HOME » NEWS » Sports » CRICKET ENGLAND VS BANGLADESH LIVE SCORE WORLD CUP 2019 ROY BUTTLER FIRE ENGLAND TO 386

Cricket World Cup 2019, ENG vs BAN: ಆಂಗ್ಲರ ವಿರುದ್ಧ ಮಂಕಾದ ಬಾಂಗ್ಲಾ ಹುಲಿಗಳು: 106 ರನ್​ಗಳ ಭರ್ಜರಿ ಜಯ

ಈ ವೇಳೆ 48 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ ಬೈರ್​ಸ್ಟೋ ಮುಶ್ರಫೆ ಎಸೆತದಲ್ಲಿ ವಿಕೆಟ್ ಒಪ್ಪಿಸಿ ಮೊದಲಿಗರಾಗಿ ಹೊರ ನಡೆದರು.

Harshith AS | news18
Updated:June 8, 2019, 11:44 PM IST
Cricket World Cup 2019, ENG vs BAN: ಆಂಗ್ಲರ ವಿರುದ್ಧ ಮಂಕಾದ ಬಾಂಗ್ಲಾ ಹುಲಿಗಳು: 106 ರನ್​ಗಳ ಭರ್ಜರಿ ಜಯ
ಜೇಸನ್ ರಾಯ್
  • News18
  • Last Updated: June 8, 2019, 11:44 PM IST
  • Share this:
ಕಾರ್ಡಿಫ್: ವಿಶ್ವಕಪ್‌ನ 12ನೇ ಪಂದ್ಯದಲ್ಲಿ ಬಾಂಗ್ಲದೇಶ ವಿರುದ್ಧ ಇಂಗ್ಲೆಂಡ್​ ತಂಡ 106 ರನ್​ಗಳ  ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಗೆಲುವಿನ ಹಾದಿಗೆ ಮತ್ತೆ ಮರಳಿದೆ. ಕ್ಯಾಪ್ಟನ್​​ ಇಯಾನ್​ ಮೋರ್ಗನ್ ನಾಯಕತ್ವದಲ್ಲಿ ಆಡಿರುವ ಮೂರು ಪಂದ್ಯಗಳ ಪೈಕಿ ಎರಡರಲ್ಲಿ ಗೆದ್ದು ನಾಲ್ಕು ಅಂಕ ಸಂಪಾದಿಸಿದೆ. ಅತ್ತ ಬಾಂಗ್ಲಾದೇಶ ಒಂದು ಪಂದ್ಯದಲ್ಲಿ ಗೆಲುವಿನ ನಗೆ ಬೀರಿದ್ದು, ಸತತ ಎರಡನೇ ಸೋಲು ಅನುಭವಿಸಿದೆ. 

ಟಾಸ್ ಸೋತರೂ ಬ್ಯಾಟಿಂಗ್ ಭಾಗ್ಯ ದೊರೆತ ಮೋರ್ಗನ್ ಪಡೆ ಜೇಸನ್ ರಾಯ್ ಅವರ ಭರ್ಜರಿ 153 ರನ್​ಗಳ ನೆರವಿನಿಂದ ನಿಗದಿತ 50 ಓವರ್​ಗಳಲ್ಲಿ 386 ರನ್​ಗಳಿಸಿತ್ತು.

ಬಾಂಗ್ಲಾ ನಾಯಕ ಮುಶ್ರಫೆ ನಿರ್ಧಾರದಂತೆ ಮೊದಲು ಬ್ಯಾಟಿಂಗ್​​ ಆಯ್ಕೆ ಮಾಡಿಕೊಂಡ​ಇಂಗ್ಲೆಂಡ್​ಗೆ ಜೇಸನ್ ರಾಯ್ ಹಾಗೂ ಜಾನಿ ಬೈರ್‌ಸ್ಟೋ ಉತ್ತಮ ಆರಂಭ ನೀಡಿದರು. ಆರಂಭದಿಂದಲೇ ತಾಳ್ಮೆಯಿಂದ ಬ್ಯಾಟ್ ಬೀಸಿದ ಈ ಜೋಡಿ ಹತ್ತು ಓವರ್​ ಮುಗಿಯುತ್ತಿದ್ದಂತೆ ಆರ್ಭಟದ ಆಟ ಶುರು ಮಾಡಿತು. ಇದರ ಪರಿಣಾಮ 19.1 ಓವರ್​ಗಳಲ್ಲಿ 128 ರನ್​ಗಳ ಜೊತೆಯಾಟ ಆಡಿದರು.

ಅತ್ತ 48 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ ಬೈರ್​ಸ್ಟೋ ಮುಶ್ರಫೆ ಎಸೆತದಲ್ಲಿ ವಿಕೆಟ್ ಒಪ್ಪಿಸಿ ಮೊದಲಿಗರಾಗಿ ಹೊರ ನಡೆದರೇ, ಇತ್ತ ತಮ್ಮ ಅನುಭವದ ಧಾರೆಯೆರೆದು ಬ್ಯಾಟ್ ಬೀಸಿದ ರಾಯ್ ಮೈದಾನದ ಮೂಲೆ ಮೂಲೆಗೂ ಚೆಂಡನ್ನು ತಲುಪಿಸಿದರು. ತವರಿನ ಬೆಂಬಲವನ್ನು ಸಂಪೂರ್ಣವಾಗಿ ಬಳಸಿಕೊಂಡ ರಾಯ್ 92 ಎಸೆತಗಳಲ್ಲಿ ಏಕದಿನ ಕ್ರಿಕೆಟ್​ನ 9ನೇ ಶತಕ ಸಿಡಿಸಿ ಬ್ಯಾಟ್ ಮೇಲೆತ್ತಿ ಸಂಭ್ರಮಿಸಿದರು.

ಶತಕದ ಬಳಿಕ ರನ್​ ವೇಗ ಹೆಚ್ಚಿಸಿದ ರಾಯ್ ಬಾಂಗ್ಲಾ ಬೌಲರ್​ಗಳನ್ನು ಮನಸೋ ಇಚ್ಛೆ ದಂಡಿಸಲು ಪ್ರಾರಂಭಿಸಿದರು. ಮತ್ತೊಂದೆಡೆ ಕ್ರೀಸ್​ನಲ್ಲಿ ನೆಲೆಯೂರುವ ಸೂಚನೆ ನೀಡಿದ್ದ ಜೋ ರೂಟ್ (21) ವಿಕೆಟ್ ಪೆವಿಲಿಯನ್ ಕಡೆ ಹೆಜ್ಜೆ ಹಾಕಿದರು. ಆದರೆ ಇದ್ಯಾವುದಕ್ಕೂ ತನಗೂ ಸಂಬಂಧವಿಲ್ಲ ಎಂಬಂತೆ ಆಕ್ರಮಣಕಾರಿ ಆಟದತ್ತ ಒಲವು ತೋರಿದ ರಾಯ್ ಐದು ಸಿಕ್ಸರ್ ಹಾಗೂ 14 ಬೌಂಡರಿ​ ಒಳಗೊಂಡ 153 ರನ್​ಗಳಿಸಿದರು.ಈ ವೇಳೆ ಮೆಹದಿ ಹಸನ್ ಅವರ ಮೂರು ಎಸೆತಗಳನ್ನು ಸಿಕ್ಸರ್​ಗಟ್ಟಿದ್ದ ಜೇಸನ್ ರಾಯ್ ಮತ್ತೊಂದು ಸಿಕ್ಸ್ ಸಿಡಿಸುವ ತವಕದಲ್ಲಿ ಕ್ಯಾಚಿತ್ತು ತನ್ನ ಆರ್ಭಟ ನಿಲ್ಲಿಸಿದರು. ಈ ಸಂದರ್ಭದಲ್ಲಿ ಇಂಗ್ಲೆಂಡ್ ತಂಡದ ಮೊತ್ತ 3 ವಿಕೆಟ್ ನಷ್ಟಕ್ಕೆ 275 ರನ್​ಗಳು. ಕೊನೆಯ ಹತ್ತು ಓವರ್​ಗಳಲ್ಲಿ ಬಿರುಸಿನ ಆಟಕ್ಕೆ ಕೈ ಹಾಕಿದ ಜೋಸ್ ಬಟ್ಲರ್ ಕೇವಲ 33 ಎಸೆತಗಳಲ್ಲೇ ಅರ್ಧಶತಕ ಬಾರಿಸಿದರು.

ಇನ್ನು ಬಟ್ಲರ್ ಜೊತೆಗೂಡಿದ ನಾಯಕ ಇಯಾನ್ ಮಾರ್ಗನ್ 35 ರನ್‌ಗಳ ಉಪಯುಕ್ತ ಕಾಣಿಕೆ ನೀಡಿದರು. ಕೊನೆಯ 17 ಎಸೆತಗಳಲ್ಲಿ 45 ರನ್‌ಗಳ ಜತೆಯಾಟ ನೀಡಿದ ಕ್ರಿಸ್ ವೋಕ್ಸ್ ಹಾಗೂ ಲಯಮ್ ಪ್ಲಂಕೆಟ್ ಇಂಗ್ಲೆಂಡ್ ತಂಡದ ಮೊತ್ತವನ್ನು 6 ವಿಕೆಟ್​ ನಷ್ಟಕ್ಕೆ 386 ರನ್​ಗಳಿಗೆ ತಂದು ನಿಲ್ಲಿಸಿದರು. ಇನ್ನು ಬಾಂಗ್ಲಾ ಪರ ಮೆಹದಿ ಹಸನ್ ಹತ್ತು ಓವರ್​ಗಳಲ್ಲಿ 67 ರನ್​ಗಳಿಗೆ 2 ವಿಕೆಟ್ ಪಡೆದರು. ಉಳಿದಂತೆ ನಾಯಕ ಸೇರಿದಂತೆ ಬಾಂಗ್ಲಾದ ಎಲ್ಲಾ ಬೌಲರ್​ಗಳು ದುಬಾರಿ ಎನಿಸಿದರು.

2ನೇ ಇನ್ನಿಂಗ್ಸ್​ ನಂತರ ಬ್ಯಾಟಿಂಗ್​ ಆರಂಭಿಸಿದ ಬಾಂಗ್ಲಾದೇಶ ಪರ ತಮೀಮ್​ ಇಕ್ಬಾಕ್​ ಮತ್ತು ಸೌಮ್ಯ ಸರ್ಕಾರ್​​ ಮೈದಾನಕ್ಕೆ ಇಳಿದರು. ಆರಂಭದಲ್ಲೇ ಎಡವಿದ ಇವರಿಬ್ಬರ ವಿಕೆಟ್​ ಕಳೆದುಕೊಂಡು ತಂಡ ಬಡವಾಯಿತು. ನಂತರ ಕ್ರೀಸ್​ಗೆ ಬಂದ ಶಕೀಬ್​ ಅಲ್​ ಹಸನ್ ಏಕಾಂಗಿ ಹೋರಾಟದ ಮೂಲಕ ಶತಕ ಬಾರಿಸಿದರು.​ ಆದರೆ ಬೆನ್​​ ಸ್ಟೋಕ್​ ಎಸೆತಕ್ಕೆ ವಿಕೆಟ್​ ಒಪ್ಪಿಸಿ ಪೆವಿಲಿಯನ್​ ಸೇರಿದರು.

ಅದಾದ ನಂತರ ಕಣಕ್ಕಿಳಿದ ಮುಷ್ಫಿಕರ್ ರಹೀಮ್ 44 ರನ್​ ಪೇರಿಸುವ ಮೂಲಕ ಪ್ಲಂಕೆಟ್​​ ಎಸೆತಕ್ಕೆ ವಿಕೆಟ್​ ಕಳೆದುಕೊಂಡರು. ಬಳಿಕ ಬಂದ ಬ್ಯಾಟ್ಸ್​ಮನ್​ ಮೊಹಮ್ಮದ್​ ಮಿಥುನ್​​ ಶೂನ್ಯ ಸಂಪಾದಿಸಿದರೆ,  ಮೊಹಮ್ಮದುಲ್ಲಾ 28,  ಮೊಸಡೆಕ್​ ಹುಸೇನ್​ 26 ರನ್​ ಕಲೆಹಾಕಿ ಬ್ಯಾಟ್ ಕೆಳಗಿತ್ತರು.

ಅಂತಿಮವಾಗಿ ಬಾಂಗ್ಲಾದೇಶ ಈ ಬಾರಿಯು ಬ್ಯಾಟಿಂಗ್​ ಪೈಫಲ್ಯದಿಂದ ಸೋಲಿನತ್ತ ಸರಿದಿದೆ.  ಶಕಿಬ್​ ಅಲ್​ ಹಸನ್​ ಎಕಾಂಗಿ ಹೋರಾಟದಿಂದ ತಂಡಕ್ಕೆ ನೆರವಾಗುತ್ತಿರುವುದು ಬಿಟ್ಟರೆ, ಉಳಿದ ಬ್ಯಾಟ್ಸಮನ್​ಗಳು ಪುಟಿದೆಳಬೇಕಿದೆ.

 

 

ಇದನ್ನೂ ಓದಿ: ಮಂಚ ಹಂಚಿಕೊಂಡರೆ ವಿಜಯ್ ದೇವರಕೊಂಡ ಚಿತ್ರದಲ್ಲಿ ಅವಕಾಶ: ಹೊಸ ಬಾಂಬ್ ಸಿಡಿಸಿದ ನಟಿ..!

First published: June 8, 2019, 7:27 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories