ಸೌತಾಂಪ್ಟನ್: ಇಲ್ಲಿನ ರೋಸ್ ಬೌಲ್ ಕ್ರೀಡಾಂಗಣದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ವೆಸ್ಟ್ ಇಂಡೀಸ್ ತಂಡ ಭರ್ಜರಿ ಗೆಲುವು ಸಾಧಿಸಿದೆ. ಮಾರಕ ವೇಗಿ ಶನೊನ್ ಟೆರ್ರಿ ಗೇಬ್ರಿಯಲ್ (5-75) ಶಿಸ್ತುಬದ್ಧ ಬೌಲಿಂಗ್ ದಾಳಿ ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಬ್ಲಾಕ್‌ವುಡ್ ಭರ್ಜರಿ ಬ್ಯಾಟಿಂಗ್ ನೆರವಿನಿಂದ ವೆಸ್ಟ್‌ಇಂಡೀಸ್ ತಂಡ 4 ವಿಕೆಟ್‌ಗಳ ಅಂತರದಿಂದ ಗೆದ್ದುಕೊಂಡಿದೆ. ಈ ಮೂಲಕ 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಶುಭಾರಂಭ ಮಾಡಿತು.
ವಿಶ್ವಕಪ್ ಗೆದ್ದ ಬಳಿಕವೇ ನಾನು ಮದುವೆಯಾಗುತ್ತೇನೆ ಎಂದ ಕ್ರಿಕೆಟಿಗ!
ಮೊದಲ ಇನ್ನಿಂಗ್ಸ್ನಲ್ಲಿ ಜೇಸನ್ ಹೋಲ್ಡರ್ (46-2) ಬೌಲಿಂಗ್ ದಾಳಿಗೆ ಸಿಲುಕಿದ ಇಂಗ್ಲೆಂಡ್ 204 ರನ್‌ಗೆ ಆಲೌಟ್ ಆಗಿತ್ತು. ಬಳಿಕ ತನ್ನ ಮೊದಲ ಇನ್ನಿಂಗ್ಸ್ನಲ್ಲಿ ವೆಸ್ಟ್ ಇಂಡೀಸ್ ಕಾಮ್ರೆನ್ ಬ್ರಾಥ್ ವೈಟ್(65) ಹಾಗೂ ಡೌರಿಚ್(61) ಅವರ ಅರ್ಧಶತಕದ ನೆರವಿನಿಂದ 318 ರನ್ ಗಳಿಸಿತ್ತು.
114 ರನ್ಗಳ ಹಿನ್ನಡೆಯೊಂದಿಗೆ ತನ್ನ ಎರಡನೇ ಇನ್ನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ಉತ್ತಮ ಆರಂಭ ಪಡೆದುಕೊಂಡಿತಾದರು ಬಳಿಕ ದಿಢೀರ್ ಕುಸಿತ ಕಂಡಿತು. ಓಪನರ್ಗಳಾದ ರಾರಿ ಬರ್ನ್ಸ್ 42 ಹಾಗೂ ಡಿ ಸಿಬ್ಲಿ 50 ರನ್ ಗಳಿಸಿ ನಿರ್ಗಮಿಸಿದರೆ, ಜ್ಯಾಕ್ ಕ್ರೊವ್ಲೆ 76 ಹಾಗೂ ನಾಯಕ ಬೆನ್ ಸ್ಟೋಕ್ಸ್ 46 ರನ್ ಗಳಿಸಿದರು. ಬಳಿಕ ಬಂದ ಬ್ಯಾಟ್ಸ್ಮನ್ಗಳು ಗೇಬ್ರಿಯಲ್ ಬೌಲಿಂಗ್ ದಾಳಿಗೆ ತತ್ತರಿಸಿದ ಪರಿಣಾಮ ಇಂಗ್ಲೆಂಡ್ 313 ರನ್‌ಗೆ ಸರ್ವಪತನ ಕಂಡಿತು.
ಈ ಮೂಲಕ ವೆಸ್ಟ್ ಇಂಡೀಸ್ ಪಂದ್ಯ ಗೆಲ್ಲಲು 200 ರನ್ ಗುರಿ ಪಡೆಯಿತು. ಒಂದು ಹಂತದಲ್ಲಿ 27 ರನ್‌ಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ವಿಂಡೀಸ್‌ಗೆ ಬ್ಲಾಕ್‌ವುಡ್ (95,154 ಎಸೆತ, 12 ಬೌಂಡರಿ) ಆಸರೆಯಾದರು. ಚೇಸ್(35) ಅವರೊಂದಿಗೆ 5ನೇ ವಿಕೆಟ್‌ಗೆ 73 ರನ್ ಜೊತೆಯಾಟ ನಡೆಸಿದ ಬ್ಲಾಕ್‌ವುಡ್ ಬಳಿಕ ಡೌರಿಚ್ (20)ಅವರೊಂದಿಗೆ 6ನೇ ವಿಕೆಟ್‌ಗೆ 68 ರನ್ ಸೇರಿಸಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ನಾಯಕ ಹೋಲ್ಡರ್ (ಔಟಾಗದೆ 14) ವಿಂಡೀಸ್ 64.2 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 200 ರನ್ ಗಳಿಸಲು ನೆರವಾದರು.
ಈ ವರ್ಷ ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾ ಟೂರ್ನಿ ಆಡೋದು ಖಚಿತ; ಯಾವಾಗ? ಎಲ್ಲಿ? ಇಲ್ಲಿದೆ ಮಾಹಿತಿ
ಈ ಮೂಲಕ ಕೊರೋನಾ ವೈರಸ್ ಕಾರಣ ಸತತ 4 ತಿಂಗಳು ಕಾಲ ಸ್ಥಗಿತಗೊಂಡಿದ್ದ ಅಂತಾರಾಷ್ಟ್ರೀಯ ಕ್ರಿಕೆಟ್ ಇಂಗ್ಲೆಂಡ್ vs ವೆಸ್ಟ್ ಇಂಡೀಸ್ ನಡುವಣ ಟೆಸ್ಟ್ ಸರಣಿ ಮೂಲಕ ಮರಳಿ ಆರಂಭವಾಗಿದ್ದು, ಜೇಸನ್ ಹೋಲ್ಡರ್ ಸಾರಥ್ಯದ ವಿಂಡೀಸ್ ಪಡೆಗೆ ಕೊರೋನಾ ನಂತರದ ಮೊದಲ ಗೆಲುವಿನ ಸಿಂಚನ ಲಭ್ಯವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ