Ind vs Eng- ಕಳೆದ 54 ವರ್ಷದಲ್ಲೇ ದಾಖಲೆ; 350ಕ್ಕಿಂತ ಹೆಚ್ಚು ರನ್ ಟಾರ್ಗೆಟ್ ಕೊಟ್ಟಾಗೆಲ್ಲಾ ಭಾರತ ಸೋತಿದ್ದಿಲ್ಲ

Stats and Records from The Oval Match: ಭಾರತ ಟೆಸ್ಟ್ ಕ್ರಿಕೆಟ್​ನಲ್ಲಿ ತನ್ನ ಎದುರಾಳಿಗೆ 49 ಬಾರಿ 350ಕ್ಕೂ ಹೆಚ್ಚು ರನ್​ಗಳ ಗುರಿ ಕೊಟ್ಟಿದೆ. ಇದರಲ್ಲಿ ಒಮ್ಮೆಯೂ ಸೋತಿಲ್ಲ. 34 ಬಾರಿ ಗೆಲುವು ಸಾಧಿಸಿದೆ. 15 ಬಾರಿ ಪಂದ್ಯ ಡ್ರಾ ಆಗಿದೆ.

ಭಾರತ ಟೆಸ್ಟ್ ಕ್ರಿಕೆಟ್ ತಂಡ

ಭಾರತ ಟೆಸ್ಟ್ ಕ್ರಿಕೆಟ್ ತಂಡ

 • Cricketnext
 • Last Updated :
 • Share this:
  ಇಂಗ್ಲೆಂಡ್ ಮತ್ತು ಭಾರತ ನಡುವೆ ಲಂಡನ್​ನ ದಿ ಓವಲ್​ನಲ್ಲಿ ನಡೆಯುತ್ತಿರುವ ನಾಲ್ಕನೇ ಕ್ರಿಕೆಟ್ ಟೆಸ್ಟ್ ಪಂದ್ಯ ಭಾರೀ ಕುತೂಹಲಕಾರಿ ಹಂತದಲ್ಲಿದೆ. ಭಾರತ ಎರಡನೇ ಇನ್ನಿಂಗ್ಸಲ್ಲಿ 466 ರನ್ ಗಳಿಸಿ ಇಂಗ್ಲೆಂಡ್ ತಂಡಕ್ಕೆ ಗೆಲ್ಲಲು 368 ರನ್ ಗುರಿ ನೀಡಿದೆ. ಇಂಗ್ಲೆಂಡ್ ತಂಡ ನಿನ್ನೆ ನಾಲ್ಕನೇ ದಿನಾಂತ್ಯದಲ್ಲಿ ವಿಕೆಟ್ ನಷ್ಟವಿಲ್ಲದೇ 77 ರನ್ ಗಳಿಸಿದೆ. ಇಂಗ್ಲೆಂಡ್ ಕೊನೆಯ ದಿನವಿಡೀ ಆಡುವ ಅವಕಾಶ ಇದ್ದು ಗೆಲುವಿಗೆ ಇನ್ನೂ 291 ರನ್​ಗಳನ್ನ ಗಳಿಸುವ ಅಗತ್ಯ ಇದೆ.

  ಐದನೇ ಹಾಗೂ ಕೊನೆಯ ದಿನ ಪಿಚ್ ಕಳೆಗುಂದುವ ಸಾಧ್ಯತೆ ಇದ್ದು, ಅದು ಬ್ಯಾಟ್ ಮಾಡಲು ತುಸು ಕಷ್ಟಕರವಾಗಬಹುದು ಎಂಬ ಅಭಿಪ್ರಾಯಗಳಿವೆ. ಪಂದ್ಯದ ಫಲಿತಾಂಶದ ಮೂರೂ ಸಾಧ್ಯತೆಗಳು ಸಮವಾಗಿವೆ. ಭಾರತ ಮತ್ತು ಇಂಗ್ಲೆಂಡ್ ತಂಡಕ್ಕೆ ಗೆಲ್ಲಲು ಸಮಾನ ಅವಕಾಶಗಳಿವೆ. ಡ್ರಾ ಆಗುವ ಸಾಧ್ಯತೆಯೂ ದಟ್ಟವಾಗಿದೆ. ಇದೇನೇ ಇರಲಿ, ನಿನ್ನೆ ಭಾರತದ ಮ್ಯಾರಥಾನ್ ಎರಡನೇ ಇನ್ನಿಂಗ್ಸ್ ಹಲವು ದಾಖಲೆಗಳಿಗೆ ಕಾರಣವಾಗಿದೆ.

  ಇದನ್ನೂ ಓದಿ: India vs England- ಮುಖ್ಯ ಕೋಚ್ ರವಿಶಾಸ್ತ್ರಿಗೆ ಕೋವಿಡ್ ಪಾಸಿಟಿವ್- ಐಸೋಲೇಶನ್​ನಲ್ಲಿ ನಾಲ್ವರು

  ಭಾರತದ ಎರಡನೇ ಇನಿಂಗ್ಸ್ ದಾಖಲೆಗಳು:

  1) ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಭಾರತ ಎರಡನೇ ಇನ್ನಿಂಗ್ಸಲ್ಲಿ 466 ರನ್ ಗಳಿಸಿದೆ. ಇದು. ಇದು ಕಳೆದ 54 ವರ್ಷದಲ್ಲೇ ಇಂಗ್ಲೆಂಡ್ ನೆಲದಲ್ಲಿ ಭಾರತ ಸೆಕೆಂಡ್ ಇನಿಂಗ್ಸಲ್ಲಿ ಗಳಿಸಿದ ಗರಿಷ್ಠ ಮೊತ್ತವಾಗಿದೆ. 1967ರಲ್ಲಿ ಲೀಡ್ಸ್​ನಲ್ಲಿ ಭಾರತ ತನ್ನ ಎರಡನೇ ಇನ್ನಿಂಗ್ಸಲ್ಲಿ 510 ರನ್ ಗಳಿಸಿತ್ತು.

  2) ಕಳೆದ 14 ವರ್ಷದಲ್ಲೇ ಇಂಗ್ಲೆಂಡ್​ನಲ್ಲಿ ಭಾರತ ಗಳಿಸಿದ ಗರಿಷ್ಠ ಸ್ಕೋರೂ ಇದಾಗಿದೆ. 2007ರಲ್ಲಿ ಇದೇ ದಿ ಓವಲ್ ಮೈದಾನದಲ್ಲಿ ಭಾರತ 664 ರನ್ ಗಳಿಸಿತ್ತು.

  3) ಕಳೆದ 12 ವರ್ಷದಲ್ಲೇ ಟೆಸ್ಟ್ ಪಂದ್ಯದ ಸೆಕೆಂಡ್ ಇನ್ನಿಂಗ್ಸಲ್ಲಿ ಭಾರತ ಗಳಿಸಿದ ಅತ್ಯುತ್ತಮ ಸ್ಕೋರ್ ಇದಾಗಿಎ. 2009ರಲ್ಲಿ ನ್ಯೂಜಿಲೆಂಡ್​ನ ನೇಪಿಯರ್​ನಲ್ಲಿ ಭಾರತ ತನ್ನ ಎರಡನೇ ಇನ್ನಿಂಗ್ಸಲ್ಲಿ 476 ರನ್ ಪೇರಿಸಿತ್ತು.

  ಇದನ್ನೂ ಓದಿ: Suhas Yathiraj- ಎಂಜಿನಿಯರ್, ಐಎಎಸ್, ಒಲಿಂಪಿಕ್ ಪದಕ; ಹಾಸನದ ಲಾಳನಕೆರೆಯಿಂದ ಸುಹಾಸ್ ಯಶೋಗಾಥೆ

  4) ಎಂಟನೇ ಕ್ರಮಾಂಕದಲ್ಲಿ ಶಾರ್ದೂಲ್ ಠಾಕೂರ್ ಅವರು ಎರಡೂ ಇನ್ನಿಂಗ್ಸಲ್ಲಿ ಅರ್ಧಶತಕ ಗಳಿಸಿದ್ದಾರೆ. ಈ ಸಾಧನೆ ಮಾಡಿದ ವಿಶ್ವದ ಎಂಟನೇ ಆಟಗಾರರೆನಿಸಿದ್ದಾರೆ. ಹರ್ಭಜನ್ ಸಿಂಗ್ ಮತ್ತು ವೃದ್ಧಿಮಾನ್ ಸಾಹ ನಂತರ ಈ ಸಾಧನೆ ಮಾಡಿದ ಮೂರನೇ ಆಟಗಾರ ಶಾರ್ದೂಲ್ ಠಾಕೂರ್.

  5) ಭಾರತ ತನ್ನ ಎರಡನೇ ಇನ್ನಿಂಗ್ಸಲ್ಲಿ 466 ರನ್ ಗಳಿಸಲು 148.2 ಓವರ್ ಬ್ಯಾಟ್ ಮಾಡಿತು. 2009ರ ನಂತರ ಟೆಸ್ಟ್ ಕ್ರಿಕೆಟ್​ನ ಎರಡನೇ ಇನ್ನಿಂಗ್ಸಲ್ಲಿ ಭಾರತ ಎರಡನೇ ಇನ್ನಿಂಗ್ಸಲ್ಲಿ ಅತೀ ಹೆಚ್ಚು ಓವರ್ ಆಡಿದ್ದು ಇದೇ ಮೊದಲು. 2009ರಲ್ಲಿ ನ್ಯೂಜಿಲೆಂಡ್ ವಿರುದ್ಧದ ಪಂದ್ಯದ ಎರಡನೇ ಇನ್ನಿಂಗ್ಸಲ್ಲಿ ಭಾರತ 180 ಓವರ್ ಆಡಿದ್ದು ಈಗಲೂ ದಾಖಲೆಯಾಗಿ ಉಳಿದುಕೊಂಡಿದೆ.

  ಇದನ್ನೂ ಓದಿ: Cricketer Love story: ವಿರಾಟ್​- ಅನುಷ್ಕಾ ಹೊರತಾಗಿಯೂ ಸಿಕ್ಕಾಪಟ್ಟೆ ಇಂಟರೆಸ್ಟಿಂಗ್ ​ ಆಗಿದೆ ಈ ಕ್ರಿಕೆಟಿಗರ ಲವ್​ ಸ್ಟೋರಿ

  6) ಕಳೆದ 11 ವರ್ಷದಲ್ಲಿ ಭಾರತದ ಇನ್ನಿಂಗ್ಸಲ್ಲಿ ಟಾಪ್ 4 ಆಟಗಾರರೆಲ್ಲರೂ 40ಕ್ಕಿಂತ ಹೆಚ್ಚು ರನ್ ಗಳಿಸಿದ್ದು ಇದೇ ಮೊದಲು. ಏಷ್ಯಾದಿಂದ ಹೊರಗಿನ ಪಿಚ್​ಗಳಲ್ಲಿ ಇದೂವರೆಗೂ ಭಾರತದಿಂದ ನಾಲ್ಕು ಬಾರಿ ಮಾತ್ರ ಇಂಥ ಸಾಧನೆ ಬಂದಿದೆ.

  7) ಎದುರಾಳಿಗೆ 350ಕ್ಕಿಂತ ಹೆಚ್ಚು ರನ್ ಗುರಿ ನೀಡಿದಾಗೆಲ್ಲಾ ಭಾರತ ಸೋತೇ ಇಲ್ಲ. ಟೆಸ್ಟ್ ಕ್ರಿಕೆಟ್​ನಲ್ಲಿ ಭಾರತ ಇದೂವರೆಗೆ 49 ಬಾರಿ ಎದುರಾಳಿಗಳಿಗೆ 350ಕ್ಕಿಂತ ಹೆಚ್ಚು ರನ್ ಟಾರ್ಗೆಟ್ ನೀಡಿದೆ. ಅದರಲ್ಲಿ 34 ಬಾರಿ ಗೆದ್ದರೆ 15 ಬಾರಿ ಡ್ರಾ ಆಗಿದೆ.
  Published by:Vijayasarthy SN
  First published: