ಸೌತಾಂಪ್ಟನ್: ಇಲ್ಲಿನ ರೋಸ್ ಬೌಲ್ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ತಂಡಗಳ ಮಧ್ಯೆ ಟೆಸ್ಟ್ ಸರಣಿ ಆರಂಭವಾಗುವ ಮೂಲಕ ಕೊರೋನಾ ವೈರಸ್ನಿಂದ ಸುಮಾರು 4 ತಿಂಗಳು ಸ್ತಬ್ದವಾಗಿದ್ದ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಕ್ಕೆ ಚಾಲನೆ ದೊರೆತಿದೆ. ಆದರೆ, ಮೊದಲ ಟೆಸ್ಟ್ ಆರಂಭವಾಗುತ್ತಲೇ ಮಳೆರಾಯನ ಕಾಟ ಕೂಡ ಶುರುವಾಯಿತು.
ಮಳೆ ನೀರಿನಿಂದ
ಕ್ರಿಕೆಟ್ ಸ್ಟೇಡಿಯಂ ಸಂಪೂರ್ಣ ತೊಯ್ದು ಹೋಯಿತು. ಹೀಗಾಗಿ ಮಧ್ಯಾಹ್ನದವರೆಗೂ ಪಂದ್ಯ ಆರಂಭವಾಗಿರಲಿಲ್ಲ. ಭಾರೀ ಮಳೆಯಿಂದಾಗಿ ಮೊದಲ ಅವಧಿಯ ಆಟ ಸಂಪೂರ್ಣ ನಷ್ಟವಾಯಿತು. ಮಳೆ ಕಡಿಮೆಯಾದ ಬಳಿಕ ದ್ವಿತೀಯ ಅವಧಿಯಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್ ಬ್ಯಾಟಿಂಗ್ ಆಯ್ದುಕೊಂಡರು.
IPL ಎಲ್ಲಿ ನಡೆಯಲಿದೆ ಎಂಬ ಪ್ರಶ್ನೆಗೆ ಸುಳಿವು ನೀಡಿದ ಸೌರವ್ ಗಂಗೂಲಿ..!
ಪಂದ್ಯದ ದ್ವಿತೀಯ ಓವರಿನಲ್ಲೇ ಡೊಮಿನಿಕ್ ಸಿಬ್ಲಿ (0) ಅವರನ್ನು ಬೌಲ್ಡ್ ಮಾಡಿದ ಶಾನನ್ ಗ್ಯಾಬ್ರಿಯಲ್ ಕೆರಿಬಿಯನ್ ಪಾಳೆಯದಲ್ಲಿ ಸಂತಸ ಮೂಡಿಸಿದರು. ಆದರೆ ನಂತರವೂ ಪಂದ್ಯಕ್ಕೆ ಎರಡು ಸಲ ಮಳೆಯಿಂದ ಅಡಚಣೆಯಾಯಿತು. ಅಂತಿಮವಾಗಿ ಮೊದಲ ದಿನದಾಟದ ಅಂತ್ಯಕ್ಕೆ ಇಂಗ್ಲೆಂಡ್ ಒಂದು ವಿಕೆಟ್ ನಷ್ಟಕ್ಕೆ 35 ರನ್ ಕಲೆಹಾಕಿತು. ರಾರಿ ಬರ್ನ್ಸ್ 20 ಹಾಗೂ ಜೋ ಡೆನ್ಲಿ 14 ರನ್ ಗಳಿಸಿ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಮೊಣಕಾಲೂರಿ ಕ್ರಿಕೆಟಿಗರ ಆಕ್ರೋಶ
ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದ ವರ್ಣಬೇಧ ನೀತಿಯ ವಿರುದ್ಧದ ಹೋರಾಟಕ್ಕೆ ಕ್ರಿಕೆಟ್ ಅಂಗಳವೂ ಸಾಕ್ಷಿಯಾಯಿತು. ಪಂದ್ಯ ಆರಂಭಕ್ಕೂ ಮುನ್ನ ಉಭಯ ತಂಡಗಳ ಆಟಗಾರರು ತಮ್ಮ ಬಲ ಮೊಣಕಾಲನ್ನು 30 ಸೆಕೆಂಡ್ಗಳ ಕಾಲ ನೆಲಕ್ಕೆ ಊರುವ ಮೂಲಕ ಬ್ಲ್ಯಾಕ್ ಲೈವ್ಸ್ ಮ್ಯಾಟರ್ ಅಭಿಯಾನಕ್ಕೆ ಬೆಂಬಲವನ್ನು ವ್ಯಕ್ತಪಡಿಸಿದರು.
Sourav Ganguly: ಅಂದು ನಾನು ಆತನನ್ನು ಆಯ್ಕೆ ಮಾಡುವಂತೆ ಹೇಳಿದ್ದು ನಿಜ..!
ನೋ ಹ್ಯಾಂಡ್ ಶೇಕ್ ನಿಯಮ ಮರೆತ ಹೋಲ್ಡರ್
ಇನ್ನೂ ಟಾಸ್ ಪ್ರಕ್ರಿಯೆ ವೇಳೆ ಕೆರಿಬಿಯನ್ ತಂಡದ ಕ್ಯಾಪ್ಟನ್ ಜೇಸನ್ ಹೋಲ್ಡರ್ ನೋ ಹ್ಯಾಂಡ್ ಶೇಕ್ ನಿಯಮ ಮರೆತು ಇಂಗ್ಲೆಂಡ್ ಕ್ಯಾಪ್ಟನ್ಗೆ ಹ್ಯಾಂಡ್ ಶೇಕ್ ಮಾಡಲು ಮುಂದಾದ ಘಟನೆ ನಡೆಯಿತು. ಬೆನ್ ಸ್ಟೋಕ್ಸ್ ಟಾಸ್ ಮಾಡುತ್ತಿದ್ದಂತೆ ಹೋಲ್ಡರ್ ಅವರ ಬಳಿ ಹೋಗಿ ಹ್ಯಾಂಡ್ ಶೇಕ್ ಮಾಡಲು ಮುಂದಾದರು. ಬಳಿಕ ಉಭಯ ನಾಯಕರು ನಕ್ಕು ಸುಮ್ಮನಾದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ