ICC World Cup Final: ಇಂಗ್ಲೆಂಡ್ ತಂಡವೇ ಫೇವರೇಟ್: ನ್ಯೂಜಿಲೆಂಡ್ ನಾಯಕನ ಅಚ್ಚರಿಯ ಹೇಳಿಕೆ
ICC World Cup Final: ಇನ್ನು ಭಾರತದ ವಿರುದ್ಧ ಆಡಿದ ತಂಡವನ್ನೇ ಫೈನಲ್ನಲ್ಲೂ ಮುಂದುವರೆಸುವ ಸೂಚನೆ ನೀಡಿದ ಕಿವೀಸ್ ನಾಯಕ ಕೇನ್, ಬಲಿಷ್ಠ ತಂಡದ ಎದುರು ಗೆದ್ದು ಚೊಚ್ಚಲ ವಿಶ್ವ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಳ್ಳುವ ವಿಶ್ವಾದಲ್ಲಿದ್ದೇವೆ ಎಂದಿದ್ದಾರೆ.

Kane williamson
- News18
- Last Updated: July 14, 2019, 2:18 PM IST
ಐಸಿಸಿ ವಿಶ್ವಕಪ್ 2019ನಲ್ಲಿ ಅಂಡರ್ಡಾಗ್ ಹಣೆ ಪಟ್ಟಿಯೊಂದಿಗೆ ಫೈನಲ್ಗೇರಿರುವ ನ್ಯೂಜಿಲೆಂಡ್ ತಂಡ ಇಂದು ಇಂಗ್ಲೆಂಡ್ ವಿರುದ್ಧ ವಿಶ್ವಕಪ್ ಕಿರೀಟಕ್ಕಾಗಿ ಸೆಣಸಲಿದೆ. ಲಾರ್ಡ್ಸ್ ಮೈದಾನದಲ್ಲಿ ನಡೆಯಲಿರುವ ಈ ಹಣಾಹಣಿಯಲ್ಲಿ ಇಂಗ್ಲೆಂಡ್ ತಂಡ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡ ಎಂಬ ಅಚ್ಚರಿಯ ಹೇಳಿಕೆಯೊಂದನ್ನು ಕೇನ್ ವಿಲಿಯಮ್ಸನ್ ನೀಡಿದ್ದಾರೆ.
ಪಂದ್ಯಕ್ಕೂ ಮುನ್ನ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನ್ಯೂಜಿಲೆಂಡ್ ನಾಯಕ, ಫೈನಲ್ನಲ್ಲಿ ನಮ್ಮ ತಂಡವು ಉತ್ತಮ ಸಾಮರ್ಥ್ಯದಿಂದ ಕೂಡಿದೆ. ಅದಕ್ಕೆ ತಕ್ಕಂತಹ ಪ್ರದರ್ಶನ ನೀಡಲಿದೆ. ವಿಶ್ವಕಪ್ನಲ್ಲಿ ಇಂಗ್ಲೆಂಡ್ ತಂಡ ಪ್ರಶಸ್ತಿ ಗೆಲ್ಲಲಿದೆ ಎಂಬ ಮಾತುಗಳ ಎಲ್ಲೆಡೆ ಕೇಳಿ ಬರುತ್ತಿದೆ. ಇಂತಹ ಫೇವರೇಟ್ ಪಟ್ಟಕ್ಕೆ ಆಂಗ್ಲರ ತಂಡ ಅರ್ಹರು. ನಾವು ಅವರೊಂದಿಗೆ ಉತ್ತಮ ಕ್ರಿಕೆಟ್ ಆಡಲು ಬಯಸುತ್ತೇವೆ. ಹೀಗಾಗಿ ಫೈನಲ್ ಪಂದ್ಯ ರೋಚಕ ಹೋರಾಟಕ್ಕೆ ಸಾಕ್ಷಿಯಾಗಲಿದೆ ಎಂದು ಕೇನ್ ವಿಲಿಯಮ್ಸನ್ ಹೇಳಿದ್ದಾರೆ.
ಇನ್ನು ಭಾರತದ ವಿರುದ್ಧ ಆಡಿದ ತಂಡವನ್ನೇ ಫೈನಲ್ನಲ್ಲೂ ಮುಂದುವರೆಸುವ ಸೂಚನೆ ನೀಡಿದ ಕಿವೀಸ್ ನಾಯಕ ಕೇನ್, ಬಲಿಷ್ಠ ತಂಡದ ಎದುರು ಗೆದ್ದು ಚೊಚ್ಚಲ ವಿಶ್ವ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಳ್ಳುವ ವಿಶ್ವಾದಲ್ಲಿದ್ದೇವೆ ಎಂದಿದ್ದಾರೆ. ಇನ್ನು ರೌಂಡ್ ರಾಬಿನ್ ಲೀಗ್ ಹಂತದಲ್ಲಿ ಉಭಯ ತಂಡಗಳು ಮುಖಾಮುಖಿಯಾಗಿದ್ದು, ಇಲ್ಲಿ ನ್ಯೂಜಿಲೆಂಡ್ ತಂಡ ಇಂಗ್ಲೆಂಡ್ ವಿರುದ್ಧ 119 ರನ್ಗಳ ಅಂತರದಿಂದ ಹೀನಾಯ ಸೋಲುಂಡಿತ್ತು. ಈ ಗೆಲುವಿನ ಆತ್ಮ ವಿಶ್ವಾದಲ್ಲಿ ಅಂತಿಮ ಹೋರಾಟಕ್ಕಿಳಿಯುವ ವಿಶ್ವಾಸದಲ್ಲಿದೆ ಇಂಗ್ಲೆಂಡ್ ತಂಡ.ಇದನ್ನೂ ಓದಿ: ವಿಶ್ವಕಪ್ ಮಹಾಸಮರಕ್ಕೆ ಇಂಗ್ಲೆಂಡ್-ನ್ಯೂಜಿಲೆಂಡ್ ಸಜ್ಜು: ಯಾರು ಬಲಿಷ್ಠ? ಇಲ್ಲಿದೆ ಅಂಕಿ ಅಂಶ