ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ಹಾಗೂ ಡಾಮ್ ಸಿಬ್ಲಿ ಅವರ ಅದ್ಭುತ ಬ್ಯಾಟಿಂಗ್ ನೆರವಿನಿಂದ ಆಂಗ್ಲರು ಎರಡನೇ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ 6 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸುವ ಮೂಲಕ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು 2-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿಕೊಂಡಿದೆ. ಟೆಸ್ಟ್ ಸರಣಿಯಲ್ಲಿ ವೈಟ್ವಾಶ್ ಅನುಭವಿಸಿದ ಶ್ರೀಲಂಕಾ ತವರಲ್ಲೇ ತೀವ್ರ ಮುಖಭಂಗಕ್ಕೀಡಾಗಿದೆ. ಆಂಗ್ಲರು ಅಮೋಘ ಜಯದ ಇದೇ ಆತ್ಮವಿಶ್ವಾಸದೊಂದಿಗೆ ಭಾರತಕ್ಕೆ ಬರಲು ಸಜ್ಜಾಗಿದ್ದಾರೆ. ಹಾಗೆಯೇ ರೂಟ್ ಬಳಗದ ಈ ಪರಾಕ್ರಮ ಕೊಹ್ಲಿ ಪಡೆಯ ಪಾಲಿಗೊಂದು ಎಚ್ಚರಿಕೆಯ ಗಂಟೆಯೂ ಆಗಿದೆ.
ಸರಣಿಯಲ್ಲಿ ಹಿಂದಿದ್ದ ಶ್ರೀಲಂಕಾಕ್ಕೆ ಈ ಪಂದ್ಯವನ್ನು ಡ್ರಾ ಮಾಡಿಕೊಳ್ಳುವ ಉತ್ತಮ ಅವಕಾಶವಿತ್ತು. ಆದರೆ 37 ರನ್ ಮುನ್ನಡೆಯ ಹೊರತಾಗಿಯೂ ದ್ವಿತೀಯ ಸರದಿಯಲ್ಲಿ ಆಂಗ್ಲರ ಸ್ಪಿನ್ ದಾಳಿಗೆ ತತ್ತರಿಸಿ 126ಕ್ಕೆ ಕುಸಿಯಿತು. 164 ರನ್ ಗುರಿ ಪಡೆದ ಇಂಗ್ಲೆಂಡ್ 4 ವಿಕೆಟ್ ಕಳೆದುಕೊಂಡು ಜಯಭೇರಿ ಮೊಳಗಿಸಿತು. 2019ರ ಪ್ರವಾಸದ ವೇಳೆ ಇಂಗ್ಲೆಂಡ್ 3-0 ಅಂತರದಿಂದ ಲಂಕೆಗೆ ವೈಟ್ವಾಶ್ ಮಾಡಿತ್ತು ಎಂಬುದನ್ನು ನಾವಿಲ್ಲಿ ನೆನಪಿಸಬಹುದು.
Rahul Dravid: ಎಲ್ಲಾ ಪ್ರಶಂಸೆ ಹುಡುಗರಿಗೆ ಸಲ್ಲಬೇಕು, ನನಗೆ ಯಾವ ಕ್ರೆಡಿಟ್ ಕೂಡ ಬೇಡ ಎಂದ ರಾಹುಲ್ ದ್ರಾವಿಡ್
Respect 🤜 🤛
Thank you @OfficialSLC for your hospitality and a brilliant series!
🇱🇰 #SLvENG 🏴 pic.twitter.com/ieQJQZA2Ll
— England Cricket (@englandcricket) January 25, 2021
ಇತ್ತ ತನ್ನ ಮೊದಲ ಇನ್ನಿಂಗ್ಸ್ನಲ್ಲಿ ಇಂಗ್ಲೆಂಡ್ ತಂಡ ಬ್ಯಾಟಿಂಗ್ ವೈಫಲ್ಯ ಅನುಭವಿಸಿತು. ಇದರ ನಡುವೆ ಕ್ರೀಸ್ ಕಚ್ಚಿ ನಿಂತು ಆಡಿದ ನಾಯಕ ಜೋ ರೂಟ್ 309 ಎಸೆತಗಳಲ್ಲಿ 186 ರನ್ ಚಚ್ಚಿದರು. ಜಾಸ್ ಬಟ್ಲರ್ 55 ರನ್ ಗಳಿಸಿ ನೆರವಾದರು. ಇಂಗ್ಲೆಂಡ್ 344 ರನ್ಗೆ ಸರ್ವಪತನ ಕಂಡಿತು. ಲಂಕಾ ಪರ ಲಸಿತ್ ಎಂಬುಲ್ಡೇನಿಯಾ 6 ವಿಕೆಟ್ ಕಿತ್ತರು.
BBL: ಒಂದೇ ಎಸೆತದಲ್ಲಿ ಒಬ್ಬ ಬ್ಯಾಟ್ಸ್ಮನ್ ಎರಡೂ ಕಡೆ ರನೌಟ್: ಹೇಗೆ?, ಈ ವಿಡಿಯೋ ನೋಡಿ
ಹೀಗೆ 37 ರನ್ಗಳ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಶ್ರೀಲಂಕಾ ಡಾಮ್ ಬೆಸ್ (4 ವಿಕೆಟ್) ಮತ್ತು ಜ್ಯಾಕ್ ಲೀಚ್ (4 ವಿಕೆಟ್) ದಾಳಿಗೆ 35.5 ಓವರ್ಗಳಲ್ಲಿ 126 ರನ್ಗಳಿಗೆ ಆಲೌಟ್ ಆಯಿತು. 10ನೇ ಬ್ಯಾಟ್ಸ್ಮನ್ ಆಗಿ ಕಣಕ್ಕಿಳಿದಿದ್ದ ಎಂಬುಲ್ಡೇನಿಯಾ 40 ರನ್ಗಳಿಸಿ ಶ್ರೀಲಂಕಾ ಪರ ಗರಿಷ್ಠ ಸ್ಕೋರರ್ ಎನಿಸಿಕೊಂಡರು.
164 ರನ್ಗಳ ಸುಲಭ ಟಾರ್ಗೆಟ್ ಬೆನ್ನಟ್ಟಿದ ಇಂಗ್ಲೆಂಡ್ ತಂಡ 43.3 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು ಗುರಿ ತಲುಪಿ, 6 ವಿಕೆಟ್ಗಳ ಭರ್ಜರಿ ಜಯ ಸಾಧಿಸಿ ಟೆಸ್ಟ್ ಸರಣಿಯನ್ನು 2-0 ಯಲ್ಲಿ ಕ್ಲೀನ್ ಸ್ವೀಪ್ ಮಾಡಿತು. ಜೋ ರೂಟ್ ಪಂದ್ಯಶ್ರೇಷ್ಠ ಹಾಗೂ ಸರಣಿಶ್ರೇಷ್ಠ ತಮ್ಮದಾಗಿಸಿದರು.
England gain two rating points in the @MRFWorldwide ICC Test Team Rankings after the conclusion of the #SLvENG series 👇 pic.twitter.com/I02hpazHWz
— ICC (@ICC) January 25, 2021
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ