England vs New Zealand: ವಿಶ್ವಕಪ್ ಕ್ರಿಕೆಟ್ ಕದನ: ಚಾಂಪಿಯನ್ ಪಟ್ಟಕ್ಕೆ ಇಂಗ್ಲೆಂಡ್​ಗೆ 242 ರನ್​ಗಳ ಗುರಿ

ICC World Cup 2019 Final: ಲಾರ್ಡ್ಸ್​ ಮೈದಾನದಲ್ಲಿ ನಡೆದ ವಿಶ್ವಕಪ್​ ಫೈನಲ್​ ಪಂದ್ಯಗಳಲ್ಲಿ ಮೂರು ಬಾರಿ ಮಾತ್ರ ಫಸ್ಟ್ ಬ್ಯಾಟಿಂಗ್ ಮಾಡಿದ ತಂಡ ಗೆದ್ದಿದೆ. 1975, 1979 ರಲ್ಲಿ ವೆಸ್ಟ್​ ಇಂಡೀಸ್ ಗೆದ್ದರೆ 1983ರಲ್ಲಿ ಭಾರತ ಮೊದಲು ಬ್ಯಾಟ್ ಮಾಡಿ ಚೊಚ್ಚಲ ವಿಶ್ವಕಪ್ ಕಿರೀಟ ಧರಿಸಿತ್ತು. ಹಾಗೆಯೇ ಲಾರ್ಡ್ಸ್​ ಮೈದಾನದಲ್ಲಿ ಆಡಲಾದ ಕಳೆದ 8 ಏಕದಿನ ಫೈನಲ್ ಪಂದ್ಯಗಳಲ್ಲಿ ಒಂದು ಪಂದ್ಯ ಟೈಯಾದರೆ, 6 ಬಾರಿ ಸೆಕೆಂಡ್ ಬ್ಯಾಟ್ ಮಾಡಿದ ತಂಡ ಗೆದ್ದಿದೆ. ಹೀಗಾಗಿ ಇಲ್ಲಿನ ಪಿಚ್ ಚೇಸಿಂಗ್​ಗೆ ಸಹಕಾರಿ ಎನ್ನಲಾಗಿದೆ.

zahir | news18
Updated:July 14, 2019, 7:23 PM IST
England vs New Zealand: ವಿಶ್ವಕಪ್ ಕ್ರಿಕೆಟ್ ಕದನ: ಚಾಂಪಿಯನ್ ಪಟ್ಟಕ್ಕೆ ಇಂಗ್ಲೆಂಡ್​ಗೆ 242 ರನ್​ಗಳ ಗುರಿ
.
zahir | news18
Updated: July 14, 2019, 7:23 PM IST
ಕ್ರಿಕೆಟ್ ಕಾಶಿ ಲಂಡನ್‌ನ ಲಾರ್ಡ್ಸ್‌ ಮೈದಾನದಲ್ಲಿ ವಿಶ್ವಕಪ್​ ಮೆಗಾ ಫೈನಲ್​ನಲ್ಲಿ ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್​ ತಂಡಗಳು ಮುಖಾಮುಖಿಯಾಗಿವೆ. ಟಾಸ್ ಗೆದ್ದ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು.

ಅದರಂತೆ ಕಿವೀಸ್ ಆರಂಭಿಕರಾಗಿ ಕಣಕ್ಕಿಳಿದ ಮಾರ್ಟಿನ್ ಗಪ್ಟಿಲ್ ಹಾಗೂ ನಿಕೋಲ್ಸ್ 6 ಓವರುಗಳವರೆಗೂ ವಿಕೆಟ್ ಕಾಯ್ದುಕೊಳ್ಳುವ ಮೂಲಕ ನ್ಯೂಜಿಲೆಂಡ್ ತಂಡಕ್ಕೆ ಉತ್ತಮ ಆರಂಭ ಒದಗಿಸುವ ಸೂಚನೆ ನೀಡಿದ್ದರು. ಆದರೆ ತಂಡದ ಮೊತ್ತ 29 ಇದ್ದಾಗ ವೋಕ್ಸ್​ ಎಸೆತದಲ್ಲಿ ಎಲ್​​ಬಿಡಬ್ಲ್ಯೂ ಆಗಿ ಗಪ್ಟಿಲ್ ಹೊರ ನಡೆದರು.

ಆರಂಭಿಕ ಆಘಾತಕ್ಕೆ ಒಳಗಾದ ಕಿವೀಸ್ ತಂಡಕ್ಕೆ ಆಸರೆಯಾದ ನಾಯಕ ವಿಲಿಯಮ್ಸನ್ ನಿಧಾನಗತಿಯ ಆಟಕ್ಕೆ ಒತ್ತು ನೀಡಿದರು. ಮತ್ತೊಂದೆಡೆ ರಕ್ಷಣಾತ್ಮಕ ಆಟದೊಂದಿಗೆ ರನ್​ ಕಲೆ ಹಾಕುವಲ್ಲಿ ನಿಕೋಲ್ಸ್ ನಿರತರಾದರು. ಪರಿಣಾಮ 2ನೇ ವಿಕೆಟ್​ ಅರ್ಧಶತಕದ ಜೊತೆಯಾಟ ಆಡಿದ ಈ ಜೋಡಿ  20 ಓವರ್​ಗೆ ತಂಡದ ಮೊತ್ತವನ್ನು 90ರ ಗಡಿ ದಾಟಿಸಿದರು.

ಈ ಮೊತ್ತಕ್ಕೆ 13 ರನ್​ ಸೇರ್ಪಡೆಯಾಗುವಷ್ಟರಲ್ಲಿ ನಾಯಕ ವಿಲಿಯಮ್ಸನ್(30) ಪ್ಲಂಕೆಟ್ ಎಸೆತದಲ್ಲಿ ವಿಕೆಟ್ ಕೀಪರ್​ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಈ ಹಂತದಲ್ಲಿ 4 ಬೌಂಡರಿಗಳೊಂದಿಗೆ ನಿಕೋಲ್ಸ್ ಅರ್ಧಶತಕ ಪೂರೈಸಿದರು. ಆದರೆ ಪ್ಲಂಕೆಟ್ ಅವರ 27ನೇ ಓವರ್​ನ  ಕೊನೆಯ ಎಸೆತವನ್ನು ಗುರುತಿಸುವಲ್ಲಿ ಎಡವಿದ ಹೆನ್ರಿ ನಿಕೋಲ್ಸ್​(55) ಕ್ಲೀನ್ ಬೌಲ್ಡ್​ ಆದರು.

ಇನ್ನು ಭಾರತದ ವಿರುದ್ಧ ಸೆಮಿಫೈನಲ್​ನಲ್ಲಿ ಅರ್ಧಶತಕ ಬಾರಿಸಿದ್ದ ರಾಸ್ ಟೇಲರ್ ಈ ಬಾರಿ 15 ರನ್​ಗಳಿಸಿ ತಮ್ಮ ಇನಿಂಗ್ಸ್​ಗೆ ಅಂತ್ಯವಾಡಿದರು. 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಆಗಮಿಸಿದ ನೀಶಮ್ 3 ಬೌಂಡರಿಗಳೊಂದಿಗೆ ಭರವಸೆ ಮೂಡಿಸಿದರೂ ಪ್ಲಂಕೆಟ್ ಎಸೆತದಲ್ಲಿ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು.

ಮತ್ತೊಂದೆಡೆ ಗಟ್ಟಿಯಾಗಿ ನೆಲೆಯೂರಿದ್ದ ಲಾಥಮ್ 43ನೇ ಓವರ್​ನಲ್ಲಿ ತಂಡದ ಮೊತ್ತವನ್ನು 202ರ ಗಡಿ ದಾಟಿಸಿದರು. ಕೆಲವೊತ್ತು ಸಾಥ್​ ನೀಡಿದ ಗ್ರ್ಯಾಂಡ್​ಹೋಮ್(16) ಸಹ ಹೆಚ್ಚು ಹೊತ್ತು ನಿಲ್ಲದೆ ಹಿಂತಿರುಗಿದರು. ಇನ್ನು 49ನೇ ಓವರ್​ನಲ್ಲಿ  ಕೀಪರ್​ರನ್ನು ವಂಚಿಸಿದ ವೈಡ್ ಬಾಲ್ ಬೌಂಡರಿ ಗೆರೆ ದಾಟಿ ಅತಿರಕ್ತ 5 ರನ್​ನ್ನು ನ್ಯೂಜಿಲೆಂಡ್​ಗೆ ನೀಡಿತು.
Loading...
ಬೋನಸ್ ರನ್ ಸಿಕ್ಕಿದ ಬೆನ್ನಲ್ಲೇ ವೋಕ್ಸ್​ ಎಸೆತದಲ್ಲಿ ಲಾಥಮ್(47) ಕ್ಯಾಚ್ ನೀಡಿ ಪೆವಿಲಿಯನ್ ಕಡೆ ಹೆಜ್ಜೆ ಹಾಕಿದರು. ಕೊನೆಯ ಓವರ್​ನಲ್ಲಿ ಹೆನ್ರಿಯನ್ನು ಬೌಲ್ಡ್​ ಮಾಡಿದ ಜೋಫ್ರಾ ಆರ್ಚರ್ ಕೇವಲ 3 ರನ್​ ನೀಡಿ ನ್ಯೂಜಿಲೆಂಡ್ ತಂಡವನ್ನು 8 ವಿಕೆಟ್​ ನಷ್ಟಕ್ಕೆ 241 ರನ್​ಗಳಿಗೆ ಕಟ್ಟಿ ಹಾಕಿದರು. ಇನ್ನು ಇಂಗ್ಲೆಂಡ್ ಪರ ಪ್ಲಂಕೆಟ್ ಹಾಗೂ ಕ್ರಿಸ್ ವೋಕ್ಸ್ ತಲಾ 3 ವಿಕೆಟ್​ ಉರುಳಿಸಿ ಯಶಸ್ವಿ ಬೌಲರುಗಳು ಎನಿಸಿಕೊಂಡರು.

ಪ್ಲಂಕೆಟ್


ವಿಶೇಷ ವಿಶ್ವಕಪ್:

ಇಂದು ನಡೆಯುತ್ತಿರುವ​ ಫೈನಲ್ ಪಂದ್ಯವು ಕ್ರಿಕೆಟ್ ಇತಿಹಾಸದಲ್ಲೇ ವಿಶೇಷ. ಇದಕ್ಕೆ ಕಾರಣ ಅಂತಿಮ ಹಣಾಹಣಿಯಲ್ಲಿ ಮುಖಾಮುಖಿಯಾಗುತ್ತಿರುವುದು ಅತಿಥೇಯ ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ತಂಡಗಳು ಎಂಬುದು. ಏಕೆಂದರೆ ಉಭಯ ತಂಡಗಳಿಗೆ ವಿಶ್ವಕಪ್​ ಎಂಬುದು  ಮರೀಚಿಕೆ. ಹೀಗಾಗಿ ಈ ಬಾರಿ ಒಂದು ತಂಡವು ತನ್ನ ಕನಸಿನ ಟ್ರೋಫಿಯನ್ನು ಮೇಲೆಕ್ಕೆತ್ತಲಿದೆ.

ಈ ಹಿಂದೆ ಇಂಗ್ಲೆಂಡ್ ತಂಡವು ಮೂರು ಬಾರಿ ಫೈನಲ್​ ಪ್ರವೇಶಿಸಿತ್ತು. ಆದರೆ ಚಾಂಪಿಯನ್ ಪಟ್ಟ ಮಾತ್ರ ಒಲಿದಿರಲಿಲ್ಲ. ಹಾಗೆಯೇ ನ್ಯೂಜಿಲೆಂಡ್ ತಂಡವು ಕಳೆದ ವಿಶ್ವಕಪ್​ನಲ್ಲಿ ಫೈನಲ್ ಪ್ರವೇಶಿಸಿದರೂ, ಆಸ್ಟ್ರೇಲಿಯಾ ವಿರುದ್ಧ ಸೋಲುವ ಮೂಲಕ ರನ್ನರ್​ಅಪ್​ ಸ್ಥಾನಕ್ಕೆ ತೃಪ್ತಿಪಟ್ಟಿತು.

ಐಸಿಸಿ ಏಕದಿನ ರ‍್ಯಾಂಕಿಂಗ್​​ನಲ್ಲಿ ನಂಬರ್​ 1 ಸ್ಥಾನದಲ್ಲಿರುವ ಇಂಗ್ಲೆಂಡ್ ತವರಿನಲ್ಲಿ ನಡೆಯುವ ಫೈನಲ್​​ನಲ್ಲಿ ಫೇವರೇಟ್​ ಎನ್ನಲಾಗುತ್ತಿದ್ದರೂ, ರ‍್ಯಾಂಕಿಂಗ್ ಪಟ್ಟಿಯಲ್ಲಿ ಮೂರನೇ ಸ್ಥಾನವನ್ನು ಅಲಂಕರಿಸುವ ನ್ಯೂಜಿಲೆಂಡ್​ ತಂಡವನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷಿಸುವಂತಿಲ್ಲ. ಮುಖ್ಯವಾಗಿ ಕಳೆದ ಬಾರಿಯ ಫೈನಲ್​ ಈ ಬಾರಿ ಮರುಕಳಿಸದಂತೆ ಕಿವೀಸ್ ಪಡೆ ಅಂಗಳಕ್ಕೆ ಇಳಿಯಲಿದೆ. ಅದೇ ರೀತಿ 2015ರ ವಿಶ್ವಕಪ್ ಫೈನಲ್ ಆಡಿರುವ 6 ಆಟಗಾರರು ಈ ಬಾರಿ ತಂಡದಲ್ಲಿರುವುದು ಕೇನ್ ವಿಲಿಯಮ್ಸನ್​ ಬಳಗ ಆತ್ಮ ವಿಶ್ವಾಸಕ್ಕೆ ಕಾರಣ.

ಐದು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾಗೆ ಸೋಲುಣಿಸಿ ಫೈನಲ್​ಗೇರಿರುವ ಇಯಾನ್ ಮೋರ್ಗನ್​ ಪಡೆ ಆತ್ಮ ವಿಶ್ವಾದಿಂದ ಪುಟಿಯುತ್ತಿದ್ದರೆ, ಟೀಂ ಇಂಡಿಯಾವನ್ನು ಸಾಧಾರಣ ರನ್​ಗಳಿಗೆ ಕಟ್ಟಿ ಹಾಕಿದ ಉತ್ಸಾಹದಲ್ಲಿದೆ ಕೇನ್ ವಿಲಿಯಮ್ಸನ್ ಬಳಗ. ಹೀಗಾಗಿ ಫೈನಲ್​ ಪಂದ್ಯವು ಜಿದ್ದಾಜಿದ್ದಿನಿಂದ ಕೂಡಿರಲಿದೆ ಎಂದು ನಿರೀಕ್ಷಿಸಲಾಗುತ್ತಿದೆ.

ಇಲ್ಲಿ ಇಂಗ್ಲೆಂಡ್ ತಂಡಕ್ಕೆ ತವರಿನ ಬೆಂಬಲವು ಪ್ಲಸ್ ಆಗುವ ಸಾಧ್ಯತೆಯಿದ್ದರೂ, ಈ ಹಿಂದೆ 1979, 1987 ಹಾಗೂ 1992ನೇ ಇಸವಿಗಳಲ್ಲಿ ಅಂತಿಮ ಹಂತದಲ್ಲಿ ಆಂಗ್ಲರು ಮುಗ್ಗರಿಸಿರುವುದನ್ನು ಅಲ್ಲೆಗೆಳೆಯುವಂತಿಲ್ಲ. ಹಾಗೆಯೇ ಕಳೆದ ಬಾರಿಯ ರನ್ನರ್ ಅಪ್ ನ್ಯೂಜಿಲೆಂಡ್ ತಂಡ ರನ್​ರೇಟ್​ ಸಹಾಯದಿಂದ ಸೆಮಿಫೈನಲ್​ಗೇರಿತ್ತು. ಆದರೆ ನಿರ್ಣಾಯಕ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿದ ಕಿವೀಸ್ ಆಟಗಾರರು ಕಳೆದ ಬಾರಿಯ ತಪ್ಪುಗಳನ್ನು ಸರಿಪಡಿಸಿ ಚಾಂಪಿಯನ್ ಆಗುವ ತವಕದಲ್ಲಿದೆ.

ಉಭಯ ತಂಡಗಳು ಇಂತಿವೆ:
ಇಂಗ್ಲೆಂಡ್: ಇಯಾನ್ ಮೋರ್ಗನ್ (ನಾಯಕ), ಜೋಫ್ರಾ ಆರ್ಚರ್, ಜಾನಿ ಬೈರ್​ಸ್ಟೋ, ಜಾಸ್ ಬಟ್ಲರ್ (ವಿಕೆಟ್‌ಕೀಪರ್), ಕ್ರಿಸ್ ವೋಕ್ಸ್, ಮಾರ್ಕ್ ವುಡ್, ಲಿಯಾಮ್ ಪ್ಲಂಕೆಟ್, ಆದಿಲ್ ರಶೀದ್, ಜೋ ರೂಟ್, ಜೇಸನ್ ರಾಯ್, ಬೆನ್ ಸ್ಟೋಕ್ಸ್‌.

ನ್ಯೂಜಿಲೆಂಡ್: ಕೇನ್ ವಿಲಿಯಮ್ಸನ್ (ನಾಯಕ), ಮಾರ್ಟಿನ್ ಗಪ್ಟಿಲ್, ರಾಸ್ ಟೇಲರ್, ಟ್ರೆಂಟ್ ಬೌಲ್ಟ್, ಲೂಕಿ ಫೆರ್ಗುಸನ್, ಮ್ಯಾಟ್ ಹೆನ್ರಿ, ಮಿಷೆಲ್ ಸ್ಯಾಂಟ್ನರ್ , ಹೆನ್ರಿ ನಿಕೊಲ್ಸ್‌, ಟಾಮ್ ಲಾಥಮ್ (ವಿಕೆಟ್‌ಕೀಪರ್), ಕಾಲಿನ್ ಡಿ ಗ್ರ್ಯಾಂಡ್‌ಹೋಮ್, ಜಿಮ್ಮಿ ನೀಶಮ್ .

ಎರಡು ತಂಡಗಳ ಒಟ್ಟಾರೆ ಬಲಾಬಲ:
ಉಭಯ ತಂಡಗಳ ಫೈನಲ್​ ಪಂದ್ಯಗಳನ್ನು ಅಂಕಿ ಅಂಶಗಳನ್ನು ಗಮನಿಸಿದರೆ ಎರಡು ತಂಡಗಳ ಪ್ರದರ್ಶನ ಕಳಪೆಯಾಗಿದೆ. ಐಸಿಸಿ ಏಕದಿನ ಟೂರ್ನಿಯಲ್ಲಿ ನ್ಯೂಜಿಲೆಂಡ್ 22 ಬಾರಿ ಫೈನಲ್ ಆಡಿದ್ದು, ಅದರಲ್ಲಿ ಕೇವಲ 5 ರಲ್ಲಿ ಮಾತ್ರ ಗೆದ್ದಿದೆ. ಹಾಗೆಯೇ 24 ಬಾರಿ ಫೈನಲ್ ಪ್ರವೇಶಿಸಿದ ಇಂಗ್ಲೆಂಡ್ ತಂಡ 8 ಫೈನಲ್​ಗಳನ್ನು ಮಾತ್ರ ಗೆದ್ದುಕೊಂಡಿದೆ. ಇನ್ನು ವಿಶ್ವಕಪ್​​​ ಟೂರ್ನಿಯಲ್ಲಿ ಮೂರು ಬಾರಿ ಫೈನಲ್ ಪ್ರವೇಶಿಸಿದ ಇಂಗ್ಲೆಂಡ್ ಮೂರರಲ್ಲೂ ಸೋಲುಂಡಿದೆ. ಹಾಗೆಯೇ 2015 ರಲ್ಲಿ ಫೈನಲ್ ಪ್ರವೇಶಿಸಿದ್ದ ನ್ಯೂಜಿಲೆಂಡ್ ಆಸೀಸ್ ವಿರುದ್ದ ಶರಣಾಗಿತ್ತು. ಹೀಗಾಗಿ ಅಂತಿಮ ಹಣಾಹಣಿಯಲ್ಲಿ ಉಭಯ ತಂಡಗಳ ಪ್ರದರ್ಶನ ಸಮಬಲದಿಂದ ಕೂಡಿದೆ ಎನ್ನಬಹುದು.

ಬ್ಯಾಟಿಂಗ್ ಬಲ:
ಇನ್ನು ಉಭಯ ತಂಡಗಳ ಬ್ಯಾಟಿಂಗ್​ ನೋಡಿದರೆ ಇಯಾನ್ ಮೋರ್ಗನ್ ಪಡೆ ಬಲಿಷ್ಠ ಎನ್ನಬಹುದು. ಅದರಲ್ಲೂ ಆರಂಭಿಕರಾಗಿ ಭರ್ಜರಿ ಯಶಸ್ಸು ಸಾಧಿಸಿರುವ ಜೇಸನ್ ರಾಯ್ ಮತ್ತು ಬೈರ್​ಸ್ಟೋ ಅವರ ಕಾಣಿಕ ಮಹತ್ವದ್ದು. ಮಧ್ಯಮ ಕ್ರಮಾಂಕದಲ್ಲಿ ಜೋ ರೂಟ್, ಮಾರ್ಗನ್ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧವೇ ಅದ್ಭುತವಾಗಿ ಬ್ಯಾಟ್ ಬೀಸಿದ್ದರು. ಜೋಸ್ ಬಟ್ಲರ್ ಮತ್ತು ಜೇಮ್ಸ್ ವಿನ್ಸಿ ಯಾವುದೇ ಕ್ಷಣದಲ್ಲೂ ತಂಡಕ್ಕೆ ಆಸರೆಯಾಗಬಲ್ಲ ಆಟಗಾರರು.

ಅತ್ತ ನ್ಯೂಜಿಲೆಂಡ್​ ತಂಡದ ಬ್ಯಾಟಿಂಗ್ ವಿಭಾಗವು ಇಂಗ್ಲೆಂಡ್​ಗೆ ಹೋಲಿಸಿದರೆ ತುಸು ಕಳಪೆ ಎನ್ನಬಹುದು. ಆರಂಭಿಕರಾಗಿ ಕಣಕ್ಕಿಳಿಯುತ್ತಿರುವ ಮಾರ್ಟಿನ್ ಗಪ್ಟಿಲ್ ಹಾಗೂ ಹೆನ್ರಿ ನಿಕೋಲ್ಸ್ ಸತತ ವಿಫಲರಾಗಿದ್ದಾರೆ. ಇನ್ನು ನಾಯಕ ಕೇನ್ ವಿಲಿಯಮ್ಸನ್​ ಮಾತ್ರ ಕಿವೀಸ್ ಪಡೆಯಲ್ಲಿ ಅಬ್ಬರಿಸುತ್ತಿದ್ದು, ಇವರಿಗೆ ಕೆಲ ಪಂದ್ಯಗಳಲ್ಲಿ ಸಾಥ್ ನೀಡುವಲ್ಲಿ ಟಾಮ್ ಲಾಥಮ್ ಯಶಸ್ವಿಯಾಗಿದ್ದಾರೆ. ಇನ್ನು ಭಾರತದ ವಿರುದ್ಧ ಅರ್ಧಶತಕ ಸಿಡಿಸುವ ಮೂಲಕ ರಾಸ್ ಟೇಲರ್ ಫಾರ್ಮ್​​ಗೆ ಮರಳಿರುವುದು ಕಿವೀಸ್ ಪಾಳಯಕ್ಕೆ ತುಸು ನೆಮ್ಮದಿ.

ಬ್ಯಾಟಿಂಗ್ ಬಲ:
ಇನ್ನು ಉಭಯ ತಂಡಗಳ ಬ್ಯಾಟಿಂಗ್​ ನೋಡಿದರೆ ಇಯಾನ್ ಮೋರ್ಗನ್ ಪಡೆ ಬಲಿಷ್ಠ ಎನ್ನಬಹುದು. ಅದರಲ್ಲೂ ಆರಂಭಿಕರಾಗಿ ಭರ್ಜರಿ ಯಶಸ್ಸು ಸಾಧಿಸಿರುವ ಜೇಸನ್ ರಾಯ್ ಮತ್ತು ಬೈರ್​ಸ್ಟೋ ಅವರ ಕಾಣಿಕ ಮಹತ್ವದ್ದು. ಮಧ್ಯಮ ಕ್ರಮಾಂಕದಲ್ಲಿ ಜೋ ರೂಟ್, ಮಾರ್ಗನ್ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧವೇ ಅದ್ಭುತವಾಗಿ ಬ್ಯಾಟ್ ಬೀಸಿದ್ದರು. ಜೋಸ್ ಬಟ್ಲರ್ ಮತ್ತು ಜೇಮ್ಸ್ ವಿನ್ಸಿ ಯಾವುದೇ ಕ್ಷಣದಲ್ಲೂ ತಂಡಕ್ಕೆ ಆಸರೆಯಾಗಬಲ್ಲ ಆಟಗಾರರು.

ಅತ್ತ ನ್ಯೂಜಿಲೆಂಡ್​ ತಂಡದ ಬ್ಯಾಟಿಂಗ್ ವಿಭಾಗವು ಇಂಗ್ಲೆಂಡ್​ಗೆ ಹೋಲಿಸಿದರೆ ತುಸು ಕಳಪೆ ಎನ್ನಬಹುದು. ಆರಂಭಿಕರಾಗಿ ಕಣಕ್ಕಿಳಿಯುತ್ತಿರುವ ಮಾರ್ಟಿನ್ ಗಪ್ಟಿಲ್ ಹಾಗೂ ಹೆನ್ರಿ ನಿಕೋಲ್ಸ್ ಸತತ ವಿಫಲರಾಗಿದ್ದಾರೆ. ಇನ್ನು ನಾಯಕ ಕೇನ್ ವಿಲಿಯಮ್ಸನ್​ ಮಾತ್ರ ಕಿವೀಸ್ ಪಡೆಯಲ್ಲಿ ಅಬ್ಬರಿಸುತ್ತಿದ್ದು, ಇವರಿಗೆ ಕೆಲ ಪಂದ್ಯಗಳಲ್ಲಿ ಸಾಥ್ ನೀಡುವಲ್ಲಿ ಟಾಮ್ ಲಾಥಮ್ ಯಶಸ್ವಿಯಾಗಿದ್ದಾರೆ. ಇನ್ನು ಭಾರತದ ವಿರುದ್ಧ ಅರ್ಧಶತಕ ಸಿಡಿಸುವ ಮೂಲಕ ರಾಸ್ ಟೇಲರ್ ಫಾರ್ಮ್​​ಗೆ ಮರಳಿರುವುದು ಕಿವೀಸ್ ಪಾಳಯಕ್ಕೆ ತುಸು ನೆಮ್ಮದಿ.

ಚೇಸಿಂಗ್​ಗೆ ಸಹಕಾರಿ:

ಲಾರ್ಡ್ಸ್​ ಮೈದಾನದಲ್ಲಿ ನಡೆದ ವಿಶ್ವಕಪ್​ ಫೈನಲ್​ ಪಂದ್ಯಗಳಲ್ಲಿ ಮೂರು ಬಾರಿ ಮಾತ್ರ ಫಸ್ಟ್ ಬ್ಯಾಟಿಂಗ್ ಮಾಡಿದ ತಂಡ ಗೆದ್ದಿದೆ. 1975, 1979 ರಲ್ಲಿ ವೆಸ್ಟ್​ ಇಂಡೀಸ್ ಗೆದ್ದರೆ 1983ರಲ್ಲಿ ಭಾರತ ಮೊದಲು ಬ್ಯಾಟ್ ಮಾಡಿ ಚೊಚ್ಚಲ ವಿಶ್ವಕಪ್ ಕಿರೀಟ ಧರಿಸಿತ್ತು. ಹಾಗೆಯೇ ಲಾರ್ಡ್ಸ್​ ಮೈದಾನದಲ್ಲಿ ಆಡಲಾದ ಕಳೆದ 8 ಏಕದಿನ ಫೈನಲ್ ಪಂದ್ಯಗಳಲ್ಲಿ ಒಂದು ಪಂದ್ಯ ಟೈಯಾದರೆ, 6 ಬಾರಿ ಸೆಕೆಂಡ್ ಬ್ಯಾಟ್ ಮಾಡಿದ ತಂಡ ಗೆದ್ದಿದೆ. ಹೀಗಾಗಿ ಇಲ್ಲಿನ ಪಿಚ್ ಚೇಸಿಂಗ್​ಗೆ ಸಹಕಾರಿ ಎನ್ನಲಾಗಿದೆ.

ಲೀಗ್  ಹಂತದಲ್ಲಿ ಇಂಗ್ಲೆಂಡ್ ಅಬ್ಬರ:

ಲೀಗ್ ಹಂತದಲ್ಲಿ ಆಡಲಾದ ನ್ಯೂಜಿಲೆಂಡ್ ವಿರುದ್ದದ ಪಂದ್ಯದಲ್ಲಿ ಇಂಗ್ಲೆಂಡ್ 119 ರನ್​ಗಳಿಂದ ಭರ್ಜರಿ ಜಯ ಸಾಧಿಸಿತ್ತು. ಇಂಗ್ಲೆಂಡ್ ನೀಡಿದ 305 ರನ್​ಗಳ ಟಾರ್ಗೆಟ್ ಬೆನ್ನತ್ತಿದ್ದ ಕಿವೀಸ್ ಪಡೆ 186 ರನ್​ಗಳಿಗೆ ಸರ್ವಪತನ ಕಂಡಿತು. ಈ ಗೆಲುವು ಇಂಗ್ಲೆಂಡ್ ಆಟಗಾರರ ಆತ್ಮ ವಿಶ್ವಾಸವನ್ನು ಹೆಚ್ಚಿಸಲಿದೆ.

ಲಾರ್ಡ್ಸ್​ನಲ್ಲಿ ಕಿವೀಸ್ ಮೇಲುಗೈ:
ಇನ್ನು ಲಾರ್ಡ್ಸ್​ ಮೈದಾನದಲ್ಲಿ ಆಡಿರುವ ನಾಲ್ಕು ಪಂದ್ಯಗಳಲ್ಲಿ 3ರಲ್ಲಿ ನ್ಯೂಜಿಲೆಂಡ್ ಗೆಲುವು ಸಾಧಿಸಿದೆ. ಅದರಲ್ಲೂ ಕ್ರಿಕೆಟ್ ಕಾಶಿಯಲ್ಲಿ ಇಂಗ್ಲೆಂಡ್ ತಂಡದ ವಿರುದ್ಧ ಕಿವೀಸ್ ಪಡೆಯು ಎರಡು ಬಾರಿ ಗೆದ್ದಿರುವುದು ತಂಡಕ್ಕೆ ಪ್ಲಸ್ ಪಾಯಿಂಟ್ ಆಗಲಿದೆ.

ಎಡಗೈ ವೇಗಿಗಳಿಗೆ ಸಹಕಾರಿ:
ಈ ಮೈದಾನಲ್ಲಿ ಆಡಲಾದ ಕಳೆದ ನಾಲ್ಕು ಪಂದ್ಯಗಳಲ್ಲಿ ಎಡಗೈ ವೇಗಿಗಳು 39 ವಿಕೆಟ್​ಗಳನ್ನು ಕಿತ್ತಿದ್ದಾರೆ. ಇಲ್ಲಿ ಲೆಫ್ಟ್ ಆರ್ಮ್​ ಬೌಲರುಗಳು ಎರಡು ಬಾರಿ 4 ವಿಕೆಟ್​ಗಳ ಗುಚ್ಛ ಪಡೆದರೆ, ನಾಲ್ಕು ಬಾರಿ 5 ವಿಕೆಟ್​ಗಳ ಗುಚ್ಛಗಳ ಸಾಧನೆ ಮಾಡಿದ್ದಾರೆ. ಇನ್ನು ಫೈನಲ್ ಪಂದ್ಯದಲ್ಲಿ ಏಕೈಕ ಎಡಗೈ ವೇಗಿಯಾಗಿ ನ್ಯೂಜಿಲೆಂಡ್​ನ ಟ್ರೆಂಟ್ ಬೌಲ್ಟ್ ಕಣಕ್ಕಿಳಿಯಲಿದ್ದಾರೆ. ಇದು ಕಿವೀಸ್ ತಂಡದ ಪಾಲಿಗೆ ವರದಾನವಾಗುವ ಸಾಧ್ಯತೆಯಿದೆ.

ರನ್​ ಸರದಾರರು:
ಇನ್ನು ಈ ಬಾರಿಯ ವಿಶ್ವಕಪ್​ನಲ್ಲಿ ರನ್ ಮಳೆ ಹರಿಸಿದವರಲ್ಲಿ ನಾಲ್ವರು ಫೈನಲ್ ಪಂದ್ಯವಾಡಲಿದ್ದಾರೆ. 549 ರನ್​ ಬಾರಿಸಿರುವ ಜೋ ರೂಟ್ ಅತ್ಯಧಿಕ ರನ್ ಬಾರಿಸಿದವರ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದ್ದರೆ, 548 ರನ್​ಗಳೊಂದಿಗೆ ನ್ಯೂಜಿಲೆಂಡ್ ನಾಯಕ ನಂತರದ ಸ್ಥಾನದಲ್ಲಿದ್ದಾರೆ. ಅದೇ ರೀತಿ ಜಾನಿ ಬೈರ್​ಸ್ಟೋ(496) 7ನೇ ಹಾಗೂ ಜೇಸನ್ ರಾಯ್ (426) 10ನೇ ಸ್ಥಾನದಲ್ಲಿದ್ದಾರೆ. ಇಲ್ಲಿ ಮೂವರು ಇಂಗ್ಲೆಂಡ್ ಬ್ಯಾಟ್ಸ್​ಮನ್​ಗಳಿರುವುದು ತಂಡದ ಬ್ಯಾಟಿಂಗ್ ಶಕ್ತಿಯನ್ನು ತೋರಿಸುತ್ತದೆ.

ಮುಖಾಮುಖಿ:
ಏಕದಿನ ಕ್ರಿಕೆಟ್​ನಲ್ಲಿ ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ 90 ಬಾರಿ ಮುಖಾಮುಖಿ ಆಗಿದ್ದು ಉಭಯ ತಂಡಗಳ ಸೋಲು ಗೆಲುವಿನ ಲೆಕ್ಕಚಾರದಲ್ಲಿ ಹೆಚ್ಚಿನ ವ್ಯತ್ಯಾಸ ಕಂಡು ಬರುತ್ತಿಲ್ಲ. ಇದರಲ್ಲಿ ನ್ಯೂಜಿಲೆಂಡ್ 43ರಲ್ಲಿ ಗೆಲುವು ಸಾಧಿಸಿದರೆ, ಇಂಗ್ಲೆಂಡ್ 41 ರಲ್ಲಿ ವಿಜಯ ಸಾಧಿಸಿದೆ. ಇನ್ನು 4 ಪಂದ್ಯಗಳು ಫಲಿತಾಂಶ ರಹಿತವಾಗಿದ್ದು, 2 ಪಂದ್ಯಗಳು ಟೈ ಆಗಿವೆ. ಹಾಗೆಯೇ ವಿಶ್ವಕಪ್​ನಲ್ಲಿ ಉಭಯ ತಂಡಗಳು 9 ಬಾರಿ ಸೆಣಸಿದ್ದು, ಇಂಗ್ಲೆಂಡ್ 4ರಲ್ಲಿ ಗೆದ್ದರೆ, ಕಿವೀಸ್ ಪಡೆ 5 ರಲ್ಲಿ ಗೆದ್ದುಬೀಗಿದೆ.

ಈ ಎಲ್ಲಾ ಅಂಕಿ ಅಂಶಗಳನ್ನು ಗಮನಿಸಿದರೆ ಉಭಯ ತಂಡಗಳು ಸಮಬಲದಿಂದ ಕೂಡಿದೆ ಎನ್ನಬಹುದು. ಹೀಗಾಗಿ ಫೈನಲ್​ ಪಂದ್ಯವು ರೋಚಕ ಹೋರಾಟಕ್ಕೆ ಕಾರಣವಾಗಲಿದೆ. ಒಟ್ಟಿನಲ್ಲಿ ಒಂದುವರೆ ತಿಂಗಳ ಕಾಯುವಿಕೆಗೆ ಭಾನುವಾರ ಉತ್ತರ ದೊರೆಯಲಿದ್ದು, ಕ್ರಿಕೆಟ್ ಕಾಶಿ ಲಾರ್ಡ್ಸ್​ನಲ್ಲಿ ಕ್ರಿಕೆಟ್ ಇತಿಹಾಸದಲ್ಲೇ ಹೊಸ ವಿಶ್ವ ಚಾಂಪಿಯನ್ ಉದಯವಾಗಲಿದೆ.
First published:July 14, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...