England vs Pakistan 2021: ಅತಿ ವೇಗದ 14 ಶತಕ ಬಾರಿಸಿ ಕೊಹ್ಲಿಯನ್ನೂ ಮೀರಿಸಿದ ಪಾಕಿಸ್ತಾನದ ಬಾಬರ್ ಅಜಂ

32 ವರ್ಷದ ವಿರಾಟ್​ ಕೊಹ್ಲಿ ಸ್ಥಿರತೆಯ ವಿಚಾರಕ್ಕೆ ಬಂದಾಗ ಪ್ರಶ್ನಾತೀತ ಹೌದು..ಆದರೆ, ವೇಗದ ಶತಕಗಳ ಸಾಧನೆಯಲ್ಲಿ ಬಾಬರ್ ಅಜಂ ಕೊಹ್ಲಿಯನ್ನೂ ಮೀರಿ ಸಾಧನೆ ಮಾಡಿದ್ದಾರೆ.

ಬಾಬರ್ ಅಜಂ

ಬಾಬರ್ ಅಜಂ

  • Share this:
    ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಂ ಇಂಗ್ಲೆಂಡ್​ ವಿರುದ್ಧ ಮಂಗಳವಾರ ನಡೆದ ಪಂದ್ಯದಲ್ಲಿ ಶತಕ ದಾಖಲಿಸುವ ಮೂಲಕ, 14 ಏಕದಿನ ಶತಕಗಳನ್ನು ತಲುಪಿದ ಅತಿ ವೇಗದ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಇದೀಗ ಪಾತ್ರರಾಗಿದ್ದಾರೆ. ವಿರಾಟ್ ಕೊಹ್ಲಿ ಸೇರಿದಂತೆ ಹಲವಾರು ಆಧುನಿಕ-ಶ್ರೇಷ್ಠ ಕ್ರಿಕೆಟಿಗರನ್ನು ಅವರು ಈಗ ಮೀರಿ ಸಾಧನೆ ಮಾಡಿದ್ದಾರೆ. ಆಧುನಿಕ ಕ್ರಿಕೆಟ್​ ಬ್ಯಾಟ್ಸ್​ಮನ್​ಗಳ ಪೈಕಿ ಭಾರತ ತಂಡದ ನಾಯಕ ವಿರಾಟ್​ ಕೊಹ್ಲಿ ಸೇರಿದಂತೆ ಅನೇಕರು ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಹತ್ತಾರು ದಾಖಲೆಗಳನ್ನು ನಿರ್ಮಿಸುತ್ತಿದ್ದಾರೆ. ಇನ್ನೂ 32 ವರ್ಷದ ವಿರಾಟ್​ ಕೊಹ್ಲಿ ಸ್ಥಿರತೆಯ ವಿಚಾರಕ್ಕೆ ಬಂದಾಗ ಪ್ರಶ್ನಾತೀತ ಹೌದು..ಆದರೆ, ವೇಗದ ಶತಕಗಳ ಸಾಧನೆಯಲ್ಲಿ ಬಾಬರ್ ಅಜಂ ಕೊಹ್ಲಿಯನ್ನೂ ಮೀರಿ ಸಾಧನೆ ಮಾಡಿದ್ದಾರೆ.

    ಅತೀ ಕಡಿಮೆ ಪಂದ್ಯದಲ್ಲಿ ವೇಗದ 14 ಏಕದಿನ ಶತಕ ಬಾರಿಸಿದವರ ಪಟ್ಟಿ ಇಲ್ಲಿದೆ:

    81 - ಬಾಬರ್ ಅಜಂ (ಪಾಕಿಸ್ತಾನ)

    82 - ಮೆಗ್ ಲ್ಯಾನಿಂಗ್ (ಆಸ್ಟ್ರೇಲಿಯಾದ ಮಹಿಳಾ ಕ್ರಿಕೆಟರ್)

    84 - ಹಾಶಿಮ್ ಆಮ್ಲಾ (ದಕ್ಷಿಣ ಆಫ್ರಿಕಾ)

    98 - ಡೇವಿಡ್ ವಾರ್ನರ್ (ಆಸ್ಟ್ರೇಲಿಯಾ)

    103 - ವಿರಾಟ್ ಕೊಹ್ಲಿ (ಭಾರತ)

    ಮೇಲಿನ ಅಂಕಿಅಂಶಗಳೇ ಹೇಳುವಂತೆ ವಿರಾಟ್ ಕೊಹ್ಲಿ 14 ಏಕದಿನ ಶತಕಗಳನ್ನು ಬಾರಿಸಲು 103 ಇನ್ನಿಂಗ್ಸ್​ಗಳನ್ನು ತೆಗೆದುಕೊಂಡರೆ, ಪಾಕಿಸ್ತಾನ ಏಕದಿನ ತಂಡದ ನಾಯಕ ಬಾಬರ್ ಅಜಂ ಕೇವಲ 81 ಇನ್ನಿಂಗ್ಸ್​ಗಳಲ್ಲಿ ಈ ಸಾಧನೆ ಮಾಡುವ ಮೂಲಕ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ.

    ಮಂಗಳವಾರ ಇಂಗ್ಲೆಂಡ್​ ವಿರುದ್ಧ ಬರ್ಮಿಂಗ್ಹ್ಯಾಮ್​ನಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಬಾಬರ್ ಅಜಂ ಈ ಸಾಧನೆ ಮಾಡಿದ್ದಾರೆ. ಈ ಪಂದ್ಯದಲ್ಲಿ ಕೆಚ್ಚೆದೆಯ ಆಟವಾಡಿದ್ದ ಆಜಂ 158 ರನ್ ಬಾರಿಸಿದ್ದರು. ಇದು ಅವರ ವ್ಯಯಕ್ತಿಕ ಅತ್ಯಧಿಕ ರನ್ ಸಹ ಹೌದು..ಅಜಂ ಆಟದ ಫಲವಾಗಿ ಈ ಪಂದ್ಯದಲ್ಲಿ ಪಾಕಿಸ್ತಾನ ಮೊದಲ ಇನ್ನಿಂಗ್ಸ್‌ನಲ್ಲಿ 331/9 ಸ್ಕೋರ್ ದಾಖಲಿಸಿತ್ತು. ಆದರೆ, ಬೃಹತ್ ಮೊತ್ತವನ್ನು ಬೆನ್ನಟ್ಟಿದ್ದ ಇಂಗ್ಲೆಂಡ್ ಅತ್ಯಂತ ಸುಲಭವಾಗಿ ವಿಜಯವನ್ನು ದಾಖಲಿಸಿತ್ತು. ಪರಿಣಾಮ ಅಜಂ ಉತ್ತಮ ಆಟದ ಹೊರತಾಗಿಯೂ ಪಾಕಿಸ್ತಾನ ನಿರಾಸೆ ಅನುಭವಿಸುವಂತಾಗಿತ್ತು.

    ಇದನ್ನೂ ಓದಿ: Explainer: ಕೊರೋನಾದ ಹೊಸ ರೂಪಾಂತರ ಕಪ್ಪಾ ವೈರಸ್ ಕುರಿತು ನೀವು ತಿಳಿದುಕೊಳ್ಳಬೇಕಾದ ಅಂಶಗಳೇನು?

    ಈ ಶತಕದೊಂದಿಗೆ ಬಾಬರ್ ಅಜಂ ಏಕದಿನ ಕ್ರಿಕೆಟ್​ನಲ್ಲಿ ತನ್ನ ನಂ.1 ಶ್ರೇಯಾಂಕಕ್ಕೆ ಮತ್ತಷ್ಟು ಅಂಕಗಳನ್ನು ಸೇರಿಸಿಕೊಂಡಿದ್ದಾರೆ. ಅಲ್ಲದೆ, ತಮ್ಮ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಆದರೆ, ಅವರ ಬ್ಯಾಟಿಂಗ್ ಹೊರತಾಗಿಯೂ ಇಂಗ್ಲೆಂಡ್​ ವಿರುದ್ಧದ ಮೂರು ಏಕದಿನ ಪಂದ್ಯಗಳ ಈ ಸರಣಿಯಲ್ಲಿ ಮೂರೂ ಪಂದ್ಯಗಳನ್ನು ಹೀನಾಯವಾಗಿ ಸೋಲುವ ಮೂಲಕ ಪಾಕಿಸ್ತಾನ ಟ್ರೋಫಿ ಗೆಲ್ಲುವ ಕನಸನ್ನು ಕೈಚೆಲ್ಲಿದೆ. ಆದರೆ, ಈ ಪ್ರವಾಸ ಟಿ20 ವಿಶ್ವಕಪ್​ ನಿಟ್ಟಿನಲ್ಲಿ ಪಾಕಿಸ್ತಾನದ ಆಟಗಾರರಿಗೆ ಉತ್ತಮ ಅನುಭವವಾಗಿ ಪರಿಣಮಿಸಲಿದೆ ಎಂದು ಹೇಳಲಾಗುತ್ತಿದೆ.

    ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
    Published by:MAshok Kumar
    First published: