸಲು ಜೋ ರೂಟ್, ಜಾಸ್ ಬಟ್ಲರ್, ಬೆನ್ ಸ್ಟೋಕ್ಸ್​ ಇದ್ದರೆ, ಕ್ರಿಸ್ ವೋಕ್ಸ್​ ಹಾಗೂ ನಾಯಕ ಮಾರ್ಗನ್ ಸಾತ್ ನೀಡ ಬಲ್ಲರು. ಬೌಲಿಂಗ್​​ನಲ್ಲಿ ಡಾಸೆನ್, ಆದಿಲ್ ರಶೀದ್, ಜೋಫ್ರಾ ಆರ್ಚೆರ್ ಪರಿಣಾಮಕಾರಿ ಗುರುತಿಸಿಕೊಂಡಿದ್ದಾರೆ.

ಮತ್ತೊಂದೆಡೆ ಅಬ್ಬರಿದಲು ತಯಾರಾಗಿರುವ ವೆಸ್ಟ್ ಇಂಡೀಸ್ ಗೆಲುವು-ಸೋಲಿನ ಮಿಶ್ರ ಅನುಭವ ಹೊಂದಿದೆ. ಕ್ರಿಸ್​​ಗೇಲ್​, ಶಾಯ್ ಹೋಪ್​, ಹೆಟ್​ಮೇರ್​​​, ಆ್ಯಂಡ್ರ್ಯೂ ರಸೆಲ್​ರಂತಹ ಘಟಾನುಘಟಿ ಬ್ಯಾಟ್ಸ್​ಮನ್​​ಗಳೇ ಇದ್ದರು ನಿತ್ತು ಆಡುವಲ್ಲಿ ವಿಫಲರಾಗುತ್ತಿದ್ದಾರೆ. ಈ ತಪ್ಪನ್ನ ಸರಿಪಡಿಸಿದರೆ ಕೆರಿಬಿಯನ್ನರನ್ನ ಹೊಡೆದುರುಳಿಸುವುದು ಕಷ್ಟ.

ಇನ್ನು ವೆಸ್ಟ್ ಇಂಡೀಸ್​ ಪರ ಒಶಾನೆ ಥಾಮಸ್​, ಶೆಲ್ಟನ್ ಕಾಟ್ರೆಲ್​ ನಂತಹ ಸ್ಪೀಡ್​​​ ಬೌಲರ್​ಗಳಿದ್ದು, ರಸೇಲ್​, ಬ್ರಾಥ್​ವೈಟ್​, ಜೇಸನ್​ ಹೋಲ್ಡರ್​​ನಂತಹ ಸೂಪರ್​ ಆಲ್​ರೌಂಡರ್​ಗಳಿದ್ದಾರೆ.

ಸ್ಥಳ: ಸೌತಾಂಪ್ಟನ್​

ಸಮಯ: 3PM

ಸಂಭಾವ್ಯ ತಂಡಗಳು: 

ಇಂಗ್ಲೆಂಡ್ ತಂಡ: ಜೇಸನ್ ರಾಯ್, ಜಾನಿ ಬೈರ್​​​ಸ್ಟೋ, ಜೋ ರೂಟ್, ಇಯಾನ್ ಮಾರ್ಗನ್ (ನಾಯಕ), ಬೆನ್ ಸ್ಟೋಕ್ಸ್​, ಜಾಸ್ ಬಟ್ಲರ್, ಮೊಯೀನ್ ಅಲಿ, ಕ್ರಿಸ್ ವೋಕ್ಸ್​, ಲ್ಯಾಮ್ ಪ್ಲಂಕೆಟ್, ಜೋಫ್ರಾ ಆರ್ಚೆರ್, ಆದಿಕ್ ರಶೀದ್.

ವೆಸ್ಟ್​ ಇಂಡೀಸ್ ತಂಡ: ಜೇಸನ್ ಹೋಲ್ಡರ್ (ನಾಯಕ), ಶಾಯ್ ಹೋಪ್, ಕ್ರಿಸ್ ಗೇಲ್, ಡ್ಯಾರೆನ್ ಬ್ರಾವೋ, ನಿಕೋಲಸ್ ಪೂರನ್, ಶಿಮ್ರೋನ್ ಹೆಟ್ಮೇರ್, ಆ್ಯಂಡ್ರೋ ರಸೆಲ್, ಕಾರ್ಲೆಸ್ ಬ್ರಾಥ್​​ವೈಟ್, ಆ್ಯಶ್ಲೆ ನರ್ಸ್​​, ಶೆಲ್ಡನ್ ಕಟ್ರೆಲ್, ಒಶಾನೆ ಥೋಮಸ್.
First published:June 14, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...