ಮ್ಯಾಂಚೆಸ್ಟರ್: ಇಲ್ಲಿನ ಓಲ್ಡ್ ಟ್ರಾಫರ್ಡ್ ಕ್ರೀಡಾಂಗಣದಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಭರ್ಜರಿ ಗೆಲುವು ದಾಖಲಿಸಿ ಸರಣಿ ಜೀವಂತವಾಗಿರಿಸಿದೆ. ಬೆನ್ ಸ್ಟೋಕ್ಸ್ ನೀಡಿದ ಆಲ್ರೌಂಡರ್ ಪ್ರದರ್ಶನದಿಂದ ಆತೀಥೇಯ ತಂಡ 113 ರನ್‌ಗಳ ಅಮೋಘ ಜಯ ಸಾಧಿಸಿ 1-1ರ ಸಮಬಲ ಸಾಧಿಸುವಲ್ಲಿ ಯಶಸ್ವಿಯಾಗಿದೆ.
ಮೊದಲ ಇನ್ನಿಂಗ್ಸ್ ಆರಂಭಿಸಿದ್ದ ಇಂಗ್ಲೆಂಡ್ 469 ರನ್‌ಗಳಿಗೆ ಡಿಕ್ಲೇರ್ ಮಾಡಿಕೊಂಡಿತ್ತು. ಇತ್ತ ವೆಸ್ಟ್ ಇಂಡೀಸ್ ತಂಡ ತನ್ನ ಮೊದಲ ಇನ್ನಿಂಗ್ಸ್ನಲ್ಲಿ 287 ರನ್ ಗಳಿಗೆ ಆಲೌಟ್ ಆಗಿತ್ತು. ಪಂದ್ಯದ 5ನೇ ಹಾಗೂ ಅಂತಿಮ ದಿನವಾದ ಸೋಮವಾರ ಬೆನ್ ಸ್ಟೋಕ್ಸ್ 57 ಎಸೆತಗಳಲ್ಲಿ ಸಿಡಿಸಿದ ಅಜೇಯ 78 ರನ್‌ಗಳ ಬಲದಿಂದ ಎರಡನೇ ಇನಿಂಗ್ಸ್‌ನಲ್ಲಿ 3 ವಿಕೆಟ್‌ಗೆ 129 ರನ್‌ಗಳನ್ನು ಗಳಿಸಿದ್ದ ಇಂಗ್ಲೆಂಡ್ ಡಿಕ್ಲೇರ್ ಮಾಡಿಕೊಂಡಿತು.
T20 World Cup 2020: ಟಿ20 ವಿಶ್ವಕಪ್ ಮುಂದೂಡಿಕೆ: ಐಪಿಎಲ್ ಹಾದಿ ಸುಗಮ
England win by 113 runs! 🎉👏
The series is now tied 1-1 going into the final Test.#ENGvWI pic.twitter.com/JDtKoAHQDF
— ICC (@ICC) July 20, 2020
113 ರನ್‌ಗಳ ಭರ್ಜರಿ ಗೆಲುವಿನೊಂದಿಗೆ ಇಂಗ್ಲೆಂಡ್ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-1ರ ಸಮಬಲ ಸಾಧಿಸಿದೆ. ಅತ್ಯುತ್ತಮ ಪ್ರದರ್ಶನ ನೀಡಿದ ಬೆನ್ ಸ್ಟೋಕ್ಸ್ ಪಂದ್ಯಶ್ರೇಷ್ಠ ಪ್ರಶಸ್ತಿ ತಮ್ಮದಾಗಿಸಿದರು.
ತಾತ್ಕಾಲಿಕ ವೇಳಾಪಟ್ಟಿಗೆ ಆಕ್ಷೇಪ: IPL ಮುಂದೂಡಲು ಬೇಡಿಕೆ..!
ಸೌತಾಂಪ್ಟನ್ ಏಜೆಸ್ ಬೌಲ್ ಕ್ರೀಡಾಂಗಣದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ 4 ವಿಕೆಟ್‌ಗಳ ಜಯ ದಾಖಲಿಸಿ ವಿಸ್ಡನ್ ಟ್ರೋಫಿ ಸರಣಿಯಲ್ಲಿ 1-0 ಅಂತರದ ಮುನ್ನಡೆ ಸಾಧಿಸಿತ್ತು.
ಅಂತಿಮ ನಿರ್ಣಾಯಕ ಮೂರನೇ ಟೆಸ್ಟ್ ಪಂದ್ಯ ಜುಲೈ 24 ರಿಂದ ಇದೇ ಮ್ಯಾಂಚೆಸ್ಟರ್ನ ಓಲ್ಡ್ ಟ್ರಾಫರ್ಡ್ ಕ್ರೀಡಾಂಗಣದಲ್ಲಿ ನಡೆಯಲಿದೆ.
ಇಂಗ್ಲೆಂಡ್: ಮೊದಲ ಇನಿಂಗ್ಸ್ 469-9 (ಬೆನ್ ಸ್ಟೋಕ್ಸ್ 176, ಡಿ. ಸಿಬ್ಲೆ 120, ರೋಸ್ಟನ್ ಚೇಸ್ 172-5)
ವೆಸ್ಟ್ ಇಂಡೀಸ್: ಮೊದಲ ಇನ್ನಿಂಗ್ಸ್ 287-10 (ಕಾರ್ಲಸ್ ಬ್ರಾಥ್ವೈಡ್ 75, ಶಮರ್ ಬ್ರೋಕ್ಸ್ 68, ಕ್ರಿಸ್ ವೋಕ್ಸ್ 42-3)
ಇಂಗ್ಲೆಂಡ್ ಎರಡನೇ ಇನಿಂಗ್ಸ್ 129-3 ಡಿ. (ಬೆನ್ ಸ್ಟೋಕ್ಸ್ ಅಜೇಯ 78)
ವೆಸ್ಟ್ ಇಂಡೀಸ್ ದ್ವಿತೀಯ ಇನಿಂಗ್ಸ್ 198-10 (ಶಮರ್ ಬ್ರೋಕ್ಸ್ 62, ಸ್ಟುವರ್ಟ್ ಬ್ರಾಡ್ 42-3)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ